ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

Crazy Star Ravichandran: . ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ ಎಳೆದಿದ್ದರು. ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು.ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ!

ಮುಂಬೈ ಬೆಡಗಿ ಬಿಂದಿಯಾ -

Yashaswi Devadiga
Yashaswi Devadiga May 28, 2026 10:27 AM

ʻಹಳ್ಳಿಮೇಷ್ಟ್ರು' ಚಿತ್ರದಲ್ಲಿ ರವಿಚಂದ್ರನ್ ಜೋಡಿಯಾಗಿ ಮುಂಬೈ ಬೆಡಗಿ ಬಿಂದಿಯಾ (Bindiya Actress) ನಟಿಸಿದ್ದರು. ಆದರೆ ಸಿನಿಮಾ ಮುಗಿಯುವ ವೇಳೆಗೆ ಕ್ರೇಜಿಸ್ಟಾರ್ ಮೇಲೆ ಆಕೆ ಗಂಭೀರ ಆರೋಪ ಮಾಡಿದ್ದರು. ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್‌ಗೆ (Court) ಎಳೆದಿದ್ದರು. ಬಿಂದಿಯಾ ವಿರುದ್ಧ ರವಿಚಂದ್ರನ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು.ಕೋರ್ಟ್‌ನಲ್ಲಿ ಬಿಂದಿಯಾ ಕ್ಷಮೆ ಕೇಳಿದ ಬಳಿಕ ವಿವಾದ ಬಗೆಹರಿದಿತ್ತು. ಈಗಲೂ ವಿವಾದವನ್ನ ನೆನೆದು ಕಣ್ಣೀರಿಟ್ಟು ಬಿಂದಿಯಾ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಜನ ಇಷ್ಟ ಪಟ್ಟರು

ನಟಿ ಮಾತನಾಡಿ, ʻನನಗೆ ದಕ್ಷಿಣದ ಸಿನಿಮಾಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ರವಿಚಂದ್ರನ್‌ ಅವರ ಕುಟುಂಬದ ಬಗ್ಗೆಯೂ ನನಗೆ ಗೊತ್ತರಲಿಲ್ಲ. ನನ್ನ ಜಾನ್‌ ತೆರೆ ನಾಮ್‌ ಚಿತ್ರ ಹಿಟ್‌ ಆದಾಗ, ರವಿಚಂದ್ರನ್‌ ಅವರು ಹಳ್ಳಿ ಮೇಷ್ಟ್ರು ಚಿತ್ರಕ್ಕೆ ನಾಯಕಿಯ ಆಯ್ಕೆ ವಿಚಾರಕ್ಕೆ ಮುಂಬೈಗೆ ಬಂದಿದ್ದರು. ಅವರು ಸಾಕಷ್ಟು ನಟಿಯರನ್ನು ಭೇಟಿ ಮಾಡಿದ್ದರು. ಅವರ ಮ್ಯಾನೇಜರ್‌ ಬಂದು ಈ ಸಿನಿಮಾಗೆ ನಟಿಸುತ್ತೀರಾ ಎಂದು ಕೇಳಿದ್ದರು. ನನಗೆ ಭಾಷೆ ಗೊತ್ತಿಲ್ಲ ಎಂದಿದ್ದೆ.ನಾನು ಆಗ ತುಂಬಾ ಸರಳವಾಗಿ ರೆಡಿ ಆಗಿದ್ದೆ, ನನಗೆ ಹೆಚ್ಚು ಅಲಂಕಾರ ಮಾಡಿಕೊಳ್ಳೋದು ಅಷ್ಟಾಗಿ ಇಷ್ಟ ಆಗುತ್ತಿರಲಿಲ್ಲ. ಬಳಿಕ ಸಿನಿಮಾ ಕೂಡ ಹಿಟ್‌ ಆಯ್ತು. ಜನ ಇಷ್ಟ ಪಟ್ಟರುʼ ಎಂದರು.

