Abhishek Sharma: ಸೂರ್ಯಕುಮಾರ್, ರಾಹುಲ್ ಟಿ20 ದಾಖಲೆ ಹಿಂದಿಕ್ಕಿದ ಅಭಿಷೇಕ್ ಶರ್ಮ
IND vs AUS 5th T20I: ಭಾರತ ಅಂತಿಮ ಟಿ20ಗೆ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿತು. ತಿಲಕ್ ವರ್ಮಗೆ ವಿಶ್ರಾಂತಿ ನೀಡಿ ರಿಂಕು ಸಿಂಗ್‌ಗೆ ಅವಕಾಶ ನೀಡಿತು. ಆದರೆ ಆಸ್ಟ್ರೇಲಿಯಾ ಕಳೆದ ಪಂದ್ಯದ ಆಡುವ ಬಳಗವನ್ನೇ ಮುಂದುವರಿಸಿತು. ಭಾರತ ಈಗಾಗಲೇ 2–1 ಅಂತರದಲ್ಲಿ ಸುರಕ್ಷಿತ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 17 ವರ್ಷಗಳಿಂದ ಒಮ್ಮೆಯೂ ಸರಣಿ ಸೋಲದ ದಾಖಲೆ ಕಾಪಾಡಿಕೊಂಡು ಬಂದಿದೆ. ಸೂರ್ಯಕುಮಾರ್ ಯಾದವ್ ಪಡೆ ಈಗ ಸರಣಿ ಗೆಲುವಿನ ಅವಕಾಶ ಹೊಂದಿದೆ.
ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಅಭಿಷೇಕ್ ಶರ್ಮ -
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟಿ20(IND vs AUS 5th T20I) ಪಂದ್ಯದಲ್ಲಿ ಟೀಮ್ ಇಂಡಿಯಾದ ಎಡಗೈ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮ(Abhishek Sharma) ಅವರು ನೂತನ ಮೇಲುಗಲ್ಲೊಂದು ತಲುಪಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಪಂದ್ಯದಲ್ಲಿ 21 ರನ್ ಗಳಿಸುತ್ತಿದ್ದಂತೆ ಅವರು ಈ ಸಾಧನೆಗೈದರು.
28 ಇನಿಂಗ್ಸ್‌ನಲ್ಲಿ ಸಾವಿರ ರನ್ ಪೂರೈಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಈ ಸಾಧನೆಗೈದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ವಿರಾಟ್ ಕೊಹ್ಲಿ ಮೊದಲಿಗ. ಅವರು 27 ಇನಿಂಗ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ. ಆದರೆ, ಅತಿ ಕಡಿಮೆ ಎಸೆತಗಳಲ್ಲಿ ಸಾವಿರ ರನ್ ಪೇರಿಸಿದ ದಾಖಲೆ ಅಭಿಷೇಕ್ ಶರ್ಮ ಹೆಸರಿಗೆ ಸೇರ್ಪಡೆಗೊಂಡಿದೆ. ಅಭಿಷೇಕ್ 528 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದರು. ಸೂರ್ಯಕುಮಾರ್(573) ಎರಡನೇ ಸ್ಥಾನಕ್ಕೆ ಕುಸಿದರು.
ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1000 ರನ್
ವಿರಾಟ್ ಕೊಹ್ಲಿ-27
ಅಭಿಷೇಕ್ ಶರ್ಮಾ-28
ಕೆಎಲ್ ರಾಹುಲ್-29
ಸೂರ್ಯಕುಮಾರ್ ಯಾದವ್-31
ರೋಹಿತ್ ಶರ್ಮಾ-40
ಅತಿ ಕಡಿಮೆ ಎಸೆತಗಳಿಂದ ಸಾವಿರ ರನ್
ಅಭಿಷೇಕ್ ಶರ್ಮಾ-528
ಸೂರ್ಯಕುಮಾರ್ ಯಾದವ್-573
ಫಿಲ್ ಸಾಲ್ಟ್-599
ಗ್ಲೆನ್ ಮ್ಯಾಕ್ಸ್‌ವೆಲ್-604
ಆಂಡ್ರೆ ರಸೆಲ್ / ಫಿನ್ ಅಲೆನ್-609
ಪಂದ್ಯ ಸ್ಥಗಿತ
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಉತ್ತಮ ಆರಂಭ ಪಡೆದಿದೆ. ಸದ್ಯ 4.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದೆ. ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಜೋರಾದ ಮಿಂಚು ಕೂಡ ಇರುವ ಕಾರಣ ಪ್ರೇಕ್ಷಕರನ್ನು ಸುರಕ್ಷಿತ ಸ್ಥಳದಲ್ಲಿ ಕೂರಿಸಲಾಗಿದೆ.
ಭಾರತ ಈ ಪಂದ್ಯದಕ್ಕೆ ಒಂದು ಬದಲಾವಣೆ ಮಾಡಿತು. ತಿಲಕ್ ವರ್ಮಗೆ ವಿಶ್ರಾಂತಿ ನೀಡಿ ರಿಂಕು ಸಿಂಗ್‌ಗೆ ಅವಕಾಶ ನೀಡಿತು. ಆದರೆ ಆಸ್ಟ್ರೇಲಿಯಾ ಕಳೆದ ಪಂದ್ಯದ ಆಡುವ ಬಳಗವನ್ನೇ ಮುಂದುವರಿಸಿತು. ಭಾರತ ಈಗಾಗಲೇ 2–1 ಅಂತರದಲ್ಲಿ ಸುರಕ್ಷಿತ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 17 ವರ್ಷಗಳಿಂದ ಒಮ್ಮೆಯೂ ಸರಣಿ ಸೋಲದ ದಾಖಲೆ ಕಾಪಾಡಿಕೊಂಡು ಬಂದಿದೆ. ಸೂರ್ಯಕುಮಾರ್ ಯಾದವ್ ಪಡೆ ಈಗ ಸರಣಿ ಗೆಲುವಿನ ಅವಕಾಶ ಹೊಂದಿದೆ.
ಇದನ್ನೂ ಓದಿ IND vs AUS 5th T20: ಟಾಸ್ ಸೋತ ಭಾರತ; ತಂಡದಲ್ಲಿ ಒಂದು ಬದಲಾವಣೆ
5ನೇ ಟಿ20 ಪಂದ್ಯದ ಉಭಯ ಆಡುವ ಬಳಗ
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿ.ಕೀ.), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್(ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್(ವಿಕೆಟ್ ಕೀಪರ್), ಟಿಮ್ ಡೇವಿಡ್, ಜೋಶ್ ಫಿಲಿಪ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ.