ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸೌಂದರ್ಯ ಕ್ಯಾರೆಕ್ಟರ್‌ ಲೆಸ್‌ ಎಂದ ಮಂಜನಿಗೆ ಮಾತಿನಲ್ಲಿ ನಿಗಾ ಇರಲಿ ಎಂದ ಕಿಚ್ಚ

Bigg Boss Kannada 13: ಮಾಡ್ರನ್‌ ಮಹಾಕವಿ ಮಂಜ ಹಾಗೂ ಸೌಂದರ್ಯ ಶೆಟ್ಟಿಗೆ ವೈಬ್‌ ಮ್ಯಾಚ್‌ ಆಗುತ್ತಲೇ ಇಲ್ಲ. ಟಾಸ್ಕ್‌ನಲ್ಲಿ ಇಬ್ಬರೂ ಕಿತ್ತಾಡಿದ್ರು. ಟಾಸ್ಕ್‌ ಮಧ್ಯೆ ಮಂಜನಿಗೆ ಸೌಂದರ್ಯ ಶೆಟ್ಟಿ ಹೊಡೆದಿದ್ದರು, ಸಾರಿ ಕೇಳಿದ್ರು. ಇಷ್ಟೆಲ್ಲಾ ಆದಮೇಲೂ ನಾಮಿನೇಷನ್‌ ವೇಳೆ ಮಂಜ ಮತ್ತೆ ಸೌಂದರ್ಯ ಶೆಟ್ಟಿ ಬಗ್ಗೆ ಮಾತನಾಡಿರೋದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. “ತುಂಬಾ ಡವ್‌, ಬರೀ ಡವ್.‌ ಕ್ಯಾರೆಕ್ಟರ್‌ ಲೆಸ್”‌ ಎಂದಿದ್ದರು. ಇದೀಗ ಕಿಚ್ಚ ಖಡಕ್‌ ಆಗಿ ಮಂಜನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ʻಕ್ಯಾರೆಕ್ಟರ್‌ ಲೆಸ್‌ʼ ಎಂದ ಮಂಜನಿಗೆ ಮಾತಿನಲ್ಲಿ ನಿಗಾ ಇರಲಿ ಎಂದ ಕಿಚ್ಚ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 20, 2026 9:33 AM

ಮಾಡ್ರನ್‌ ಮಹಾಕವಿ ಮಂಜ (modern Mahakavi Manja) ಹಾಗೂ ಸೌಂದರ್ಯ ಶೆಟ್ಟಿಗೆ (Soundarya Shetty) ವೈಬ್‌ ಮ್ಯಾಚ್‌ ಆಗುತ್ತಲೇ ಇಲ್ಲ. ಟಾಸ್ಕ್‌ನಲ್ಲಿ ಇಬ್ಬರೂ ಕಿತ್ತಾಡಿದ್ರು. ಟಾಸ್ಕ್‌ ಮಧ್ಯೆ ಮಂಜನಿಗೆ ಸೌಂದರ್ಯ ಶೆಟ್ಟಿ ಹೊಡೆದಿದ್ದರು, ಸಾರಿ ಕೇಳಿದ್ರು. ಇಷ್ಟೆಲ್ಲಾ ಆದಮೇಲೂ ನಾಮಿನೇಷನ್‌ ವೇಳೆ ಮಂಜ ಮತ್ತೆ ಸೌಂದರ್ಯ ಶೆಟ್ಟಿ ಬಗ್ಗೆ ಮಾತನಾಡಿರೋದು ವೀಕ್ಷಕರ ಆಕ್ರೋಶಕ್ಕೆ (Nomination) ಕಾರಣವಾಗಿತ್ತು. “ತುಂಬಾ ಡವ್‌, ಬರೀ ಡವ್.‌ ಕ್ಯಾರೆಕ್ಟರ್‌ ಲೆಸ್”‌ ಎಂದಿದ್ದರು. ಇದೀಗ ಕಿಚ್ಚ ಖಡಕ್‌ ಆಗಿ ಮಂಜನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮಾತಿನ ಮೇಲೆ ನಿಗಾ ಇರಲಿ

