ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಗೌತಮ್ ಫೈನಲ್ ಜಡ್ಜ್‌ಮೆಂಟ್ ಕೊಡದೆ ಕೇಡಿ ಜೈದೇವ್‌ ಸುಮ್ಮನೆ ಇರೋದೇ ಇಲ್ಲ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಈಗ ಗೌತಮ್‌ ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ತನ್ನ ಕುತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌ . ಈಗ ಭೂಮಿ ಕೂಡ ಗೌತಮ್‌ಗೆ ಈ ಬಗ್ಗೆ ಪ್ರಶ್ನೆ ಇಟ್ಟಿದ್ದಾಳೆ.

ಗೌತಮ್ ಫೈನಲ್ ಜಡ್ಜ್‌ಮೆಂಟ್ ಕೊಡದೆ ಕೇಡಿ ಜೈದೇವ್‌ ಸುಮ್ಮನೆ ಇರೋದೇ ಇಲ್ಲ!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 14, 2026 10:11 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ ಈಗ ಗೌತಮ್‌ ಬ್ಯುಸಿನೆಸ್‌ಗೆ ಕೈ ಹಾಕಿದ್ದಾನೆ. ತನ್ನ ಕುತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌ (Jaidev). ಈಗ ಭೂಮಿ ಕೂಡ ಗೌತಮ್‌ಗೆ ಈ ಬಗ್ಗೆ ಪ್ರಶ್ನೆ ಇಟ್ಟಿದ್ದಾಳೆ.

ಕೇಡಿ ಜೆ.ಡಿ ಸುಮ್ಮನಿರೋಲ್ಲ!

ಜೈದೇವ್‌ ಎಲ್ಲ ವಿಚಾರಗಳನ್ನು ಪ್ರೆಸ್‌ಮೀಟ್‌ ಮಾಡಿ ಪಬ್ಲಿಕ್‌ ಮಾಡಿದ್ದಾರೆ. ಅಷ್ಟೆಲ್ಲ ಜೈದೇವ್‌ ಮಾಡಿದ್ದರೂ ಯಾಕೆ ಏನು ಹೇಳಿಲ್ಲ? ಅಂತ ಪ್ರಶ್ನೆ ಇಟ್ಟಿದ್ದಾರೆ. ಅದಕ್ಕೆ ಗೌತಮ್‌ ಮಾತನಾಡಿ, ಅವನಿಗೆ ಈ ಕಂಪನಿ ಮೇಲೆ ಎಷ್ಟು ಹಕ್ಕು ಇದೆಯೋ ಅಷ್ಟು ಹಕ್ಕು ನನಗೂ ಇದೆ. ಇದು ಪೇಪರ್‌ ಮೇಲಿನ ಸಂಬಂಧ ಅಲ್ಲ. ರಕ್ತ ಸಂಬಂಧ. ನಾನು ಲೀಗಲ್‌ ಆಗಿ ಫೈಟ್‌ ಮಾಡ್ತೀನಿ ಅಂತ ಹೇಳಿದ್ದಾನೆ ಗೌತಮ್‌.

ಇದನ್ನೂ ಓದಿ: Ram Pothineni: ಏಕಾಂತಕ್ಕೆ ಒಗ್ಗಿಕೊಂಡಿರುವೆ; ನಟ ರಾಮ್ ಪೋಥಿನೇನಿ ಮುಕ್ತ ಮಾತು

ಅತ್ತ ಜೈದೇವ್‌ಗೂ ಶಾಕ್‌ ಆಗಿದೆ. ಈಗಾಗಲೇ ಕಂಪನಿ ಲೋಗೋ ಗೌತಮ್‌ ಹೆಸರಲ್ಲಿ ರಿಜಿಸ್ಟರ್‌ ಆಗಿ ಹೋಗಿದೆ. ಈ ವಿಚಾರ ತಿಳಿದು ಜೈದೇವ್‌ ಇನ್ನಷ್ಟುಅಚ್ಚರಿಗೊಂಡಿದ್ದಾನೆ. ಗೌತಮ್ ಸರ್ ಫೈನಲ್ ಜಡ್ಜ್‌ಮೆಂಟ್ ಕೊಡೋ ತನಕ ಕೇಡಿ ಜೆ.ಡಿ ಸುಮ್ಮನೇ ಇರೋದೆ ಇಲ್ಲ.

ಇದಕ್ಕೂ ಮುಂಚೆ ಜೈದೇವ್‌ ಪ್ರೆಸ್‌ ಮೀಟ್‌ ಕರೆದು ಗೌತಮ್‌ ಶುರು ಮಾಡುತ್ತಿರುವ ಬ್ಯುಸೆನೆಸ್‌ ಲೋಗೋ ನಮ್ಮದು. ಈ ಲೋಗೋವನ್ನು ಯಾರೂ ಲಘುವಾಗಿ ತೆಗೆದುಕೊಳ್ಳೋಕೆ ಆಗಲ್ಲ. ಇದು ನನ್ನ ಸ್ವಂತದ್ದು. ದಿವಾನ್‌ ಫ್ಯಾಮಿಲಿ ಅಲ್ಲಿ ಗೌತಮ್‌ ಮಾತ್ರನಾ ಇರೋದು? ಗೌತಮ್‌ ದಿವಾನ್‌ಗೆ ದಿವಾನ್‌ ಅಂತ ಸರ್‌ನೇಮ್‌ ಸಿಕ್ಕಿದ್ದು ಈ ಫ್ಯಾಮಿಲಿ ಇಂದ. ಅವನಿಂದ ದಿವಾನ್‌ ಆಗಿಲ್ಲ. ಈ ಒಂದು ಫ್ಯಾಮಿಲಿ ಅಲ್ಲಿ ಅವರು ಒಂದು ಭಾಗ ಎಂದಿದ್ದ. ಆದರೀಗ ಎಲ್ಲ ಉಲ್ಟಾ ಆಗಿದೆ.

ಜೈದೇವ್‌ ಇದರ ಜೊತೆಗೆ ಶಕುಂತಲಾ ಮೇಲೂ ಅಬ್ಬರಿಸಿದ್ದಾನೆ. ಒಡಹುಟ್ಟಿದವರೂ ಅಂತ ನೋಡದೇ ಜೈದೇವ್‌ ಅಬ್ಬರಿಸುತ್ತಿದ್ದಾನೆ. ಮುಂದೆ ಜೈದೇವ್‌ಗೆ ಇರೋ ಅಹಂಕಾರವೇ ಶಕುಂತಲಾಗೆ ಮುಳುವಾಗುತ್ತಾ? ಪಾರ್ಥ ಹಾಗೂ ತಂಗಿ ಗೌತಮ್‌ ಕಡೆ ಸೇರುತ್ತಾರಾ? ಶಕುಂತಲಾಗೂ ಜೈದೇವ್‌ ಕೆಟ್ಟ ದಿನಗಳನ್ನು ತರ್ತಾನಾ? ಲೋಗೋ ವಿಚಾರವಾಗಿ ಗೌತಮ್‌ ಮುಂದಿನ ನಡೆಯೇನು? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಕೇಡಿ ಎಷ್ಟೇ ಹಾರಾಡಿದ್ರೂ, ಕೊನೆಗೆ ಗೆಲ್ಲೋದು ಮಾತ್ರ ಗೌತಮ್ ದಿವಾನ್!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.