Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ; ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!
Amruthadhaare Serial: ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್. ಅತ್ತ ಗೌತಮ್ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಜೈದೇವ್ ಈಗ ಕಂಬಿ ಎಣಿಸುತ್ತಿದ್ದಾನೆ. ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ಮುಂದೆ ಬರಲೇ ಇಲ್ಲ. ಈಗ ಸ್ವತಃ ಮಾವ ಬಂದು ಜೈದೇವ್ (Jaidev) ರಿಲೀಸ್ ಮಾಡಿಕೊಂಡು ಹೋಗಲು ಬಂದಿದ್ದಾನೆ.
ದಿಯಾಳ ಹಿಂದೆ ತಿರುಗುತ್ತಿದ್ದ ಜೈದೇವ್ಗೆ ಆಕೆ ಸರಿಯಾದ ಬುದ್ಧಿ ಕಲಿಸಿ ಪೊಲೀಸರನ್ನು ಕರೆಸಿದ್ದಾಳೆ. ಜೈದೇವ್ ಜೈಲುಪಾಲಾಗಿದ್ದಾನೆ. ಬೀದಿಗೆ ತಂದು ಬಾಯಿಗೆ ಬಂದ ಹಾಗೆ ಬಯ್ದಿರೋ ಮಗನ ಎಲ್ಲಾ ನೆನಪುಗಳನ್ನು ನೆನಪಿಸಿಕೊಂಡ ಶಕುಂತಲಾ ಪೊಲೀಸರ ಬಳಿ, ಅವನು ಯಾರೆಂದೇ ನನಗೆ ಗೊತ್ತಿಲ್ಲ, ಚೆನ್ನಾಗಿ ರುಬ್ಬಿ ಎಂದಿದ್ದಾಳೆ. ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಜೈದೇವನ ಅಂಗಿ ಎಲ್ಲಾ ಬಿಚ್ಚಿಸಿ ಚೆನ್ನಾಗಿ ಬಾರಿಸಿದ್ದಾರೆ.
ಇದನ್ನೂ ಓದಿ: Raj B Shetty: ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ; ಟ್ರೈಲರ್ ಔಟ್
ಜೈದೇವನ ರಕ್ಷಣೆಗೆ ಶಕುನಿ ಮಾಮಾ
ಇದೇ ಹೊತ್ತಿನಲ್ಲಿ ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್.
ಕೊನೆಗೆ ಪೊಲೀಸರು ಧಮ್ಕಿ ಕೊಟ್ಟ ಮೇಲೆ ಹೋಗಲು ಒಪ್ಪಿಕೊಂಡಿದ್ದಾನೆ. ಶಕುನಿ ಮಾಮಾ ಡಬಲ್ ಗೇಮ್ ಆಡ್ತಿದ್ದಾನಾ, ಅಥವಾ ಗೌತಮ್ ಹೇಳಿದಂತೆ ಜೈದೇವನನ್ನು ಬಿಡಿಸಿಕೊಂಡು ಹೋಗಲು ಬಂದಿದ್ದಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಅಖಿಲಾಂಡೇಶ್ವರಿ ಇದಾಗಲೇ ಗೌತಮ್ ಮತ್ತು ಭೂಮಿಕಾಗೆ ಮಗಳನ್ನು ಹುಡುಕಿ ಕೊಡುವ ಜವಾಬ್ದಾರಿ ಹೊತ್ತಿದ್ದಾಳೆ. ಗೌತಮ್- ಭೂಮಿಕಾ ರಿಯಲ್ ಮಗಳ ತಲೆಗೆ ಜೈದೇವ್ ಏನೇನೋ ತುಂಬಿ ಅವಳನ್ನು ವಿಲನ್ ಮಾಡುವ ಸಾಧ್ಯತೆ ಇದೆ ಅನ್ನೋದು ವೀಕ್ಷಕರ ಅಭಿಪ್ರಾಯ.
ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!
ಅತ್ತ ಗೌತಮ್ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: Amruthadhaare Serial: ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