ನಾಮಿನೇಟ್‌ ಮಾಡುವಾಗ ಏನಂದ್ರಿ? ಅಂತ ಕಿಚ್ಚ ಗರಂ ಆಗಿ ಕೇಳಿರು. ಅದಕ್ಕೆ ಮಂಜ ಇದ್ದವರು, ರೊಮ್ಯಾನ್ಸ್‌ ಮಾಡೋಕೆ ಬಂದಿಲ್ಲ. ಕೈಕೈ ಹಿಡಿದುಕೊಂಡು ಓಡಾಡಲು ಬಂದಿಲ್ಲ ಎಂದು ಸೌಂದರ್ಯಗೆ ಅಂದೆ ಎಂದಿದ್ದಾರೆ. ಅದಕ್ಕೆ ಕಿಚ್ಚ ಇದ್ದವರು ಮಾತನಾಡಿ ದೃಷ್ಟಿಕೋನ ಅನ್ನೋದು ಒಂದು ಇದೆ. ಕಣ್ಣಲ್ಲಿ ಏನಿದೆ ಬದನೆಕಾಯಿ? ನಾಮಿನೇಶನ್‌ ಅಲ್ಲಿ ನೀವು ಹೇಳಿದ ಮಾತುಗಳು ಸರಿಯಲ್ಲ. ಮಾತಿನ ಮೇಲೆ ನಿಗಾ ಇರಲಿ ಎಂದಿ ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಕಾಮನರ್ಸ್‌ ಈ ಶೋಗೆ ಬೇಡ; ಸ್ಪರ್ಧಿಗಳ ವರ್ತನೆಗೆ ಬೇಸತ್ತ ಕಿಚ್ಚ

ಬಿಗ್‌ ಬಾಸ್‌ ಸೀಸನ್‌- 13’ ಎರಡನೇ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಜನರು ಊಹಿಸಿದಂತೆ ಕಿಚ್ಚ ಸುದೀಪ್‌ ಕಟಕಟೆಯಲ್ಲಿ ಅಗ್ನಿಪರೀಕ್ಷೆಯ ನಾಲ್ಕು ಜನರನ್ನ ನಿಲ್ಲಿಸಿದ್ದಾರೆ. ಅದರಲ್ಲೂ ಮಹಾಕವಿ ಮಂಜ ಅವರನ್ನು ಚೆನ್ನಾಗಿ ಬೆಂಡತ್ತಿದ್ದಾರೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.

ಇನ್ನು ಬಿಗ್‌ ಬಾಸ್‌ಗೆ ಏ…. ! ಅಂತ ಮಾತನಾಡುತ್ತೀರಾ. ಅದೇನು ನಿಮ್ಮಪ್ಪಂದ? ಯಾರಪ್ಪಂದು? ನಿಮ್ಮ ವಯಸ್ಸಿಗೆ ಇದೆಲ್ಲ ಬೇಕ? ವಯಸ್ಸಿನ ಬಗ್ಗೆ ಆದರೂ ಮರ್ಯಾದೆ ಇರಲಿ. ಕ್ಯಾಮೆರಾ ಆಫ್ ಆದರೆ ಕತೆಯೇ ಬೇರೆ ಆಗುತ್ತೆ. . ನಮ್ಮಲ್ಲಿ ಕವಿಗಳಿಗೆ ವಿಶೇಷ ಸ್ಥಾನ ಇದೆ. ನಿಮ್ಮ ಹೆಸರು ಮಾಡರ್ನ್‌ ಕವಿ ಮಂಜ ಅಂತ ನೀವು ಇಟ್ಟುಕೊಂಡಿದ್ದೀರಿ. ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.

ಇದನ್ನೂ ಓದಿ: ‌Bigg Boss Kannada 13: ಕಿಚ್ಚನ ಮುಂದೆ ಥಂಡಾ ಹೊಡೆದ ಮಂಜ; ಸುದೀಪ್ ಉಗ್ರರೂಪಕ್ಕೆ ಮಂಕಾದ ಮಹಾಕವಿ!

ಮುಂದಿನ ವಾರ ಹೊಸ ಮಂಜನನ್ನು ನೋಡಬೇಕು, ನಾನು ಹೀಗೇ ಇರುತ್ತೀನಿ ಎಂದರೆ ಜನ ಮುಂದಿನದ್ದನ್ನು ನಿರ್ಧರಿಸುತ್ತಾರೆಬ ಎಂದು ನೇರವಾಗಿ ಹೇಳಿದರು ಕಿಚ್ಚ.