Anchor Anushree: ಜೀ ಕನ್ನಡ ವಾಹಿನಿಯಿಂದ ಮಡಿಲು ತುಂಬುವ ಶಾಸ್ತ್ರ- ತಾಳಿ ಹಿಡಿದು ಅನುಶ್ರೀ ಭಾವುಕ!
Anchor Anushree: ಅನುಶ್ರೀ ಅವರು ತಮ್ಮ ಬಹುವರ್ಷದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರಿ ಮದುವೆಯಾದ ಬೆನ್ನಲ್ಲೇ ಇದೀಗ ಮತ್ತೇ ತಮ್ಮ ಕೆಲಸದಲ್ಲಿ ಬ್ಯುಸಿ ಯಾಗಿದ್ದು ಮತ್ತೆ ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಜೀ ಕನ್ನಡ ಮಹಾನಟಿ ವೇದಿಕೆಯಲ್ಲೂ ಕೂಡ ಅನುಶ್ರೀ ಮದುವೆ ಸಂಭ್ರಮಾಚರಣೆ ಜೋರಾಗಿದ್ದು ಜೀ ಕನ್ನಡ ವಾಹಿನಿ ತವರು ಮನೆಯ ಪ್ರೀತಿ ನೀಡಿದೆ. ಈ ಕಾರ್ಯಕ್ರಮದ ಪ್ರೋಮೋ ಕೂಡ ಇದೀಗ ಬಿಡುಗಡೆಯಾಗಿದೆ.

ಆ್ಯಂಕರ್ ಅನುಶ್ರೀ -

ಬೆಂಗಳೂರು: ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಮದುವೆ (Anchor Anushree) ಈಗಾಗಲೇ ನೆರವೇರಿದೆ. ‘ಅನುಶ್ರೀ ಮದುವೆ ಯಾವಾಗ?’ ಅಂತ ಫ್ಯಾನ್ಸ್ ಪದೇ ಪದೇ ಪ್ರಶ್ನೆ ಮಾಡ್ತಾ ಇದ್ರು. ಇದಕ್ಕೆಲ್ಲ ಕೊನೆಗೂ ಅನುಶ್ರೀ ಉತ್ತರ ನೀಡಿದ್ದಾರೆ. ಅನುಶ್ರೀ ಅವರು ತಮ್ಮ ಬಹುವರ್ಷದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಮದುವೆಯಾದ ಬೆನ್ನಲ್ಲೇ ಇದೀಗ ಮತ್ತೇ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದು ಮತ್ತೆ ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಜೀ ಕನ್ನಡ ಮಹಾನಟಿ ವೇದಿಕೆಯಲ್ಲೂ ಕೂಡ ಅನುಶ್ರೀ ಮದುವೆ ಸಂಭ್ರಮಾಚರಣೆ ಜೋರಾಗಿದ್ದು ಜೀ ಕನ್ನಡ ವಾಹಿನಿ ತವರು ಮನೆಯ ಪ್ರೀತಿ ನೀಡಿದೆ. ಈ ಕಾರ್ಯಕ್ರಮದ ಪ್ರೋಮೋ ಕೂಡ ಇದೀಗ ಬಿಡುಗಡೆಯಾಗಿದೆ.
ಈ ಹಿಂದೆ ಸಾಕಷ್ಟು ಭಾರಿ ಅನುಶ್ರೀ ಮದುವೆ ವದಂತಿ ಹರಿದಾಡಿತ್ತು. ಅದರಲ್ಲೂ ಅನುಶ್ರೀ ವಯಸ್ಸಿನ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾ ಇದ್ದು ಕೊನೆಗೂ ಅನುಶ್ರಿ ಕೊರಳಿಗೆ ಮಾಂಗಲ್ಯ ಸರ ಬಿದ್ದಿದೆ. ಸದ್ಯ ಮದುವೆಯಾದ ಅನುಶ್ರೀಯನ್ನು ಜೀ ಕನ್ನಡದ ಮಹಾ ನಟಿ ವೇದಿಕೆ ಅದ್ದೂರಿಯಾಗಿ ಸ್ವಾಗತಿಸಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಈಗ ಬಿಡುಗಡೆ ಯಾಗಿದ್ದು ಈ ಪ್ರೋಮೋ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ವೀಕೆಂಡ್ ಗೆ ಈ ಎಪಿಸೋಡ್ ಪ್ರಸಾರವಾಗಲಿದೆ.
ಇತ್ತೀಚೆಗೆ ಜೀ ಕನ್ನಡ ಸಿಬ್ಬಂದಿ ಹಾಗೂ ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಅನುಶ್ರೀ ಮದುವೆ ಊಟ ಕೂಡ ಹಾಕಿಸಿದ್ದರು. ಇದರ ಬೆನ್ನಲ್ಲೇ ಅನುಶ್ರೀ ಮಹಾನಟಿ ವೇದಿಕೆಗೆ ಎಂಟ್ರಿ ಆಗುತ್ತಿದ್ದಂತೆ. ರಮೇಶ್ ಅರವಿಂದ್, ತಾರಾ, ತರುಣ್ ಸುಧೀರ್, ಪ್ರೇಮಾ, ಶರಣ್, ನಿಶ್ವಿಕಾ ನಾಯ್ಡು ಎಲ್ಲರೂ ನಟಿಗೆ ಶುಭಾಶಯ ತಿಳಿಸಿದ್ದಾರೆ. ತವರು ಮನೆ ಮಡಿಲು ತುಂಬಿಸಬೇಕು ಎಂದು ತಾರಾ ಮಡಿಲು ತುಂಬಿಸುವ ಶಾಸ್ತ್ರ ಮಾಡಿದ್ದಾರೆ. ಮದುವೆ ಬಗ್ಗೆ ಅನುಭವ ಹಂಚಿಕೊಂಡ ಅನುಶ್ರಿ ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ, ಆ ಜೀವನಕ್ಕೆ ಅರ್ಥ ಕೊಟ್ಟಿದ್ದು ರೋಷನ್, ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ಕೊರಳಿಗೆ ಬಿದ್ದಿದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.
ಇದನ್ನು ಓದಿ:Anushree: ‘ಬೇಗ ಮಗು ಮಾಡಿಕೊಳ್ಳಿ’ ಎಂದ ಸಮೀರ್ ಆಚಾರ್ಯ ಪತ್ನಿಗೆ ಅನುಶ್ರೀ ಹೇಳಿದ್ದೇನು ನೋಡಿ
ಸದ್ಯ ಈ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಅನುಶ್ರಿ ಫ್ಯಾನ್ಸ್ ಶುಭಾಶಯಗಳ ಸುರಿಮಳೆ ಗೈದಿದ್ದಾರೆ. ಮದುವೆಯಾದ ಒಂದೇ ವಾರಕ್ಕೆ ಮತ್ತೆ ತಮ್ಮ ನಿರೂಪಣೆ ಕಾರ್ಯಕ್ಕೆ ಅನುಶ್ರೀ ವಾಪಸ್ಸು ಆಗಿದ್ದು ಅವರ ಕೆಲಸದ ಜವಾಬ್ದಾರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅದೇ ರೀತಿ ಅನುಶ್ರೀ ದಂಪತಿ ನೂರು ಕಾಲ ಸುಖವಾಗಿ ಬಾಳಲಿ ಎಂದು ಶುಭ ಹಾರೈಸಿದ್ದಾರೆ.