Amruthadhaare Serial: ಕೇಡು ಬಯಸೋ ಕೇಡಿ ಜೇಡಿಗೆ, ಪಾಠ ಕಲಿಸೋಕೆ ರೆಡಿಯಾದ್ರು ಭೂಮಿ ಟೀಚರ್!
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್ ಕೇಡುತನ ಜೋರಾಗಿದೆ. ಒಂದು ಕಡೆ ಮಲ್ಲಿ ಸಿವಿಲ್ ಪರೀಕ್ಷೆಗೆ ತಯಾರಾಗುತ್ತಿದ್ದರೆ, ಇನ್ನೊಂದು ಕಡೆ ಜೈದೇವ್ ತನ್ನ ಕುತಂತ್ರದಿಂದ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ. ಅಷ್ಟೇ ಅಲ್ಲ ಈ ವಿಚಾರ ಭೂಮಿಕಾಗೂ ಗೊತ್ತಾಗಿದೆ. ಹೀಗಾಗಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್ (Jaidev) ಕೇಡುತನ ಜೋರಾಗಿದೆ. ಒಂದು ಕಡೆ ಮಲ್ಲಿ ಸಿವಿಲ್ ಪರೀಕ್ಷೆಗೆ ತಯಾರಾಗುತ್ತಿದ್ದರೆ, ಇನ್ನೊಂದು ಕಡೆ ಜೈದೇವ್ ತನ್ನ ಕುತಂತ್ರದಿಂದ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ. ಅಷ್ಟೇ ಅಲ್ಲ ಈ ವಿಚಾರ ಭೂಮಿಕಾಗೂ (Bhoomika) ಗೊತ್ತಾಗಿದೆ. ಹೀಗಾಗಿ ಒಂದು ಮಾಸ್ಟರ್ ಪ್ಲ್ಯಾನ್ (Master plan) ಮಾಡಿದ್ದಾಳೆ.
ಜೈದೇವ್ ಇದನ್ನು ನೋಡಿ ಶಾಕ್
ಮಲ್ಲಿ ಎಲ್ಲಿ ಸಿವಿಲ್ ಎಕ್ಸಾಮ್ ಪಾಸ್ ಆದ್ರೆ ತನಗೆ ತೊಂದರೆ ಆಗುತ್ತೋ ಅಂತ ಜೈದೇವ್ ಓದುಲು ತೊಂದರೆ ಕೊಡುತ್ತಿದ್ದಾನೆ. ಕರೆಂಟ್ ತೆಗೆದು ಹಾಳು ಮಾಡಿ ಮಲ್ಲಿ ಓದಲು ಕಷ್ಟವಾಗಿದೆ. ಭೂಮಿಕಾ ಕೂಡ ಮಲ್ಲಿ ಜೊತೆಗೆ ನಿಂತಿದ್ದಾಳೆ. ಮಲ್ಲಿ ಕೂಡ ಕತ್ತಲೆಯಲ್ಲಿ ಓದಿಕೊಳ್ಳಲು ಹೈರಾಣ್ ಆಗಿದ್ದಾಳೆ. ಜೈದೇವ್ ಮಾಡಿರೋ ಕುತಂತ್ರ ತಿಳಿದ ಭೂಮಿ, ಮಲ್ಲಿಯನ್ನು ಕಾರ್‌ನಲ್ಲಿ ಕುಳಿಸಿ ಅದೇ ಲೈಟ್ ಮೂಲಕ ಓದಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾಳೆ. ಜೈದೇವ್ ಇದನ್ನು ನೋಡಿ ಶಾಕ್ ಆಗಿದ್ದಾನೆ.
ಭೂಮಿಕಾ ತಲೆ ಅಂದ್ರೆ ತಲೆ. ಅವಳ ತಲೆಯನ್ನು ಮ್ಯೂಸಿಯಮ್‌ನಲ್ಲಿ ಇಡಬೇಕು ಎಂದು ತನ್ನಲ್ಲೇ ಮಾತನಾಡಿಕೊಂಡಿದ್ದಾನೆ.
ಇದನ್ನೂ ಓದಿ: Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್; ಹೊಂಬಾಳೆಯದ್ದೇ ಪ್ಲ್ಯಾನ್
ಅತ್ತ ಪಾರ್ಥನ ಮೇಲೆ ಜೈದೇವ್ ಗರಂ
ಇನ್ನೊಂದು ಕಡೆ ಪಾರ್ಥ ಕೂಡ ಗೌತಮ್ ಪರ ನಿಲ್ಲುತ್ತಿರುವ ಬಗ್ಗೆ ಜೈದೇವ್‌ಗೆ ಅಸಮಾಧಾನ ಇದೆ. ಜೈದೇವ್ ಕೂಡ ಪಾರ್ಥ ಮೇಲೆ ಕೂಗಾಡಿದ್ದಾನೆ. ಹೀಗಾಗಿ ಪಾರ್ಥ ಈ ನೋವನ್ನು ತನ್ನ ಮಾವನ ಬಳಿ ತೋಡಿಕೊಂಡಿದ್ದಾನೆ. ಮಾವ ಕೂಡ ಅಳಿಯನನ್ನು ಬುದ್ಧಿಮಾತುಗಳಿಂದ ಸಮಾಧಾನ ಮಾಡಿದ್ದಾನೆ.
ಗೌತಮ್ ದೀವಾನ್ ಈಗ ಎಲ್ಲರಲ್ಲೂ ನಡುಕ ಹುಟ್ಟಿಸಲು ಆರಂಭಿಸಿದ್ದಾನೆ. ಇಷ್ಟು ದಿನ ಸಾಮಾನ್ಯ ಕ್ಯಾಬ್ ಡ್ರೈವರ್ ಆಗಿದ್ದ ಆತ ಈಗ ಉದ್ಯಮ ಮಾಡೋಕೆ ಆರಂಭಿಸಿದ್ದಾನೆ. ಈ ವಿಷಯ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಆದರೆ, ಕುಟುಂಬದವರೇ ಆದ ಜಯದೇವ್ಗೆ ಭಯ ಶುರುವಾಗಿದೆ. ದೀವಾನ್ ಕುಟುಂಬದ ಮತ್ತೊಂದು ಬ್ರ್ಯಾಂಚ್ ರೀತಿಯಲ್ಲಿ ಈ ಕಂಪನಿ ಮೂಡಿ ಬರುತ್ತಿದೆ. ‘ಅಮೃತಧಾರೆ’ ಧಾರಾವಾಹಿ ಮತ್ತಷ್ಟು ರೋಚಕತೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಜೈದೇವ್‌ಗೆ ಭಯ ಶುರುವಾಗಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ.
ಇದನ್ನೂ ಓದಿ: Agnisakshi Serial: 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.