ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthdhaare Serial: ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

Amruthdhaare Serial: ಅಮೃತಧಾರೆಯಲ್ಲಿ ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ವೀಕ್ಷಕರು ಭೂಮಿಕಾ ನಡವಳಿಕೆಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜೈದೇವ್‌ ವಿಚಾವಾಗಿಯೂ ಕುತೂಹಲ ತಿರುವು ಪಡೆದುಕೊಂಡಿದೆ. ಜೈದೇವ್‌ ಸ್ವತಃ ಭಾವನ ಮುಂದೆ ಸಿಕ್ಕಿ ಬೀಳುವಂತಿದೆ. ಭೂಮಿ ತಮ್ಮ ಏಕಾಏಕಿ ಜಯದೇವ್‌ ಭೇಟಿ ಮಾಡಲು ಬಂದಿದ್ದಾನೆ.

ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 23, 2026 10:23 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ವೀಕ್ಷಕರು ಭೂಮಿಕಾ (Bhoomika) ನಡವಳಿಕೆಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜೈದೇವ್‌ (Jaidev) ವಿಚಾವಾಗಿಯೂ ಕುತೂಹಲ ತಿರುವು ಪಡೆದುಕೊಂಡಿದೆ.

ನಿಜ ಬಯಲಾಯ್ತು..ಮನಸು ಭಾರವಾಯ್ತು..

ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೌತಮ್‌ಗೆ ಗೊತ್ತಾಗಿದೆ. ಎಲ್ಲ ತನ್ನ ಶಾಲೆಯ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸಿದ್ದಾಳೆ ಭೂಮಿ. ಇದೆಲ್ಲ ಗಮನಿಸಿದ ಗೌತಮ್‌ಗೆ ಮನಸು ಭಾರವಾಗಿದೆ. ಆದರೆ ಅದಕ್ಕೂ ಮುಂಚೆ ಗೌತಮ್​ ಮತ್ತು ಭೂಮಿಕಾ ದೇವಾಲಯವೊಂದಕ್ಕೆ ಹೋಗಿದ್ದಾರೆ. ಅದು ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ. ಅಲ್ಲಿ ಕಣಿ ಹೇಳುವವಳು ಇವರಿಬ್ಬರ ಕೈ ನೋಡಿದ್ದಾಳೆ.

ಇದನ್ನೂ ಓದಿ: NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

ಅದರಲ್ಲಿ ಕೊರವಂಜಿ ನಿಮ್ಮಿಬ್ಬರ ಸಂಸಾರ ನೂರ್ಕಾಲ ಚೆನ್ನಾಗಿ ಇರುತ್ತದೆ. ಮುತ್ತೈದೆಯಾಗಿಯೇ ಕೊನೆಯವರೆಗೂ ಇರುವೆ. ನಿಮ್ಮ ಸಂಸಾರ ತುಂಬಾ ಚೆನ್ನಾಗಿ ಸದಾಕಾಲ ಇರುತ್ತದೆ ಎಂದಿದ್ದಾಳೆ. ದೇವರ ಸನ್ನಿಧಿಯಲ್ಲಿ ಹೇಳಿದ ಮಾತಿನಿಂದ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ಕನ್​ಫರ್ಮ್​ ಆಗಿದೆ.

ಕೆಡಿ ಸಿಕ್ಕಿಬಿದ್ನಾ?

ಮತ್ತೊಂದು ಕಡೆ ಜೈದೇವ್‌ ಸ್ವತಃ ಭಾವನ ಮುಂದೆ ಸಿಕ್ಕಿ ಬೀಳುವಂತಿದೆ. ಭೂಮಿ ತಮ್ಮ ಏಕಾಏಕಿ ಜಯದೇವ್‌ ಭೇಟಿ ಮಾಡಲು ಬಂದಿದ್ದಾನೆ. ಜೈದೇವ್‌ ಟೀ, ಕಾಫಿ ಬೇಕಾ ಎಂದು ಕೇಳುವಾಗ, ಹೇಗೋ ಪತ್ನಿ ಇಲ್ಲವಲ್ಲ ಎಂದಿದ್ದಾನೆ ಭೂಮಿ ತಮ್ಮ. ಈ ಸನ್ನಿವಶ ನೋಡಿದ್ರೆ ಜೈದೇವ್‌ ಸತ್ಯ ಭೂಮಿ ತಮ್ಮನಿಗೆ ಗೊತ್ತಿರುವಂತಿದೆ. ಜೈದೇವ್‌ಗೆ ಮುಂದೆ ಹಬ್ಬ ಕಾದಿರುವಂತಿದೆ ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ.



ಮಲ್ಲಿ ಈಗಾಗಲೇ ಎಂಟ್ರಿ ಕೊಟ್ಟಿದ್ದಾಳೆ. ಹೊಸ ಪ್ರೋಮೋ ಔಟ್‌ ಆಗಿದೆ. ಭೂಮಿಗೆ ಮೂರನೇ ಮಗು ಮಾಡಿಕೊಳ್ಳುವ ಪ್ಲ್ಯಾನ್‌ ಇದೆಯಾ ಎಂದು ತಮಾಷೆ ಮಾಡಿದ್ದಾಳೆ. ಆದರೆ ಭೂಮಿ ತುಂಬಾ ಕೋಪದಲ್ಲಿ ಸಾಯೋ ಸಮಯ ಬಂದಿದೆ ಎಂದು ಕಿರುಚಾಡಿದ್ದಾಳೆ. ಈ ಪ್ರೋಮೋ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲರ ಮುಂದೆ ತಾನು ಬದಲಾದಂತೆ ನಟಿಸುತ್ತಿರುವ ಶಕುಂತಲಾ, ಕೆಡಿ ಮಗ ಜೈದೇವ್ ಜೊತೆ ಕೈ ಜೋಡಿಸಿದ್ದಾಳೆ. ಶಕುಂತಲಾಳಲ್ಲಿ ಹಳೆಯ ದ್ವೇಷ ಕಾಣಿಸುತ್ತಿರೋದು ಲಕ್ಷ್ಮೀಕಾಂತ್ ಗಮನಕ್ಕೆ ಬಂದಿದೆ.

ಹಾಗೆಯೇ ಗೌತಮ್ ಮತ್ತು ಭೂಮಿಕಾ ಬಗ್ಗೆ ಶಕುಂತಲಾಳ ಅಸಮಾಧಾನ ಲಕ್ಷ್ಮೀಕಾಂತ್‌ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಜೈದೇವ್ ಮನೆಯಿಂದ ಹೊರಗೆ ಬರಲು ಮತ್ತು ಭೂಮಿಕಾ ತಮ್ಮ ವಿರುದ್ಧ ನಿಂತಿರೋದಕ್ಕೆಲ್ಲಾ ಮಲ್ಲಿಯೇ ಕಾರಣ. ಭೂಮಿಕಾಗೆ ಕ್ಯಾನ್ಸರ್ ಬಂದಿರುವ ವಿಷಯ ತಿಳಿದ್ರೆ ಶಕುಂತಲಾ ಅದನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಾಳೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಮತ್ತೊಂದೆಡೆ ಮಲ್ಲಿ ಬಂದಿರೋದು ಕೆಡಿಗಳಲ್ಲಿ ನಡುಕು ಹುಟ್ಟಿಸಿದೆ.

ಇದನ್ನೂ ಓದಿ: Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