"ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದೆ ಅವರಿಗೆ ಬೇರೆ ದಾರಿ ಇಲ್ಲ" ; ಕದನ ವಿರಾಮ ಮಾತುಕತೆಗೆ ಅಮೆರಿಕಕ್ಕೆ 7 ಕಂಡೀಷನ್ ಹಾಕಿದ ಇರಾನ್
Iran war: ಅಮೆರಿಕಕ್ಕೆ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಅವರೊಂದಿಗೆ ನಾವು ಯಾವುದೇ ಮಾತುಕತೆಗಳನ್ನು ಆರಂಭಿಸಬೇಕಿದ್ದರೂ ಈ ಏಳು ಷರತ್ತುಗಳನ್ನು ಪಾಲಿಸಬೇಕು ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಣೆಯನ್ನು ಕೂಡ ನೀಡಿದ್ದಾರೆ.
ಸಂಗ್ರಹ ಚಿತ್ರ -
ಟೆಹರಾನ್: ಸುದೀರ್ಘ ಸಂಘರ್ಷದ (Iran war) ಬಳಿಕವು ಮಧ್ಯಪ್ರಾಚ್ಯ ಭಾಗದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು ಇದನ್ನು ಅಂತ್ಯಗೊಳಿಸಲು ಯಾವುದೇ ಮಾತುಕತೆಗೆ ಪ್ರಾರಂಭಿಸುವ ಮೊದಲು ಅಮೆರಿಕ (america) ನಮ್ಮ ಏಳು ಷರತ್ತುಗಳನ್ನು (Iran Conditions) ಒಪ್ಪಿಕೊಳ್ಳಬೇಕು. ಅವರಿಗೆ ಬೇರೆ ದಾರಿ ಇಲ್ಲ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ (Iran’s Supreme National Security Council) ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಮೆರಿಕಕ್ಕೆ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ರೆಜಾಯಿ ಅವರು ಎಕ್ಸ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಟೆಹರಾನ್ ನಿಲುವು ಸ್ಪಷ್ಟವಾಗಿದ್ದು, ರಾಜತಾಂತ್ರಿಕ ಮಾತುಕತೆ ನಡೆಸಲು ವಾಷಿಂಗ್ಟನ್ ಬಯಸುವುದಾದರೆ ಅಮೆರಿಕವು ಇರಾನ್‌ನ ಹಕ್ಕುಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.
H-1B ವೀಸಾ ಶುಲ್ಕ ಮತ್ತೆ ಒಂದು ವರ್ಷ ವಿಸ್ತರಣೆ: 2027ರವರೆಗೆ 1 ಲಕ್ಷ ಡಾಲರ್ ಪಾವತಿ ನಿಯಮ
ಟೆಹರಾನ್ ಮತ್ತು ವಾಷಿಂಗ್ಟನ್ ನಡುವಿನ ಮುಂದುವರಿದ ಉದ್ವಿಗ್ನತೆ ಹಾಗೂ ಸಂಘರ್ಷದ ಅವಧಿಯಲ್ಲಿನ ನಡವಳಿಕೆಗೆ ಸಂಬಂಧಿಸಿದ ವ್ಯಾಪಕ ವಿವಾದ ಎದ್ದಿರುವ ಹಿನ್ನೆಲೆಯ ನಡುವೆ ರೆಜಾಯಿ ಅವರು ಈಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಆ ಏಳು ಷರತ್ತುಗಳ ಬಗ್ಗೆ ವಿವರವಾಗಿ ಏನೂ ತಿಳಿಸಿಲ್ಲ.
ವಿಶ್ವಸಂಸ್ಥೆಯ ಸತ್ಯಶೋಧನಾ ಆಯೋಗವು ಇರಾನ್ ಕುರಿತ ದಾಳಿಗೆ ಸಂಬಂಧಿಸಿ ನಡೆಸಿದ ತನಿಖೆಯಿಂದ ಕಳೆದ ಫೆಬ್ರವರಿಯಲ್ಲಿ ಇರಾನ್‌ನಲ್ಲಿ ನಡೆದ ಎರಡು ಮಿಲಿಟರಿ ದಾಳಿಗಳ ಹಿಂದೆ ಅಮೆರಿಕದ ಕೈವಾಡವಿತ್ತು ಎಂದು ನಂಬಲು ಸಮಂಜಸವಾದ ಆಧಾರಗಳಿವೆ. ಆ ದಾಳಿಗಳು ಯುದ್ಧಾಪರಾಧಗಳಾಗಿವೆ ಎಂದು ತೀರ್ಮಾನಿಸಿದೆ. ಇದರೊಂದಿಗೆ ಸಂಘರ್ಷದ ಸಮಯದಲ್ಲಿ ಅಮೆರಿಕದ ನಡವಳಿಕೆ ಹಾಗೂ ಇರಾನ್ ಸರ್ಕಾರದ ಪ್ರತಿಕ್ರಿಯೆಗಳನ್ನು ಕೂಡ ಪರಿಶೀಲನೆ ನಡೆಸಿದೆ.
