BBK 12: ರಿಷಾ ಎಲಿಮಿನೇಟ್ ಆಗೋದು ಪಕ್ಕಾ? ಬಿಗ್ ಬಾಸ್ ಕೊಟ್ಟ ಸುಳಿವು ಏನು?
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ (Risha) ಅವರು ಬ್ರೇಕ್ ಮಾಡಿದ್ದಾರೆ. ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ (Risha) ಅವರು ಎಲಿಮಿನೇಟ್ (Eliminate) ಆಗುತ್ತಾರೆಯೇ ಎಂಬ ಚರ್ಚೆ ನಡೆದಿತ್ತು. ಆದರೆ ಬಿಗ್ ಬಾಸ್ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಎಪಿಸೋಡ್‌ನಲ್ಲಿ ಒಂದು ಸಣ್ಣ ಸುಳಿವು ನೀಡಿದೆ.
                                bigg boss kannada -
                                
                                Yashaswi Devadiga
                            
                                Nov 4, 2025 12:11 PM
                            ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ದೊಡ್ಡ ಸಂಗತಿಯೇ ನಡೆದು ಹೋಗಿದೆ. ಹೌದು ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ (Risha) ಅವರು ಎಲಿಮಿನೇಟ್ (Eliminate) ಆಗುತ್ತಾರೆಯೇ ಎಂಬ ಚರ್ಚೆ ನಡೆದಿತ್ತು. ಆದರೆ ಬಿಗ್ ಬಾಸ್ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಎಪಿಸೋಡ್‌ನಲ್ಲಿ ಒಂದು ಸಣ್ಣ ಸುಳಿವು ನೀಡಿದೆ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ನಿಯಮವನ್ನು ರಿಷಾ (Risha) ಅವರು ಬ್ರೇಕ್ ಮಾಡಿದ್ದಾರೆ. ಗಿಲ್ಲಿ ಮೇಲೆ ಅವರು ಕೈ ಮಾಡಿದ್ದಾರೆ. ಕಳೆದ ಸೀಸನ್ ಅಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದರು. ಆದರೀಗ ಬಿಗ್ ಬಾಸ್ ಒಂದು ಸೂಚನೆ ನೀಡಿದೆ.
ಇದನ್ನೂ ಓದಿ: BBK 12: ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ಬಿಗ್ ಬಾಸ್ ಕೊಟ್ಟ ಸುಳಿವು ಆದ್ರೂ ಏನು?
ಇಂದಿನ ಸಂಚಿಕೆಯಲ್ಲಿ ಮನೆಯ ಸದಸ್ಯರು ಬಿಗ್ ಬಾಸ್ನ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಎಲ್ಲಾ ನಿಯಮ ಉಲ್ಲಂಘನೆಗಳನ್ನು, ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪರವರು ಚರ್ಚಿಸಿ, ವಿಶ್ಲೇಷಿಸಿ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿದೆ. ಹೀಗಾಗಿ ರಿಷಾ ಅವರ ಕುರಿತು ವೀಕೆಂಡ್ ಪಂಚಾಯ್ತಿಯಲ್ಲಿ ಚರ್ಚೆ ಆಗೋದು ಫಿಕ್ಸ್ ಆದಂತಿದೆ.
ಜಗಳ ಆಗಿದ್ಯಾಕೆ?
ಮೊದಲಿಗೆ ಬಕೆಟ್ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದಾರೆ. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್ ರೂಮ್ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆದಿದ್ದಾರೆ. ಬಟ್ಟೆ ತಂದು ಬಾತ್ ರೂಮ್ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದಾರೆ. ರಕ್ಷಿತಾ ಅವರು ಎಷ್ಟೇ ತಡೆಯಲು ಪ್ರಯತ್ನಿಸಿದರೂ ರಿಷಾ ಕೋಪ ಮಾತ್ರ ತಣ್ಣಗಾಗಿಲ್ಲ.
ಇನ್ನು ಮಸಿ ಬಳಿಯುವ ಸಂದರ್ಭದಲ್ಲಿಯೂ ಗಿಲ್ಲಿ ಹಾಗೂ ರಿಷಾ ಮಧ್ಯೆ ಮಾತುಗಳು ಬಂದವು. ಗಿಲ್ಲಿ ಕೂಡ ʻನನ್ನ ಮುಖವಾಡ ಕಳುಚುತ್ತಿಯೋ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಮುಖವಾಡ ಮಾತ್ರ ಈಗಾಗಲೇ ಕಳಚಿ ಸ್ವಿಮ್ಮಿಂಗ್ ಫೂಲ್ ಅಲ್ಲಿ ಕೊಚ್ಚಿಕೊಂಡುʼ ಹೋಗಿದೆ ಎಂದರು.ಇನ್ನು ಈ ಕಾರಣಗಳನ್ನು ಕೊಟ್ಟು ರಿಷಾ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಅಷ್ಟೇ ಅಲ್ಲ ರಿಷಾ ಕೂಡ ನಾನು ಇರೋದೇ ಹೀಗೆ ಅಂತ ಮೊಂಡು ವಾದ ಕೂಡ ಮಾಡಿದ್ದಾರೆ.
ಮೊದಲಿಂದಲೂ ಗಿಲ್ಲಿಗೂ ರಿಷಾಗೂ ಅಷ್ಟಕಷ್ಟೆ!
ಈ ಮುಂಚೆ ಕೂಡ ಕಳಪೆ ವಿಚಾರಕ್ಕಾಗಿ ಗಿಲ್ಲಿ ಅವರನ್ನ ಟಾರ್ಗೆಟ್ ಮಾಡಿದ್ದು ರಿಷಾ. ಅಶ್ವಿನಿ ಗೌಡ ಹಾಗೂ ರಿಷಾ ಮುಂದಿದ್ದರು. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ‘ಗಿಲ್ಲಿ ನಿನಗೆ ಈ ವಾರ ಎಲ್ಲರೂ ಕಳಪೆ ನೀಡಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ರಿಷಾ ಗೌಡ ಕೂಡ ಮಾತನಾಡುವಾಗ ‘ಗಿಲ್ಲಿಗೆ ಕಳಪೆ ಕೊಡಬೇಕು’ ಎಂದು ಹೇಳಿದ್ದರು.