Amruthadhaare serial : ಮಲ್ಲಿಗೆ ಆಪತ್ಬಾಂಧವನಾಗಿ ಬಂದ ಗೌತಮ್ ದಿವಾನ್; ಆದರೂ ಎದುರಾಗಿದೆ ತೊಂದರೆ!
Amruthadhaare serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಭರ್ಜರಿ ಫೈಟಿಂಗ್ ಪ್ರೋಮೋ ಔಟ್ ಆಗಿದೆ.ಮಲ್ಲಿ ಸುದ್ದಿಗೆ ಬಂದ ರೌಡಿಗಳಿಗೆ ಬುದ್ಧಿ ಕಲಿಸಿದ್ದಾನೆ ಗೌತಮ್. ಜೈದೇವ್ ಪ್ಲಾನ್ ಪ್ಲಾಪ್ ಆಗಿದೆ. ಮಲ್ಲಿ ಕೈಯನ್ನ ಸುಟ್ಟು ಹಾಕಿ ಅಂದವನಿಗೆ ತಲೆ ತಗ್ಗಿಸುವಂತೆ ಆಗಿದೆ. ಆದರೂ ಮಲ್ಲಿ ಒಂದು ಸಮಸ್ಯೆಗೆ ಗುರಿಯಾಗಿದ್ದಾಳೆ. ಏನದು?
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಗೌತಮ್ ದಿವಾನ್ ಭರ್ಜರಿ ಫೈಟಿಂಗ್ ಪ್ರೋಮೋ ಔಟ್ ಆಗಿದೆ.ಮಲ್ಲಿ ಸುದ್ದಿಗೆ ಬಂದ ರೌಡಿಗಳಿಗೆ ಬುದ್ಧಿ ಕಲಿಸಿದ್ದಾನೆ ಗೌತಮ್. ಜೈದೇವ್ (Jaidev) ಪ್ಲಾನ್ ಪ್ಲಾಪ್ ಆಗಿದೆ. ಮಲ್ಲಿ ಕೈಯನ್ನ ಸುಟ್ಟು ಹಾಕಿ ಅಂದವನಿಗೆ ತಲೆ ತಗ್ಗಿಸುವಂತೆ ಆಗಿದೆ. ಆದರೂ ಮಲ್ಲಿ ಒಂದು ಸಮಸ್ಯೆಗೆ ಗುರಿಯಾಗಿದ್ದಾಳೆ. ಏನದು?
ಮಲ್ಲಿ ಮೇಲೆ ಜೈದೇವ್ ಹುಡುಗರು ಅಟ್ಯಾಕ್
ದಾರಿಯಲ್ಲಿ ಬರುತ್ತಿದ್ದ ಮಲ್ಲಿ ಮೇಲೆ ಜೈದೇವ್ ಹುಡುಗರು ಅಟ್ಯಾಕ್ ಮಾಡಿದ್ದಾರೆ. ಮಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ರೌಡಿಗಳ ಕಣ್ತಪ್ಪಿಸಿ ಅವಿತುಕೊಂಡು ಗೌತಮ್ ಗೆ ಫೋನ್ ಮಾಡಿ ನಡೆದ ವಿಚಾರ ಹೇಳಿದ್ದಾಳೆ. ಮಲ್ಲಿಗೆ ಸಮಾಧಾನ ಮಾಡಿ ಗೌತಮ್ ಧೈರ್ಯ ಹೇಳಿದ್ದು ಲೋಕೆಷನ್ ಕಳಿಸುವಂತೆ ಹೇಳಿದ್ದಾನೆ. ಹಾಗೇ ಗೌತಮ್ ಎಂಟ್ರಿ ಆಗಿದೆ. ಇದರ ಹಿಂದೆ ಜೈದೇವ್ ಕೈವಾಡ ಇದೆ ಅನ್ನೋದು ಇನ್ನೂ ಗೌತಮ್‌ಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಜೈದೇವ್‌ನ ಗೌತಮ್ ಇನ್ನೊಮ್ಮೆ ಸುಮ್ಮನೆ ಬಿಡ್ತಾನಾ?
ಇದನ್ನೂ ಓದಿ: Ramayana Movie: ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ ನಟ ಫೈಸಲ್ ಮಲಿಕ್; ಪಾತ್ರ ಯಾವುದು?
ಮಲ್ಲಿಯನ್ನು ಕಾಪಾಡಿದ್ದಾನೆ ಗೌತಮ್
ರೌಡಿಗಳನ್ನು ಚೆನ್ನಾಗಿ ಹೊಡೆದು ಮಲ್ಲಿಯನ್ನು ಕಾಪಾಡಿದ್ದಾನೆ ಗೌತಮ್. ಸುನಿ ಕೂಡ ಗೌತಮ್ ಜೊತೆಗೆಇದ್ದಾನೆ. ಆದರೆ ಎಲ್ಲ ಸರಿ ಹೋಗೋ ಹೊತ್ತಿಗೆ ಎಕ್ಸಾಮ್ ಗೆ ಹೋಗೋಕೆ ಲೇಟ್ ಆಗಿದೆ. ಇದೀಗ ಸರಿಯಾದ ಸಮಯದಲ್ಲಿ ಪರೀಕ್ಷೆಗೆ ಮಲ್ಲಿಗೆ ಹೋಗ್ತಾಳಾ? ಹಾಲ್‌ನಲ್ಲಿ ಮಲ್ಲಿಗೆ ಅವಕಾಶ ಕೊಡ್ತಾರಾ? ಅಲ್ಲಿ ಏನು ಸಮಸ್ಯೆಗೆ ಗುರಿಯಾಗ್ತಾಳೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮಲ್ಲಿ ಬಗ್ಗೆ ಭೂಮಿಕಾ ಕಣ್ಣಿಟ್ಟಿದ್ದಳು. ಜೈದೇವ್ ಹಿಂದಿನ ರಾತ್ರಿಯೆ ಮಲ್ಲಿ ತಂಟೆಗೆ ಬಂದಿದ್ದ. ಹೀಗಾಗಿ ಭೂಮಿಕಾ ಮಾರನೇ ದಿನವೇ ಮಲ್ಲಿ ಬಗ್ಗೆ ಅಲರ್ಟ್ ಆಗಿದ್ದಳು. ಕೊನೆಗೂ ಗೌತಮ್ ಮಲ್ಲಿಯನ್ನ ಬಚಾವ್ ಮಾಡಿದ್ದಾನೆ.
ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ಹಂತಕ್ಕೆ ಬಂದಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ. ಗೌತಮ್ ಯಶಸ್ವಿ ಉದ್ಯಮಿ. ಆತ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಈಗಲೂ ಹಾಗೆಯೇ ಆಗುತ್ತದೆಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ಇದನ್ನೂ ಓದಿ: Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್? ಜೈದೇವ್‌ಗೆ ಸೋಲು ಖಚಿತ?
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.