۷ شرط ایران برای آغاز هر مذاکرهای به دولت آمریکا اعلام شده است. پیام تهران روشن و بدون ابهام است؛ اگر واشنگتن میخواهد از مخمصهای که خود ساخته خارج شود و بیش از این در آن گرفتار نشود، راهی جز پذیرش حقوق و شروط ایران ندارد.
— محسن رضایی (@ir_rezaee) September 19, 2026
ಅಮೆರಿಕದ ವಿರುದ್ಧ ಯುದ್ಧಾಪರಾಧದ ಆರೋಪ ಹೊರಿಸಿರುವ ವಿಶ್ವಸಂಸ್ಥೆ, ಮಿನಾಬ್‌ನಲ್ಲಿರುವ ಶಜರೆಹ್ ತಯ್ಯೆಬೆಹ್ ಪ್ರಾಥಮಿಕ ಶಾಲೆಯ ಮೇಲಿನ ದಾಳಿಗೆ ಅಮೆರಿಕದ ಪಡೆಗಳು ಕಾರಣ ಎಂದು ಹೇಳಿದೆ. ಇರಾನ್ ನೀಡಿರುವ ಮಾಹಿತಿಯಂತೆ ಈ ದಾಳಿಯಲ್ಲಿ ಸುಮಾರು 120 ಶಾಲಾ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೊಂದು ವಿವೇಚನೆಯಿಲ್ಲದ ದಾಳಿಯಾಗಿದ್ದು, ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅದು ಯುದ್ಧಾಪರಾಧಕ್ಕೆ ಸಮನಾಗಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಲಾಮೆರ್ಡ್‌ನಲ್ಲಿರುವ ಕ್ರೀಡಾ ಕೇಂದ್ರವೊಂದರ ಮೇಲಿನ ದಾಳಿಯಿಂದ 22 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಇದು ಕೂಡ ಯುದ್ಧ ಅಪರಾಧವಾಗಿದೆ ಎಂದು ನಿಯೋಗವು ನಿರ್ಣಯಿಸಿದೆ.
ಈ ತೀರ್ಮಾನಗಳನ್ನು ಶ್ವೇತ ಭವನ ತಿರಸ್ಕರಿಸಿದೆ. ಇದಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಶ್ವೇತ ಭವನದ ವಕ್ತಾರೆ ಅನ್ನಾ ಕೆಲ್ಲಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಮಾನವ ಹಕ್ಕುಗಳಿಗಾಗಿ ಏನನ್ನೂ ಮಾಡಿಲ್ಲ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್ ಮಾತ್ರ ಯುದ್ಧ ಅಪರಾಧಗಳನ್ನು ಎಸಗಿದೆ. ಸಶಸ್ತ್ರ ಸಂಘರ್ಷದ ಕಾನೂನುಗಳಿಗೆ ಅನುಗುಣವಾಗಿಯೇ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತ–ಬಾಂಗ್ಲಾದೇಶ ಸಂಬಂಧಕ್ಕೆ ಹೊಸ ತಿರುವು; ನವೆಂಬರ್‌ನಲ್ಲಿ ತಾರಿಕ್ ರೆಹಮಾನ್ ದೆಹಲಿ ಭೇಟಿ ಸಾಧ್ಯತೆ
ಇರಾನ್ ನೀಡಿದ ಪ್ರತಿಕ್ರಿಯೆಯನ್ನು ಪರಿಶೀಲನೆ ನಡೆಸಿರುವ ವಿಶ್ವಸಂಸ್ಥೆ, ಪ್ರತಿಭಟನೆಗಳ ಸಮಯದಲ್ಲಿ ಇರಾನ್ ಅಧಿಕಾರಿಗಳು ನಾಗರಿಕರ ವಿರುದ್ಧ ವ್ಯಾಪಕ ಮತ್ತು ವ್ಯವಸ್ಥಿತ ದಾಳಿಗಳನ್ನು ನಡೆಸಿದ್ದಾರೆ. ಅವುಗಳಲ್ಲಿ ಕಾನೂನುಬಾಹಿರ ಹತ್ಯೆಗಳು, ಚಿತ್ರಹಿಂಸೆ, ಅನಿಯಂತ್ರಿತ ಬಂಧನ, ಬಲವಂತದ ನಾಪತ್ತೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ತೀವ್ರ ನಿರ್ಬಂಧಗಳು ಸೇರಿವೆ ಎಂದು ತಿಳಿಸಿದೆ.