ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Appu Cup Season 3: ಅಪ್ಪು ಕಪ್ ಸೀಸನ್ 3ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

Ashwini puneeth: ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಅಪ್ಪು ಕಪ್ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) 2 ಸೀಸನ್ ಅದ್ಧೂರಿಯಾಗಿ ನಡೆದಿದೆ. ಜುಲೈಯಲ್ಲಿ ಅಪ್ಪು ಕಪ್ ಸೀಸನ್ 3 ಲೀಗ್ ಪಂದ್ಯಗಳು ಆರಂಭವಾಗಲಿದೆ. ಆಗಸ್ಟ್ 16, 17ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಅಪ್ಪು ಕಪ್‌ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

Profile Ramesh B Jun 22, 2025 11:23 PM

ಬೆಂಗಳೂರು: ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಅಪ್ಪು ಕಪ್ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) 2 ಸೀಸನ್ ಅದ್ಧೂರಿಯಾಗಿ ನಡೆದಿದೆ. ಜುಲೈಯಲ್ಲಿ ಅಪ್ಪು ಕಪ್ ಸೀಸನ್ 3 (Appu Cup Season 3) ಲೀಗ್ ಪಂದ್ಯಗಳು ಆರಂಭವಾಗಲಿದೆ. ಇತ್ತೀಚೆಗೆ ಅಪ್ಪು ಕಪ್ ಸೀಸನ್ 3 ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ (Ashwini puneeth), ವಿಧಾನ ಪರಿಷತ್ ಸದಸ್ಯ ಶರವಣ, ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಹಾಗೂ ಶಾಸಕ ರಾಜು ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಟಾರ್ ರಾಯಭಾರಿಗಳಾದ ಪ್ರಿಯಾಂಕಾ ಉಪೇಂದ್ರ, ಅನಿರುದ್ಧ ಜಟ್ಕರ್, ಸೃಜನ್ ಲೋಕೇಶ್ , ರಾಜವರ್ಧನ್ ಹಾಗೂ ಗುಡ್ ವಿಲ್ ಸ್ಟಾರ್ ರಾಯಭಾರಿ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಅಪ್ಪು ಕಪ್ ಸೀಸನ್ 3 ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉದ್ಘಾಟನಾ ಸಮಾರಂಭ ನಡೆದಿದೆ.

Appu Cup Season 3 2

ʼʼಕಳೆದೆರೆಡು ಸೀಸನ್‌ಗಳಿಂದ ಅಶ್ವಿನಿ ಪುನೀತ್ ರಾಜಕುಮಾರ್ ನಮ್ಮ ಜತೆಗೆ ಇದ್ದಾರೆ. ಈ ಬಾರಿಯ ಅಪ್ಪು ಕಪ್‌ನ ವಿಶೇಷವೆಂದರೆ ಜುಲೈ 25, 26, 27ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 16, 17ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು ಹತ್ತು ತಂಡಗಳಿರುತ್ತದೆ. ಅದರಲ್ಲಿ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಲಿದೆʼʼ ಎಂದು ಆಯೋಜಕ ಚೇತನ್ ಸೂರ್ಯ ತಿಳಿಸಿದರು.

ಅಶ್ವಿನಿ ಪುನೀತ್ ರಾಜಕುಮರ್ ಅಪ್ಪು ಕಪ್ ಯಶಸ್ವಿಯಾಗಲೆಂದು ಹಾರೈಸಿದರು. ʼʼಸದಾ ನಾನು ಚೇತನ್ ಅವರ ಜತೆಗೆ ಇರುತ್ತೇನೆʼʼ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್‌ನ ಮಾಲೀಕ ಶರವಣ ತಿಳಿಸಿದರು.

ಈ ಸುದ್ದಿಯನ್ನೂ ಓದಿ: Ashwini puneeth: ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ; ಅಶ್ವಿನಿ ಪುನೀತ್ ಕನಸಿಗೆ ಶಾಸಕ ಗೋಪಾಲಯ್ಯ-ಅನುಶ್ರೀ ಸಾಥ್

Appu Cup Season 3 3

ಅಪ್ಪು ಕಪ್ ಸೀಸನ್ 3ರಲ್ಲಿ ಭಾಗವಹಿಸುತ್ತಿರುವ ತಂಡಗಳು

  • ವೀರ ಕನ್ನಡಿಗ ಬುಲ್ಸ್- ಮಾಲೀಕರು ಮೊನೀಶ್ ಸಿ., ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್.
  • ಬಿಂದಾಸ್ ರಾಯಲ್ ಚಾಲೆಂಜರ್ಸ್- ಮಾಲೀಕರು ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್.
  • ಜಾಕಿ ರೈಡರ್ಸ್- ಮಾಲೀಕರು ಶ್ರೀಹರ್ಷ, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕಾ ಉಪೇಂದ್ರ.
  • ಮೌರ್ಯ ಸ್ಟ್ರೈಕರ್ಸ್- ಮಾಲೀಕರು ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.
  • ಯುವರತ್ನ ಚಾಂಪಿಯನ್ಸ್- ಮಾಲೀಕರು ದಿವ್ಯಾ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯಾ ರಾಮಕುಮಾರ್.
  • ಪವರ್ ಪೈಥಾನ್ಸ್- ಮಾಲೀಕರು ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.
  • ಗಂಧದಗುಡಿ ವಾರಿಯರ್ಸ್- ಮಾಲೀಕರು ಸತೀಶ್ ಎಂ., ನಾಯಕ ಹರೀಶ್ ನಾಗರಾಜ್, ಸ್ಟಾರ್ ರಾಯಭಾರಿ ವಿಕ್ರಮ್ ರವಿಚಂದ್ರನ್.
  • ಜೇಮ್ಸ್ ವಾರಿಯರ್ಸ್- ಮಾಲೀಕರು ಸತ್ಯ, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ಅನಿರುದ್ಧ ಜಟ್ಕರ್.
  • ದೊಡ್ಮನೆ ಡ್ರಾಗನ್ಸ್- ಮಾಲೀಕರು ಸುರೇಶ್ & ನಿರಂತರ ಗಣೇಶ್, ನಾಯಕ ಪ್ರವೀಣ್ ತೇಜ್, ‌ಸ್ಟಾರ್ ರಾಯಭಾರಿ ವಸಿಷ್ಠ ಸಿಂಹ.
  • ಅರಸು ಹಂಟರ್ಸ್- ಮಾಲೀಕರು ಆನಂದ್, ನಾಯಕ ಭುವನ್ ಗೌಡ, ಸ್ಟಾರ್ ರಾಯಭಾರಿ ಇಮ್ರಾನ್ ಸರ್ದಾರಿಯಾ .