ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Agnisakshi Serial : ಅವನು ಸುಡುವ ಜ್ವಾಲೆ, ಅವಳು ಸುರಿವ ಮಳೆ! ‘ಅಗ್ನಿಸಾಕ್ಷಿ’ಈ ದಿನದಿಂದ ಶುರು

Colora Kannada: ಈ ಬಾರಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಇದೇ ಜೂನ್ 8ರಿಂದ ಶುರುವಾಗಲಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಹೊಸ ಪ್ರೋಮೋ ಝಲಕ್ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳು ಸಂಪೂರ್ಣ ಭಿನ್ನವಾಗಿ ಮೂಡಿಬಂದಿವೆ.

ಅವನು ಸುಡುವ ಜ್ವಾಲೆ, ಅವಳು ಸುರಿವ ಮಳೆ! ಅಗ್ನಿಸಾಕ್ಷಿ ಈ ದಿನದಿಂದ ಶುರು

ಅಗ್ನಿಸಾಕ್ಷಿ ಧಾರಾವಾಹಿ -

Yashaswi Devadiga
Yashaswi Devadiga Jun 1, 2026 9:33 AM

ಸೂಪರ್‌ ಹಿಟ್‌ ಧಾರಾವಾಹಿ ಆಗಿದ್ದ ಮೊದಲ ಅಗ್ನಿಸಾಕ್ಷಿಯಲ್ಲಿ (agnisakshi) ನಾಯಕನಾಗಿ ವಿಜಯ್ ಸೂರ್ಯ ಮತ್ತು ನಾಯಕಿಯಾಗಿ ವೈಷ್ಣವಿ ಗೌಡ ನಟಿಸಿದ್ದರು. ಇದೀಗ ಹೊಸ ಅಗ್ನಿಸಾಕ್ಷಿಯಲ್ಲಿ ಹೊಸ ನಾಯಕ ಮತ್ತು ನಾಯಕಿ ಕಾಣಿಸಿಕೊಂಡಿದ್ದು, ಈ ಬಾರಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ (Shamanth Bro) ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಇದೇ ಜೂನ್ 8ರಿಂದ ಶುರುವಾಗಲಿದೆ. ಈಗಾಗಲೇ ಪ್ರೊಮೋ (Promo) ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಹೊಸ ಪ್ರೋಮೋ ಝಲಕ್ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳು ಸಂಪೂರ್ಣ ಭಿನ್ನವಾಗಿ ಮೂಡಿಬಂದಿವೆ.

ಪ್ರೀತಿ ಯಾವಾಗ ಮೂಡುವುದು?

ಇನ್ನು ನಾಯಕಿ ಸಾಕ್ಷಿ ಮಿಡಲ್ ಕ್ಲಾಸ್ ಹುಡುಗಿ, ತಾಯಿ ಇಲ್ಲದೇ ಮಲತಾಯಿಯೊಂದಿಗೆ ಬೆಳೆಯುವಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಮನೆಯಲ್ಲಿ ಎಷ್ಟೆ ಕಷ್ಟ ಅನುಭವಿಸಿದರು ಸುಮ್ಮನಿರುವ ಸಾಕ್ಷಿ, ತನ್ನ ಸ್ವಾಭಿಮಾನಕ್ಕೆ ಅಡ್ಡ ಬಂದರೆ ಮಾತ್ರ ಸುಮ್ಮನೆ ಕೂರುವ ಮಾತೇ ಇಲ್ಲ. ಆಗರ್ಭ ಶ್ರೀಮಂತ ಅಷ್ಟೇ ಹಠಮಾರಿಯಾಗಿರುವ ನಾಯಕ ಅಗ್ನಿ, ದೊಡ್ಡ ಬ್ಯುಸಿನೆಸ್ ಲೋಕದ ಒಡೆಯ ಜೊತೆಗೆ ಅಹಂಕಾರಿಯೂ ಹೌದು.

