Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್; ಹೊಂಬಾಳೆಯದ್ದೇ ಪ್ಲ್ಯಾನ್
Actor Prabhas : ಪ್ರಭಾಸ್ ಅವರ 'ದಿ ರಾಜಾ ಸಾಬ್' ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯ ನಂತರವೂ ಅವರ ಉತ್ಸಾಹ ಕುಂದಿಲ್ಲ. ಸೂಪರ್ ಸ್ಟಾರ್ ಈಗಾಗಲೇ ತಮ್ಮ ಮುಂದಿನ ಯೋಜನೆಗಳನ್ನು ಯೋಜಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗ, ಪ್ರಭಾಸ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ.
ನಟ ಪ್ರಭಾಸ್ -
ಪ್ರಭಾಸ್ (Prabhas) ಅವರ 'ದಿ ರಾಜಾ ಸಾಬ್' ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯ ನಂತರವೂ ಅವರ ಉತ್ಸಾಹ ಕುಂದಿಲ್ಲ. ಸೂಪರ್ ಸ್ಟಾರ್ ಈಗಾಗಲೇ ತಮ್ಮ ಮುಂದಿನ ಯೋಜನೆಗಳನ್ನು ಯೋಜಿಸುತ್ತಿದ್ದಾರೆ. ಹನು ರಾಘವಪುಡಿ (hanu raghavapudi) ನಿರ್ದೇಶನದ 'ಫೌಜಿ' ಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗ, ಪ್ರಭಾಸ್ ನಿರ್ದೇಶಕ ಸಂದೀಪ್ ರೆಡ್ಡಿ (Sandeep Reddy) ವಂಗಾ ಅವರ 'ಸ್ಪಿರಿಟ್' ಚಿತ್ರದ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ.
ಭೋಜನದ ಸಮಯದಲ್ಲಿ ಇಬ್ಬರೂ ಭೇಟಿ
ಪ್ರಭಾಸ್ ಇತ್ತೀಚೆಗೆ ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರನ್ನು ಭೇಟಿ ಆಗಿದ್ದಾರೆ. ‘ಕಿಷ್ಕಿಂದ ಕಾಂಡಂ’ ಮತ್ತು ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಇಕೊ’ ನಿಮಾಗಳ ನಿರ್ದೇಶಕರಾಗಿರುವ ದಿಂಜಿತ್ ಅಯ್ಯತಾನ್ ಅವರನ್ನು ನಟ ಮತ್ತು ನಿರ್ದೇಶಕೆನ್ನು ಭೇಟಿಯಾದದ್ದು ಇದೇ ಮೊದಲು. ಪ್ರಭಾಸ್ ಭೇಟಿ ಆಗಿದ್ದು, ಸಿನಿಮಾ ಕತೆಯೊಂದರ ಬಗ್ಗೆ ಇಬ್ಬರೂ ನಿರ್ದೇಶಕರು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Ranveer Singh: ಧುರಂಧರ್ 2ರ ಹೊಸ ಪೋಸ್ಟರ್ ಔಟ್! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ
ಭೇಟಿಯ ನಂತರ, ದಿನ್ಜಿತ್ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಡೇಟ್ ಹಂಚಿಕೊಂಡರು. “ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಭೇಟಿ. ಉತ್ತಮ ಮಾತುಕತೆ ಆಯ್ತು, ಅವರ ಆತಿಥ್ಯ ನಿಜವಾಗಿಯೂ ಇಷ್ಟವಾಯಿತು! ಧನ್ಯವಾದಗಳು. ಹೊಂಬಾಳೆ ಫಿಲ್ಮ್ಸ್ ವಿಜಯ್ ಸರ್‌ಗೆ ಸಹ ಕೃತಜ್ಞತೆಗಳು, ”ಎಂದು ದಿನ್ಜಿತ್ ಬರೆದಿದ್ದಾರೆ.
ಪ್ರಭಾಸ್ ಸ್ಪಿರಿಟ್ ಮತ್ತು ಫೌಜಿ ಚಿತ್ರಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದರೆ. ಶೀಘ್ರದಲ್ಲೇ ಮಲಯಾಳಂ ನಿರ್ದೇಶಕ ದಿನ್ಜಿತ್ ಅಯ್ಯಥನ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಭಾಸ್ ಅವರ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವೂ ಪ್ರಾರಂಭವಾಗಿದೆ. ಇವುಗಳ ಬಳಿಕ ‘ಸಲಾರ್ 2’ ಶುರುವಾಗಲಿದೆ. ಅದಾದ ಬಳಿಕವಷ್ಟೆ ದಿಂಜಿತ್ ಅಯ್ಯತಾನ್ ಅವರೊಟ್ಟಿಗೆ ಸಿನಿಮಾ ಶುರುವಾಗಲಿದೆ.
ಇದನ್ನೂ ಓದಿ: Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್ ಉತ್ತರ
ದಿಂಜಿತ್ ಅಯ್ಯತಾನ್ ಹಾಗೂ ಪ್ರಭಾಸ್ ಭೇಟಿಯ ಹಿಂದಿರುವುದು ಹೊಂಬಾಳೆ ಫಿಲಮ್ಸ್. ಈಗಾಗಲೇ ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿರುವ ಹೊಂಬಾಳೆ ಫಿಲಮ್ಸ್, ದಿಂಜಿತ್ ಅಯ್ಯತಾನ್ ಅವರ ಬಳಿ ಇರುವ ಕತೆ ಪ್ರಭಾಸ್ಗೆ ಒಪ್ಪಬಹುದು ಎಂಬ ಯೋಜನೆಯೊಟ್ಟಿಗೆ ಇಬ್ಬರ ನಡುವೆ ಮೀಟಿಂಗ್ ಆಯೋಜನೆ ಮಾಡಿದೆ.