ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baramulla Movie X Review: ಕಾಶ್ಮೀರದ ಕಥೆ, ಮಿಸ್ಟ್ರಿ ಥ್ರಿಲ್ಲರ್ ಮೂವಿ ‘ಬಾರಾಮುಲ್ಲಾʼ ಮೆಚ್ಚಿಕೊಂಡ ಪ್ರೇಕ್ಷಕರು! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಆರ್ಟಿಕಲ್ 370 ಚಿತ್ರ ಖ್ಯಾತಿಯ ಆದಿತ್ಯ ಸುಹಾಸ್ (Aditya suhas) ಜಂಬಾಳೆ ಅವರು 'ಬಾರಾಮುಲ್ಲಾ' (Baramulla Movie X Review) ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದ ಮಕ್ಕಳ ನಿಗೂಢ ಕಣ್ಮರೆಗಳ ಬಗ್ಗೆ ತನಿಖೆ ಮಾಡುವ ಡಿಎಸ್ಪಿ ರಿದ್ವಾನ್ ಸೈಯದ್ ಸುತ್ತ ಇರೋ ಕಥೆಯ ಸಿನಿಮಾ ಇದು. ಇದೀಗ ಈ ಸಿನಿಮಾ (Movie Streaming) ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಡಿಎಸ್ಪಿ ರಿದ್ವಾನ್ ಸೈಯದ್ ಪಾತ್ರದಲ್ಲಿ ಮಾನವ್ ಕೌಲ್ ನಟಿಸಿದರೆ, ಭಾಷಾ ಸುಂಬಲಿ ಮತ್ತು ಅರಿಸ್ತಾ ಮೆಹ್ತಾ ಅವರ ಕುಟುಂಬದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಮಿಸ್ಟ್ರಿ ಥ್ರಿಲ್ಲರ್ ಮೂವಿ `ಬಾರಾಮುಲ್ಲಾʼ ಬಗ್ಗೆ ಪ್ರೇಕ್ಷಕರು ಏನಂದ್ರು?

Baramulla Movie -

Yashaswi Devadiga
Yashaswi Devadiga Nov 8, 2025 11:02 AM

ಮಾನವ ಕೌಲ್ ನಟನೆಯ 'ಬಾರಾಮುಲ್ಲಾ' (Baramulla Movie) ಚಿತ್ರವು ನವೆಂಬರ್ 7 ರಂದು ನೆಟ್‌ಫಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ (Netflix) ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಆರ್ಟಿಕಲ್ 370 ಚಿತ್ರ ಖ್ಯಾತಿಯ ಆದಿತ್ಯ ಸುಹಾಸ್ (Aditya suhas) ಜಂಬಾಳೆ ಅವರು 'ಬಾರಾಮುಲ್ಲಾ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದ ಮಕ್ಕಳ ನಿಗೂಢ ಕಣ್ಮರೆಗಳ ಬಗ್ಗೆ ತನಿಖೆ ಮಾಡುವ ಡಿಎಸ್ಪಿ ರಿದ್ವಾನ್ ಸೈಯದ್ ಸುತ್ತ ಇರೋ ಕಥೆಯ ಸಿನಿಮಾ ಇದು. ಇದೀಗ ಈ ಸಿನಿಮಾ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ವಿಭಿನ್ನ ರೀತಿಯಲ್ಲಿ ನೋಡುವ ಸಿನಿಮಾ

ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರು ಬಿ62 ಸ್ಟುಡಿಯೋಸ್‌ನ ಆದಿತ್ಯ ಧರ್‌ ಮತ್ತು ಲೋಕೇಶ್ ಧರ್ ಅವರ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ. ಬಾರಾಮುಲ್ಲಾದಲ್ಲಿ ಕಾಶ್ಮೀರವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ನೋಡಬಹುದು. 1 ಗಂಟೆ 52 ನಿಮಿಷಗಳ ಅವಧಿಯ ಸಿನಿಮಾ ಇದು. ಇತ್ತೀಚೆಗೆ ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿದೆ ಮತ್ತು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಇದೆ.

ಇದನ್ನೂ ಓದಿ: Bigg Boss Kannada 12: ಈ ವಾರ ಔಟ್‌ ಆಗೋದು ಯಾರು? ಬಿಗ್‌ ಬಾಸ್‌ ಕೊಟ್ಟ ಹಿಂಟ್‌ ಏನು?

ವೀಕ್ಷಕರ ವಿಮರ್ಶೆ!

ಒಬ್ಬರು ಬರೆದುಕೊಂಡಿದ್ದು ಹೀಗೆ, "ಬಹಳ ದಿನಗಳ ನಂತರ ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಬಾರಾಮುಲ್ಲಾ ಚಿತ್ರವನ್ನು ಈಗಷ್ಟೇ ನೋಡಿದೆ. ಈ ಚಿತ್ರದ ಪ್ರತಿಯೊಂದು ದೃಶ್ಯವೂ ಯೋಗ್ಯವಾಗಿದೆ ಮತ್ತು ಪರಿಕಲ್ಪನೆಯು ಮುಂದಿನ ಹಂತವಾಗಿದೆ. ಈ ಕಥೆಯನ್ನು ನೀಡಿದಕ್ಕೆ ಧನ್ಯವಾದಗಳು" ಎಂದು ಬರೆದಿದ್ದಾರೆ.



