ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Jantar Mantar at Kochi: ಬ್ರೇಕ್‌ ಬಳಿಕ ಮತ್ತೆ ಎಸ್‌ಐಆರ್‌ ವಿರುದ್ಧ ಹೋರಾಟಕ್ಕಿಳಿದ ಸಿಜೆಪಿ; ನವೆಂಬರ್‌ 7ರಂದು ಕೊಚ್ಚಿಯಲ್ಲಿ ಪ್ರತಿಭಟನೆ

Cockroach Janta Party: ಎಸ್‌ಐಆರ್‌ ವಿರುದ್ಧದ ಹೋರಾಟವನ್ನು ದೆಹಲಿ ಬಳಿಕ ಇದೀಗ ಕೇರಳಂನಲ್ಲಿ ಆಯೋಜಿಸಲು ಕಾಕ್ರೋಚ್‌ ಜನತಾ ಪಾರ್ಟಿ ಸಜ್ಜಾಗಿದೆ. ನವೆಂಬರ್‌ 7ರಂದು ಕೇರಳಂನ ಕೊಚ್ಚಿಯಲ್ಲಿ ಎಸ್‌ಐಆರ್‌ ವಿರೋಧಿಸಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ದೆಹಲಿಯಿಂದ ಕೊಚ್ಚಿಗೆ ಪ್ರತಿಭಟನೆ ಸ್ಥಳಾಂತರಿಸಿದ ಸಿಜೆಪಿ

ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 5, 2026 9:16 PM

ತಿರುವನಂತಪುರಂ, ನ. 5: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆ ವಿಫಲವಾದ ಬಳಿಕ ಕೆಲವು ದಿನಗಳಿಂದ ಸುಮ್ಮನಾಗಿದ್ದ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party-CJP) ಇದೀಗ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಸಜ್ಜಾಗಿದೆ. ಅಚ್ಚರಿ ಎಂದರೆ ಈ ಬಾರಿ ತನ್ನ ಹೋರಾಟವನ್ನು ದೆಹಲಿಯಿಂದ ಕೇರಳಂಗೆ ಸ್ಥಳಾಂತರಿಸಿದೆ. ''ನವೆಂಬರ್‌ 7ರಂದು ಕೇರಳಂನ ಕೊಚ್ಚಿಯಲ್ಲಿ ಎಸ್‌ಐಆರ್‌ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜೇಂದ್ರ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆʼʼ ಎಂದು ಸಿಜೆಪಿ ಎಕ್ಸ್‌ನಲ್ಲಿ ತಿಳಿಸಿದೆ. ಜತೆಗೆ ಈ ಹೋರಾಟವನ್ನು ಜಂತರ್‌ ಮಂತರ್‌ ಎಟ್‌ ಕೊಚ್ಚಿ (Jantar Mantar at Kochi) ಎಂದು ಕರೆದಿದೆ.

''ಪ್ರಜಾಪ್ರಭುತ್ವ ಉಳಿಸಿ. ಎಸ್‌ಐಆರ್‌ ರದ್ದುಪಡಿಸಿ. ನವೆಂಬರ್‌ 7ರ ಸಂಜೆ 4 ಗಂಟೆಗೆ ನಮ್ಮ ಜತೆ ಕೊಚ್ಚಿಯ ರಾಜೇಂದ್ರ ಮೈದಾನದಲ್ಲಿ ಕೈಜೋಡಿಸಿʼʼ ಎಂದು ಸಿಜೆಪಿ ಕರೆ ನೀಡಿದೆ. ಸಿಜೆಪಿ ಸ್ಥಾಪಕ ಅಭಿಜಿತ್‌ ದೀಪ್ಕೆ ಕೂಡ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಸಿಜೆಪಿ ನಾಯಕರಾದ ವಿಜಯ್‌ ಮಲ್ಲಂಗಿ ಮತ್ತು ಆರ್ಫೀನ್‌ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ.

ನವೆಂಬರ್‌ 7ರ ಪ್ರತಿಭಟನೆ ಬಗ್ಗೆ ಸಿಜೆಪಿ ಎಕ್ಸ್‌ ಪೋಸ್ಟ್:‌



ದೆಹಲಿಯಲ್ಲಿ ನಡೆದ ಪ್ರತಿಭಟನೆ ಬಳಿಕ ಇದೇ ಮೊದಲ ಬಾರಿ ಸಿಜೆಪಿ ಬೃಹತ್‌ ಹೋರಾಟಕ್ಕೆ ಕರೆ ನೀಡಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಅಕ್ಟೋಬರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಅಭಿಜಿತ್‌ ದೀಪ್ಕೆ, ಅಶುತೋಷ್‌ ರಾಂಕಾ ಮತ್ತು ಸೌರವ್‌ ದಾಸ್‌ ಸೇರಿ ಸಿಜೆಪಿಯ ಹಲವು ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು.

ಸೌರವ್ ದಾಸ್, ಅಶುತೋಷ್ ರಂಕಾಗೆ ಮತ್ತೊಂದು ಸಂಕಷ್ಟ: ದೆಹಲಿ ಕ್ರೈಮ್ ಬ್ರಾಂಚ್‌ನಿಂದ ಸಮನ್ಸ್ ಜಾರಿ

ಸದ್ಯ ಕೇಂದ್ರ ಸರ್ಕಾರ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಘೋಷಿಸಿದೆ. ಕಳೆದ ತಿಂಗಳು ಈ ಆದೇಶವನ್ನು ಉಲ್ಲಂಘಿಸಿ ಜಂತರ್ ಮಂತರ್‌ ಪ್ರವೇಶಿಸಿದ ದಾಸ್‌ ಮತ್ತು ರಾಂಕಾ ಅವರನ್ನು ಬಂಧಿಸಲಾಗಿತ್ತು. 1 ವಾರ ಅವರನ್ನು ಜೈಲಿನಲ್ಲಿರಿಸಲಾಗಿತ್ತು.

ಸಿಜೆಪಿ ನಾಯಕರ ನಡೆ ಪ್ರಶ್ನಿಸಿದ್ದ ಕೋರ್ಟ್‌

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಿಷೇಧಿಸಿದ ಬಳಿಕವೂ ಅಲ್ಲಿಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ದೆಹಲಿ ಹೈಕೋರ್ಟ್ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತ್ತು.ಅನುಮತಿಯಿಲ್ಲದೆ ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಾಯಕರ ವರ್ತನೆಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಅರ್ಜಿದಾರರ ಪರ ವಕೀಲ ಅಭಿಕ್ ಚಿಮ್ನಿ ಅವರನ್ನು ಉದ್ದೇಶಿಸಿ, ಬ್ಯಾರಿಕೇಡ್‌ಗಳನ್ನು ಮುರಿದಾಗ ಇತರರೂ ಗುಂಪಾಗಿ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿತ್ತು.

ಬ್ಯಾರಿಕೇಡ್‌ ಮುರಿಯುವುದೇಕೆ? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತರಾಟೆ

ವಿದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಘಟನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಪ್ರತಿಭಟನೆ ಶಾಂತಿಯುತವಾಗಿರಬಹುದು ಎಂದು ಸಂಘಟಕರು ಹೇಳಿದರೂ, ಅನಗತ್ಯ ವ್ಯಕ್ತಿಗಳು ಗುಂಪಿಗೆ ಸೇರಿ ಪರಿಸ್ಥಿತಿಯನ್ನು ಹದಗೆಡಿಸುವ ಸಾಧ್ಯತೆಯಿರುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.