ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್? ಜೈದೇವ್‌‌ಗೆ ಸೋಲು ಖಚಿತ?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸಂಕಷ್ಟ ಎದುರಾಗಿದೆ. ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಜೈದೇವ್‌ ಪಣ ತೊಟ್ಟಿದ್ದಾಗಿದೆ. ಹೀಗಾಗಿ ತೊಂದರೆ ಕೊಡುತ್ತಲೇ ಇದ್ದಾನೆ. ರಾತ್ರೋರಾತ್ರಿಯೇ ಮಲ್ಲಿಗೆ ತೊಂದರೆ ಕೊಟ್ಟ ಜೈದೇವ್‌ ಬಗ್ಗೆ, ಮಲ್ಲಿ ಕೆಂಡ ಆಗಿದ್ದಳು. ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದಾಳೆ. ಈಗ ಎಕ್ಸಾಮ್‌ (Exam) ಹೊರಡಲು ಸಿದ್ದ ಆಗಿದ್ದಾಳೆ.

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Mar 14, 2026 9:27 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amrithadhare Serial) ಧಾರಾವಾಹಿಯಲ್ಲಿ ಮಲ್ಲಿಗೆ ಸಂಕಷ್ಟ ಎದುರಾಗಿದೆ. ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಜೈದೇವ್‌ ಪಣ ತೊಟ್ಟಿದ್ದಾಗಿದೆ. ಹೀಗಾಗಿ ತೊಂದರೆ ಕೊಡುತ್ತಲೇ ಇದ್ದಾನೆ. ರಾತ್ರೋರಾತ್ರಿಯೇ ಮಲ್ಲಿಗೆ ತೊಂದರೆ ಕೊಟ್ಟ ಜೈದೇವ್‌ (Jaidev) ಬಗ್ಗೆ, ಮಲ್ಲಿ ಕೆಂಡ ಆಗಿದ್ದಳು. ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಭೂಮಿಕಾ (Bhoomika) ಮಲ್ಲಿಗೆ ಹೇಳಿದ್ದಾಳೆ. ಈಗ ಎಕ್ಸಾಮ್‌ (Exam) ಹೊರಡಲು ಸಿದ್ದ ಆಗಿದ್ದಾಳೆ.

ಜೈದೇವ್‌ ಹುಡುಗರು ಅಟ್ಯಾಕ್‌!

ದಾರಿಯಲ್ಲಿ ಬರುತ್ತಿದ್ದ ಮಲ್ಲಿ ಮೇಲೆ ಜೈದೇವ್‌ ಹುಡುಗರು ಅಟ್ಯಾಕ್‌ ಮಾಡಿದ್ದಾರೆ. ಮಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ರೌಡಿಗಳ ಕಣ್ತಪ್ಪಿಸಿ ಅವಿತುಕೊಂಡು ಗೌತಮ್ ಗೆ ಫೋನ್ ಮಾಡಿ ನಡೆದ ವಿಚಾರ ಹೇಳಿದ್ದಾಳೆ. ಮಲ್ಲಿಗೆ ಸಮಾಧಾನ ಮಾಡಿ ಗೌತಮ್ ಧೈರ್ಯ ಹೇಳಿದ್ದು ಲೋಕೆಷನ್ ಕಳಿಸುವಂತೆ ಹೇಳಿದ್ದಾನೆ. ಹಾಗೇ ಗೌತಮ್‌ ಎಂಟ್ರಿ ಆಗಿದೆ.

ಇದನ್ನೂ ಓದಿ: Vinay Gowda: ಸರಿಯಾಗಿ ನಾಯಿಗಳ ಹೆಸರೇ ಗೊತ್ತಿಲ್ಲ; ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

ಜೈದೇವ್‌ ಅಂತ ಗೊತ್ತಾದ್ರೆ ಗೌತಮ್‌ ಸುಮ್ಮನೆ ಇರ್ತಾನಾ?

ಇದರ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಇನ್ನೂ ಗೌತಮ್‌ಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಜೈದೇವ್‌ನ ಗೌತಮ್ ಇನ್ನೊಮ್ಮೆ ಸುಮ್ಮನೆ ಬಿಡ್ತಾನಾ?ಮಲ್ಲಿ ಬಚಾವ್‌ ಆಗಿ ಎಕ್ಸಾಮ್‌ ಪಾಸ್‌ ಆಗ್ತಾಳಾ? ಎನ್ನುವುದನ್ನು ಕಾದು ನೋಡಬೇಕಿದೆ.

ಅಮರ ಸ್ನೇಹ!

ಧಾರಾವಾಹಿಯಲ್ಲಿ ಈ ಎಲ್ಲ ಸಂಗತಿಗಳ ಮಧ್ಯೆ ಆನಂದ್‌ ಹಾಗೂ ಗೌತಮ್‌ ಸ್ನೇಹ ಕೂಡ ಹೈಲೈಟ್‌ ಆಗಿದೆ. ಪ್ರೇಕ್ಷಕರು ಈ ಇಬ್ಬರ ಜೋಡಿ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಗೌತಮ್‌ ಹಾಗೂ ಆನಂದ್‌ ಕಾರಿನಲ್ಲಿ ಸ್ನೇಹದ ಬಗ್ಗೆ ಮಾತನಾಡಿರುವ ಸಂಭಾಷಣೆ ಬಗ್ಗೆ ಪ್ರೇಕ್ಷಕರು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಲೆಗೆ ಹುಳು ಬಿಟ್ಟುಕೊಂಡ ಶಕುಂತಲಾ

ಸದ್ಯ ಶಕುಂತಲಾ ಕೂಡ ಗೌತಮ್ ಮುಂದೇನು ಮಾಡ್ತಾನೆ ಎನ್ನುವ ಆತಂಕದಲ್ಲಿದ್ದಾಳೆ. ಜೈದೇವ್ ಪ್ರತೀಕಾರ ಮುಂದುವರೆದಿದೆ. ಮಲ್ಲಿ ಪರೀಕ್ಷೆಯನ್ನು ನೀಡಿ ಮುಂದೆ ಪಾಸಾಗುತ್ತಾಳಾ..? ಹಾಗೊಂದು ವೇಳೆ ಪಾಸಾದರೆ ಮುಂದೇನು..? ಜೈದೇವ್‌ಗೆ ಸುನಿ ಉಲ್ಟಾ ಹೊಡೆಯುತ್ತಾನಾ..? ಹೊಸ ಉದ್ಯಮಕ್ಕಿಳಿದ ಗೌತಮ್ ಯಶಸ್ವಿಯಾಗ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.

ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ಹಂತಕ್ಕೆ ಬಂದಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು.

ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ. ಗೌತಮ್ ಯಶಸ್ವಿ ಉದ್ಯಮಿ. ಆತ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಈಗಲೂ ಹಾಗೆಯೇ ಆಗುತ್ತದೆಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

ಇದನ್ನೂ ಓದಿ: Adilakshmi Purana Serial: ‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.