ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಶಕುಂತಲಾಗೆ ಮೃತ್ಯು ಕಂಟಕ! ದೇಶ ಬಿಟ್ಟು ಓಡಿ ಹೋಗಲು ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಕಥೆ ಸಾಗುತ್ತಿದೆ. ಒಂದು ಕಡೆ ಶಕುಂತಲಾ ಬೀದಿ ಪಾಲಾಗಿದ್ದಾಳೆ. ಇನ್ನೊಂದು ಕಡೆ ಜೈದೇವ್‌ ದೇಶ ಬಿಟ್ಟು ಹೋಗೋ ಪ್ಲ್ಯಾನ್‌ ಮಾಡಿದ್ದಾನೆ. ಗೌತಮ್ - ಶಕುಂತಲಾ ಧನ್ಯ ಮಿಲನ ದೇವಸ್ಥಾನದಲ್ಲಿ ಆಗುವಂತಿದೆ.

ಶಕುಂತಲಾಗೆ ಮೃತ್ಯು ಕಂಟಕ! ಬಗೆಹರಿಸ್ತಾರ ಗೌತಮ್ - ಭೂಮಿಕಾ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 25, 2026 10:09 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ಟ್ವಿಸ್ಟ್‌ ಪಡೆದು ಕಥೆ ಸಾಗುತ್ತಿದೆ. ಒಂದು ಕಡೆ ಶಕುಂತಲಾ (Shakuntala) ಬೀದಿ ಪಾಲಾಗಿದ್ದಾಳೆ. ಇನ್ನೊಂದು ಕಡೆ ಜೈದೇವ್‌ (Jaidev) ದೇಶ ಬಿಟ್ಟು ಹೋಗೋ ಪ್ಲ್ಯಾನ್‌ ಮಾಡಿದ್ದಾನೆ. ಗೌತಮ್ - ಶಕುಂತಲಾ (Gowtham Shakuntala) ಧನ್ಯ ಮಿಲನ ದೇವಸ್ಥಾನದಲ್ಲಿ ಆಗುವಂತಿದೆ.

ಶಕುಂತಲಾಗೆ ಮೃತ್ಯು ಕಂಟಕ

ಭೂಮಿ ಹಾಗೂ ಗೌತಮ್‌ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಅನ್ನದಾನ ಮಾಡಿದ್ದಾರೆ. ಅಲ್ಲಿಯ ಅರ್ಚಕರು ನಿಮ್ಮ ತಾಯಿ ಅವರಿಗೆ ಕಂಟಕ ಇದೆ ಎಂದಿದ್ದಾರೆ. ಒಂದು ಹೋಮ ಮಾಡಿಸಿ ಎಂದು ಈ ಮುಂಚೆ ಹೇಳಿದ್ದರೂ ಅವರು ಮಾಡಿಲ್ಲ ಎಂದಿದ್ದಾರೆ. ಹೀಗಾಗಿ ಗೌತಮ್‌ ಭೂಮಿ ಖುದ್ದಾಗಿ ಪೂಜೆ ಮಾಡಿಸಿದ್ದಾರೆ.

ಅತ್ತ ಶಕುಂತಲಾ ಗೆಳತಿ , ಶಕುಂತಲಾ ಕಿಡ್ನಿ ಮಾರಿ ಹಣ ಪಡೆದುಕೊಳ್ಳಬೇಕು ಅಂತ ಪಣ ತೊಟ್ಟಿದ್ದಾಳೆ. ಅಲ್ಲಿಂದ ಶಕುಂತಲಾ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ.

ಇದನ್ನೂ ಓದಿ: Toxic Movie: `ಟಾಕ್ಸಿಕ್' ಹಸಿಬಿಸಿ ದೃಶ್ಯ ವಿಚಾರ; ಟೀಕೆಯ ನಂತರ ಯಶ್ ಹೇಳಿದ್ದೇನು?

ದೇವಸ್ಥಾನದಲ್ಲೇ ಆಗಲಿದ್ಯಾ ಗೌತಮ್ - ಶಕುಂತಲಾ ಧನ್ಯ ಮಿಲನ?

ಶಕುಂತಲಾ ಅಂತೂ ತಪ್ಪಿಸಿಕೊಂಡು ನೇರವಾಗಿ ದೇವಸ್ಥಾನದಲ್ಲಿ ಊಟ ಕೊಡುವ ಸಾಲಲ್ಲಿ ನಿಂತಿದ್ದಳು. ಅಲ್ಲಿ ಗೌತಮ್‌ ಹಾಗೂ ಭೂಮಿಕಾ ಅನ್ನದಾನ ಮಾಡುತ್ತಿರುತ್ತಾರೆ. ಇದನ್ನು ಗಮನಿಸಿದ ಶಕುಂತಲಾ ಮುಖ ಮುಚ್ಚಿಕೊಂಡು ನಿಂತಿರುತ್ತಾಳೆ. ಗೌತಮ್‌ ಕೂಡ ಅರಿವಿಲ್ಲದೇ ಅಮ್ಮ ಎಂದಿದ್ದಾನೆ. ಈಗ ಅಮ್ಮ ಮಗ ಮತ್ತೆ ಮುಖಾಮುಖಿ ಆಗ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ದೇಶ ಬಿಟ್ಟು ಹೋಗಲು ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

ಮತ್ತೊಂದು ಕಡೆ ಜೈದೇವ್‌ ತನ್ನ ಹೆಂಡತಿ ಬಳಿ ಆದಷ್ಟು ಬೇಗ ಬ್ಯಾಗ್‌ ಪ್ಯಾಕ್‌ ಮಾಡಲು ಹೇಳಿದ್ದಾನೆ. ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲ ಇಲ್ಲಿಯವರ ಯಾರ ಸಹವಾಸ ಬೇಡ ನಮ್ಮ ಜೀವನವನ್ನ ನಾವೇ ಕಟ್ಟಿಕೊಳ್ಳೋಣ ಅಂತ ನಿರ್ಧಾರ ಮಾಡಿದ್ದಾನೆ. ಇದಕ್ಕೆ ಪತ್ನಿಯೂ ಖುಷ್‌ ಆಗಿದ್ದಾಳೆ. ಜೈದೇವ್‌ ನಂಬಿಕೆ ಉಳಿಸಿಕೊಂಡೆ ಎಂದು ಖುಷಿ ಆಗಿದ್ದಾಳೆ. ಅದರೆ ಆಕೆಯ ಪ್ಲ್ಯಾನ್‌ ಇನ್ನೂ ಜೈದೇವ್‌ಗೆ ಅರಿವಾಗಿಲ್ಲ. ಜೈದೇವ್‌ ಕೂಡ ಸದ್ಯದಲ್ಲೇ ಬೀದಿ ಪಾಲಾಗೋದು ಗ್ಯಾರಂಟಿ ಆದಂತಿದೆ.

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ. ತನ್ನ ತಾಯಿಯನ್ನು ಮತ್ತೆ ಕರೆದುಕೊಂಡು ಬರ್ತಾನಾ? ಈಗ ಶಕುಂತಲಾ ಬದಲಾಗಿ ಗೌತಮ್‌ ಪರ ಇರ್ತಾಳಾ? ಜೈದೇವ್‌ಗೂ ಕೇಡು ಕಾಲಬರುತ್ತಾ? ಗೌತಮ್‌ ಮುಂದಿನ ನಡೆಯೇನು ಎನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ; ಗೌತಮ್ ದಿವಾನ್ ಕೈ ಹಿಡಿಯಲೇಬೇಕು!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.