ಇದನ್ನೂ ಓದಿ: Aishwarya Rai: ಐಶ್ವರ್ಯಾ ರೈ ಮಗಳಿಗೆ ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಕೊಟ್ಟಿಲ್ವಂತೆ!

ಅಹಂ ಮತ್ತು ಸಾಕ್ಷಿಯ ಸ್ವಾಭಿಮಾನ ಎರಡೂ ಜೊತೆ ಸೇರಿದರೆ ಅಲ್ಲಿ ಯುದ್ಧ ಗ್ಯಾರಂಟಿ ಆದರೆ ಆ ಯುದ್ಧ ಮುಗಿದು ಇಬ್ಬರಲ್ಲಿ ಪ್ರೀತಿ ಯಾವಾಗ ಮೂಡುವುದು ಅನ್ನೋದೇ ಕಥೆ.

ಕರಿಮಣಿ ಧಾರಾವಾಹಿಯ ಕರ್ಣ ಅಂದ್ರೆ ಅಶ್ವಿನ್, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಅಂದರೆ ನೇಹಾ ಗೌಡ, ಲಕ್ಷಣ ಧಾರಾವಾಹಿಯ ನಕ್ಷತ್ರ ಅಂದ್ರೆ ವಿಜಯಲಕ್ಷ್ಮೀ, ರಾಧಾ ರಮಣ ಧಾರಾವಾಹಿಯ ರಮಣ ಅಂದ್ರೆ ಸ್ಕಂದ ಅಶೋಕ್ ಸ್ಪೆಷಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಈ ಧಾರಾವಾಹಿಯಲ್ಲಿ ಮಂಜು ಪಾವಗಡ ಹಾಗೂ ಧ್ರುವಂತ್ ಕೂಡ ನಟಿಸುತ್ತಿದ್ದಾರೆ. ಆದರೆ ಇವರದ್ದು ಖಂಡಿತವಾಗಿಯೂ ಸ್ಪೆಷಲ್ ಅಪಿಯರೆನ್ಸ್ ಎನ್ನಲಾಗುತ್ತಿದೆ.

ಕಲರ್ಸ್‌ ಕನ್ನಡ ಪ್ರೋಮೋ

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ಅಭಿನಯಿಸುತ್ತಿದ್ದಾರೆ. ಶಮಂತ್ ಬ್ರೋ ಗೌಡ, ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದರು. ವರ್ಷಿಣಿ ಗೌಡ ‘ಜಯಂ’ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಕನ್ನಡದಲ್ಲಿ ಮಿಂಚಲು ರೆಡಿ ಆಗಿದ್ದಾರೆ.

‘ಅಗ್ನಿ ಪರೀಕ್ಷೆ ಕೇಳಿದ್ದೀನಿ, ಆದ್ರೆ ಅಗ್ನಿಗೇ ಪರೀಕ್ಷೆನಾ?’ ಎಂಬ ಮಾತುಗಳೊಂದಿಗೆ ಇವರಿಬ್ಬರ ಲವ್ ಸ್ಟೋರಿ ತೆರೆದುಕೊಳ್ಳಲಿದೆ.

‘ಭಾಗ್ಯಲಕ್ಷ್ಮಿ’ ಧಾರಾವಾಹಿ ಅಂತಿಮ ಅಧ್ಯಾಯ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮುಕ್ತಾಯದ ಹಂತಕ್ಕೆ ತಲುಪಿದೆ. ‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಈ ರೋಮಾಂಚಕ ಅಂತಿಮ ಸಂಚಿಕೆಗಳು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ.

ಇದನ್ನೂ ಓದಿ: Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

‘ಭಾಗ್ಯಲಕ್ಷ್ಮಿ’ ಪ್ರಸಾರವಾಗುತ್ತಿದ್ದ ಅದೇ ಸಮಯಕ್ಕೆ, ಅಂದರೆ ಜೂನ್ 8 ರಿಂದ ಪ್ರತಿ ದಿನ ಸಂಜೆ 7 ಗಂಟೆಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರಸಾರವಾಗಲಿದೆ.