ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಕೇಡಿ ಎಷ್ಟೇ ಹಾರಾಡಿದ್ರೂ, ಕೊನೆಗೆ ಗೆಲ್ಲೋದು ಮಾತ್ರ ಗೌತಮ್ ದಿವಾನ್!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಕುತಂತ್ರ ನಡೆಯುತ್ತಲೇ ಇದೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌.

Amruthadhaare: ಜೈದೇವ್‌ ಎಷ್ಟೇ ಹಾರಾಡಿದ್ರೂ, ಗೆಲ್ಲೋದು ಮಾತ್ರ ಗೌತಮ್!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 13, 2026 11:51 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ ಕುತಂತ್ರ ನಡೆಯುತ್ತಲೇ ಇದೆ. ಗೌತಮ್‌ ಸೆಲೆಕ್ಟ್‌ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್‌ (Jaidev) ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ. ಅದೇ ವಿಚಾರವಾಗಿ ಗಲಾಟೆ ಮಾಡಲು ಛೂ ಬಿಟ್ಟಿದ್ದಾನೆ ಜೈದೇವ್‌.

ಇದನ್ನೂ ಓದಿ: Mrunal Thakur: ಅಲ್ಲು ಅರವಿಂದ್ ಇದೊಂದು ಮಾತಿಗೆ ನಾಚಿ ನೀರಾದ ಮೃಣಾಲ್ ಠಾಕೂರ್

ಗೆಲ್ಲೋದು ಮಾತ್ರ ನಮ್ ಗೌತಮ್ ದಿವಾನ್!

ಲೋಗೋ ವಿಚಾರವಾಗಿ ಗೌತಮ್‌ ಕಂಪನಿ ಮುಂದೆ ಪ್ರತಿಭಟನೆಗಳು ಆಗಿವೆ. ಆನಂದ್‌ಗೆ ಹೊಡೆದೂ ಬಿಟ್ಟಿದ್ದಾರೆ. ಲೋಗೋ ನಿಮ್ಮದು ಅಲ್ವಂತೆ ಅಂತ ಗೌತಮ್‌ ಮೇಲೆ ರೇಗಾಡಿದ್ದಾರೆ. ಈ ವಿಚಾರವಾಗಿ ಗೌತಮ್‌ ಕೂಡ ಕೂಗಾಡಿದ್ದಾನೆ. ಆದರೆ ಗೌತಮ್‌ ಎಲ್ಲವನ್ನೂ ಪ್ಲ್ಯಾನ್‌ ಪ್ರಕಾರ ಮಾಡಿಕೊಂಡಿದ್ದಾನೆ. ಗೌತಮ್‌ ಸೋಲುತ್ತಾನೆ ಅಂದುಕೊಂಡಿದ್ದ ಜೈದೇವ್‌ಗೆ ತಲೆ ತಗ್ಗಿಸುವಂತಾಗಿದೆ. ಕೇಡಿ ಎಷ್ಟೇ ಹಾರಾಡಿದ್ರೂ, ಕೊನೆಗೆ ಗೆಲ್ಲೋದು ಮಾತ್ರ ಗೌತಮ್ ದಿವಾನ್ ಆಗಿದೆ.

ಇಷ್ಟೂ ದಿನ ಜೈದೇವ್‌, ಮಲ್ಲಿ ಹಾಗೂ ಗೌತಮ್‌ ಬದುಕಿನಲ್ಲಿ ವೈಯಕ್ತಿಕವಾಗಿ ಆಟ ಆಡುತ್ತಿದ್ದ. ಆದರೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತಮ್ಮ ಪಾರ್ಥನ ಸಿಗ್ನೇಚರನ್‌ನ್ನು forgery ಮಾಡಿ, ಅಕ್ರಮವಾಗಿ ತನ್ನ ಕೆಲಸಕ್ಕೆ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಪ್ರೆಸ್‌ ಮೀಟ್‌ ಕರೆದಿದ್ದ.

ಗೌತಮ್‌ ಶುರು ಮಾಡುತ್ತಿರುವ ಬ್ಯುಸೆನೆಸ್‌ ಲೋಗೋ ನಮ್ಮದು. ಈ ಲೋಗೋವನ್ನು ಯಾರೂ ಲಘುವಾಗಿ ತೆಗೆದುಕೊಳ್ಳೋಕೆ ಆಗಲ್ಲ. ಇದು ನನ್ನ ಸ್ವಂತದ್ದು. ದಿವಾನ್‌ ಫ್ಯಾಮಿಲಿ ಅಲ್ಲಿ ಗೌತಮ್‌ ಮಾತ್ರನಾ ಇರೋದು? ಗೌತಮ್‌ ದಿವಾನ್‌ಗೆ ದಿವಾನ್‌ ಅಂತ ಸರ್‌ನೇಮ್‌ ಸಿಕ್ಕಿದ್ದು ಈ ಫ್ಯಾಮಿಲಿ ಇಂದ. ಅವನಿಂದ ದಿವಾನ್‌ ಆಗಿಲ್ಲ. ಈ ಒಂದು ಫ್ಯಾಮಿಲಿ ಅಲ್ಲಿ ಅವರು ಒಂದು ಭಾಗ ಎಂದಿದ್ದ.



ಮುಂದೆ ಜೈದೇವ್‌ಗೆ ಇರೋ ಅಹಂಕಾರವೇ ಶಕುಂತಲಾಗೆ ಮುಳುವಾಗುತ್ತಾ? ಪಾರ್ಥ ಹಾಗೂ ತಂಗಿ ಗೌತಮ್‌ ಕಡೆ ಸೇರುತ್ತಾರಾ? ಶಕುಂತಲಾಗೂ ಜೈದೇವ್‌ ಕೆಟ್ಟ ದಿನಗಳನ್ನು ತರ್ತಾನಾ? ದಿಯಾ ಇಂದಿಗಾಗಿ ಜೈದೇವ್‌ ಆಸ್ತಿ ಕಳೆದುಕೊಳ್ತಾನಾ? ಜೈದೇವ್‌ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳ್ತಾನಾ? ಲೋಗೋ ವಿಚಾರವಾಗಿ ಗೌತಮ್‌ ಮುಂದಿನ ನಡೆಯೇನು? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಗೌತಮ್‌ ದಿವಾನ್‌ ಮೇಲೆ ಬಿದ್ದೇ ಬಿಡ್ತು ಕೆಡಿ ಜೈದೇವ್‌ ವಕ್ರದೃಷ್ಟಿ!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.