ಮತ್ತೊಬ್ಬ ಬಳಕೆದಾರರು, "ಬಾರಾಮುಲ್ಲಾ ನೋಡಲೇಬೇಕಾದ ಚಿತ್ರ. ಎವರ್ ಸೀನ್ ಪ್ರಾಮುಖ್ಯತೆಯನ್ನು ಹೊಂದಿದೆ. ಅತ್ಯುತ್ತಮ ಸಿನಿಮಾ" ಎಂದು ಬರೆದಿದ್ದಾರೆ.

ಮತ್ತೊಬ್ಬರು ʻಬಾರಾಮುಲ್ಲಾ ನೋಡಿದೆ. ಪ್ರತಿಯೊಬ್ಬ ನಟನ ನಟನೆ, ಕಥೆ, ಕಥಾವಸ್ತು, ಹಾರರ್ / ಭಯಾನಕ ಭಾಗ, ಹಿನ್ನೆಲೆ ಸಂಗೀತ ಎಲ್ಲವೂ ದೃಶ್ಯಕ್ಕೆ ತಕ್ಕಂತೆ ಇವೆ. ಚಲನಚಿತ್ರವು ಟ್ರ್ಯಾಕ್‌ನಿಂದ ಹೊರಗುಳಿದ ಅಥವಾ ಬೇಸರಗೊಂಡ ಒಂದೇ ಒಂದು ಅಂಶವೂ ಇಲ್ಲ. ಇದು ನೋಡಲೇಬೇಕಾದ ಚಿತ್ರ ಎಂದು ಬರೆದುಕೊಂಡಿದ್ದಾರೆ.



ಇನ್ನೊಬ್ಬ ಪ್ರೇಕ್ಷಕರು ʻನೆಟ್‌ಫ್ಲಿಕ್ಸ್‌ನಲ್ಲಿ ಬಾರಾಮುಲ್ಲಾ ನೋಡಿದೆ. ಮಾನವ್ ಕೌಲ್ ಅವರ ಅತ್ಯುತ್ತಮವಾದದ್ದನ್ನು ನೀಡಿದ್ದಾರೆ! ಭಾವನಾತ್ಮಕ ಮತ್ತು ಭಯಾನಕವಾದ ಅಲೌಕಿಕ ಥ್ರಿಲ್ಲರ್. ಅದ್ಭುತ ಕ್ಯಾಮೆರಾ ವರ್ಕ್‌ʼ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರೊಬ್ಬರು ʻನೆಟ್‌ಫ್ಲಿಕ್ಸ್‌ನಲ್ಲಿ ಬಾರಾಮುಲ್ಲಾ ವೀಕ್ಷಿಸಿದೆ - ಕಾಶ್ಮೀರಿ ಪಂಡಿತರ ನೋವು ಮತ್ತು ಗಡಿಪಾರುಗಳ ಕಾಡುವ ಜ್ಞಾಪನೆ. ಬೇರು ಸಹಿತ ಕಿತ್ತುಹೋದ, ಸಮುದಾಯ ಬಗ್ಗೆ ಕಥೆ ಚೆನ್ನಾಗಿ ಕಟ್ಟಿಕೊಟ್ಟಿದೆʼ ಎಂದು ಬರೆದುಕೊಂಡಿದ್ದಾರೆ.



ರೋಮಾಂಚಕ ತಿರುವುಗಳ ಮಿಶ್ರಣ

ಈ ಚಿತ್ರವು ಸಸ್ಪೆನ್ಸ್, ಭಾವನಾತ್ಮಕ ನಾಟಕ ಮತ್ತು ರೋಮಾಂಚಕ ತಿರುವುಗಳ ಮಿಶ್ರಣವಾಗಿದ್ದು, ಪ್ರೇಕ್ಷಕರನ್ನು ಕೊನೆಯವರೆಗೂ ಸೆರೆಹಿಡಿಯುತ್ತದೆ. ಬಾರಾಮುಲ್ಲಾ ಚಿತ್ರವನ್ನು ಆದಿತ್ಯ ಸುಹಾಸ್ ಜಂಭಾಲೆ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ (ಜಿಯೋ ಸ್ಟುಡಿಯೋಸ್) ಮತ್ತು ಆದಿತ್ಯ ಧರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: Bigg Boss: ಬಿಗ್‌ ಬಾಸ್‌ಗೆ ಹೋಗಿ ತಪ್ಪು ಮಾಡಿದೆ, ಬಹಳ ಹಿಂಸೆ ಅನುಭವಿಸಿದೆ! ಹೀಗ್ಯಾಕೆ ಅಂದ್ರು ಖ್ಯಾತ ನಿರೂಪಕಿ?

ಡಿಎಸ್ಪಿ ರಿದ್ವಾನ್ ಸೈಯದ್ ಪಾತ್ರದಲ್ಲಿ ಮಾನವ್ ಕೌಲ್ ನಟಿಸಿದರೆ, ಭಾಷಾ ಸುಂಬಲಿ ಮತ್ತು ಅರಿಸ್ತಾ ಮೆಹ್ತಾ ಅವರ ಕುಟುಂಬದ ಪ್ರಮುಖ ಸದಸ್ಯರ ಪಾತ್ರವನ್ನು ನಿರ್ವಹಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರೋಹನ್ ಸಿಂಗ್, ನಿಲೋಫರ್ ಹಮೀದ್, ಮಾಸೂಮ್ ಮುಮ್ತಾಜ್ ಖಾನ್, ಅಶ್ವಿನಿ ಕೌಲ್, ವಿಕಾಸ್ ಶುಕ್ಲಾ, ಮೀರ್ ಸರ್ವರ್, ಮದನ್ ನಜ್ನೀನ್ ಮತ್ತು ಕಿಯಾರಾ ಖನ್ನಾ ಇದ್ದಾರೆ.