ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಸಿನಿಮಾಕ್ಕೆ ಚೆನ್ನೈನಲ್ಲಿ ಮುಹೂರ್ತ; ʻಜೈ ಭೀಮ್‌ʼ ಡೈರೆಕ್ಟರ್ ಜೊತೆ ಕೈಜೋಡಿಸಿದ ನಟ ಸೂರ್ಯ

ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ಪ್ರತಿಷ್ಠಿತ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ ಈ ಹೊಸ ಚಿತ್ರಕ್ಕೆ ಇಂದು (ಜೂನ್ 29) ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಮೆಗಾ ಪ್ರಾಜೆಕ್ಟ್‌ಗಾಗಿ ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಹಾಗೂ 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ಪಾರ್ಕ್ ಹ್ಯಾಟ್ ಹೋಟೆಲ್‌ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಈ ಸಿನಿಮಾ ಆರಂಭವಾಗಿದೆ. ಚಿತ್ರತಂಡದ ಪ್ರಮುಖರು ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವುದ ಫೋಟೋಗಳು ಇಲ್ಲಿವೆ. ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಗಣದ ಅಧಿಕೃತ ಮಾಹಿತಿ ಹೊರಬೀಳಲಿದೆ.

Hombale Films: ʻಜೈ ಭೀಮ್ʼ ಡೈರೆಕ್ಟರ್‌ ಜೊತೆ ಸೂರ್ಯ ಹೊಸ ಸಿನಿಮಾ ಮುಹೂರ್ತ

-

Avinash GR
Avinash GR Jun 29, 2026 9:03 PM