ಇದನ್ನೂ ಓದಿ: Sushmita Sen: ಇದೊಂದು ಕಾರಣಕ್ಕೆ ನನ್ನ ಮ್ಯಾನೇಜರ್ ಓಡಿಹೋದ; ಸುಶ್ಮಿತಾ ಸೇನ್ ಮುಕ್ತ ಮಾತು

ಕೋರ್ಟ್‌ ನಲ್ಲಿ ಕೇಸ್‌ ಆಯ್ತು

ರವಿ ಸರ್‌ ಅವರಿಗೆ ನನ್ನ ಕೆಲಸದ ಬಗ್ಗೆ ತುಂಬಾ ಗೌರವ ಇತ್ತು. ಆದರೆ ಒಂದು ಕಹಿ ಘಟನೆ ನಡೆಯಿತು. ಒಬ್ಬ ಪತ್ರಕರ್ತೆ ಮ್ಯಾಗಜೀನ್‌ ಅಲ್ಲಿ ಏನೋ ಬರೆದುಬಿಟ್ಲು. ನಾನು ಏನೋ ಹೇಳ್ದೆ, ಅದು ಮತ್ತೆನೋ ಆಗಿ ಸುದ್ದಿ ಆಗಿಬಿಡ್ತು. ದೂರು ದಾಖಲಾಯಿತು. ಬಹಳ ಬೇಸರವಾಯಿತು" ಎಂದಿದ್ದಾರೆ.ಅದು ಕೋರ್ಟ್‌ ನಲ್ಲಿ ಕೇಸ್‌ ಆಯ್ತು. ನಾನು ಈ ಬಗ್ಗೆ ರವಿ ಸರ್‌ ಅವರಿಗೆ ಕ್ಷಮೆ ಕೇಳುತ್ತೇನೆ. ನಾನು ಹೇಳಿದ್ದೇ ಒಂದು ಪತ್ರಕರ್ತೆ ಬರೆದಿದ್ದೇ ಇನ್ನೊಂದು. ಅದು ಕೇಸ್‌ ತುಂಬಾ ದೊಡ್ಡದಾಯ್ತು. ಅದರ ಅಂತ್ಯ ತುಂಬಾ ಕೆಟ್ಟದ್ದಾಗಿತ್ತು.

ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ ನಟಿಸೋಕೆ ಸಿದ್ಧ. ಯಾವುದೇ ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್. ಆ ಘಟನೆ ಬಳಿಕ ರವಿಚಂದ್ರನ್ ಅವರೊಟ್ಟಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೋರ್ಟ್‌ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು, ಬುದ್ದಿ ಇಲ್ದೆ ನಡೆದುಕೊಂಡಿದ್ದೆ. ಪ್ರಬುದ್ಧತೆ ಇರ್ಲಿಲ್ಲ" ಎಂದಿದ್ದಾರೆ.

ಕೊನೆಗೆ ರವಿ ಸರ್ ಕೇಸ್ ಗೆದ್ರು, ಬಳಿಕ ವಾಪಸ್ ಪಡೆದ್ರು. ಎಲ್ಲಾ ಇತ್ಯರ್ಥವಾಗಿತ್ತು. ಕಾರಣ ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ನಾನು ಹೇಳಿದ್ದು ಬೇರೆ, ಮ್ಯಾಗಜೀನ್‌ನಲ್ಲಿ ಬಂದಿದ್ದು ಬೇರೆ. ಅದು ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಗಿತ್ತು.

ಇದನ್ನೂ ಓದಿ: Shamita Shetty: ಮದುವೆಯ ಬಗ್ಗೆ ಟೀಕಿಸಿದ ಟ್ರೋಲರ್‌ಗಳಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಕೋರ್ಟ್‌ನಲ್ಲಿ ಅವರನ್ನು ನೋಡಿದಾಗ ಸಂಕಟವಾಯಿತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡ್ಲಿಲ್ಲ ಎಂದು ಹೇಳಿ ಬಿಂದಿಯಾ ಕಣ್ಣೀರು ಹಾಕಿದ್ದಾರೆ.