ಗಾಯಕ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಆವಾರಾಪನ್ 2' ಚಿತ್ರದ ಹೊಸ ಹಾಡಿಗೆ ಧ್ವನಿ
ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ಹಠಾತ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದ ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್, ಇದೀಗ ಮತ್ತೆ ಮೈಕ್ ಹಿಡಿಯುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ 'ಆವಾರಾಪನ್ 2' ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಧ್ವನಿಯಾಗಿದ್ದಾರೆ.
-
ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದ ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್, ಇದೀಗ ಮತ್ತೆ ಮೈಕ್ ಹಿಡಿಯುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ ಬಹುನಿರೀಕ್ಷಿತ 'ಆವಾರಾಪನ್ 2' ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಸಿಂಗ್ ಧ್ವನಿಯಾಗಿದ್ದಾರೆ.
ನಿವೃತ್ತಿ ಘೋಷಣೆಯ ನಂತರ ಬಿಡುಗಡೆಯಾಗುತ್ತಿರುವ ಅರಿಜಿತ್ ಅವರ ಮೊದಲ ಹಿನ್ನೆಲೆ ಗೀತೆ ಇದಾಗಿದ್ದು, ಈ ಹಾಡು ಇಂದೇ (ಜುಲೈ 21) ಬಿಡುಗಡೆಯಾಗಲಿದೆ. 'ಆವಾರಾಪನ್ 2' ಚಿತ್ರವು 'ವಿಶೇಷ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ.
ಅರಿಜಿತ್ ಸಿಂಗ್ ಮತ್ತು 'ವಿಶೇಷ್ ಫಿಲ್ಮ್ಸ್' ಬ್ಯಾನರ್ ನಡುವಿನ ಬಾಂಧವ್ಯ ಕಳೆದ 15 ವರ್ಷಗಳಿಂದ ಬೆಳೆದು ಬಂದಿದೆ. ಅರಿಜಿತ್ ಅವರ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿ, 'ಮರ್ಡರ್ 2' ಚಿತ್ರದ 'ಫಿರ್ ಮೊಹಬ್ಬತ್' ಹಾಡಿನ ಮೂಲಕ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದೇ ಇದೇ ವಿಶೇಷ್ ಫಿಲ್ಮ್ಸ್.
ಆ ನಂತರ ಈ ಯಶಸ್ವಿ ಕಾಂಬಿನೇಷನ್‌ನಲ್ಲಿ ಸಾಲು ಸಾಲು ಹಿಟ್ ಹಾಡುಗಳು ಮೂಡಿಬಂದಿದ್ದವು. ಮುಸ್ಕುರಾನೆ ('ಸಿಟಿಲೈಟ್ಸ್'), ಖಾಮೋಶಿಯಾ, ಹಮಾರಿ ಅಧೂರಿ ಕಹಾನಿ ಮುಂತಾದ ಹಿಟ್ ಹಾಡುಗಳನ್ನು ಈ ಬ್ಯಾನರ್‌ನಲ್ಲಿ ಅರಿಜಿತ್ ಹಾಡಿದ್ದಾರೆ. ಇದೀಗ 'ಆವಾರಾಪನ್ 2' ಚಿತ್ರದ ಮೂಲಕ ಈ ಹಿಟ್ ಜುಗಲ್‌ಬಂದಿ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.
Shreya Ghoshal: ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!
ಜನವರಿಯಲ್ಲಿ ನಿವೃತ್ತಿ ಘೋಷಿಸಿದ್ದ ಅರಿಜಿತ್
ಸಾಮಾಜಿಕ ಜಾಲತಾಣದಲ್ಲಿ ಜನವರಿ 27 ರಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಅರಿಜಿತ್ ಸಿಂಗ್, "ಇಂದಿನಿಂದ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಸ್ವೀಕರಿಸುತ್ತಿಲ್ಲ. ಗಾಯನಕ್ಕೆ ವಿದಾಯ ಹೇಳುತ್ತಿದ್ದೇನೆ" ಎಂದು ತಿಳಿಸಿ, ಇಷ್ಟು ವರ್ಷ ಬೆಂಬಲಿಸಿದ ಕೇಳುಗರಿಗೆ ಧನ್ಯವಾದ ಅರ್ಪಿಸಿದ್ದರು. ಅವರ ಈ ದಿಢೀರ್ ನಿರ್ಧಾರ ಸಂಗೀತ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಆದರೆ, ಅರಿಜಿತ್ ಫ್ಯಾನ್ಸ್ ಖುಷಿಪಡುವಂತಹ ಸುದ್ದಿ ಸಿಕ್ಕಿದೆ.
'ಆವಾರಾಪನ್ 2' ಸಿನಿಮಾ ಬಗ್ಗೆ..
ವಿಶೇಷ್ ಭಟ್ ನಿರ್ಮಾಣದ, ನಿತಿನ್ ಕಕ್ಕರ್ ನಿರ್ದೇಶನ ಹಾಗೂ ಬಿಲಾಲ್ ಸಿದ್ದಿಕಿ ಬರವಣಿಗೆಯಲ್ಲಿ ಮೂಡಿಬರುತ್ತಿರುವ 'ಆವಾರಾಪನ್ 2' ಚಿತ್ರದಲ್ಲಿ ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ, ಶಬಾನಾ ಆಜ್ಮಿ, ಸುರೇಂದರ್ ವಿಕ್ಕಿ, ವಿಜಯಂತ್ ಕೊಹ್ಲಿ ಮತ್ತು ಅತುಲ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಆಗಸ್ಟ್ 14 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.