ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡು ರಿಲೀಸ್; ಪ್ರಮೋದ್ ಮರವಂತೆ ಬರೆದ ಸಾಹಿತ್ಯಕ್ಕೆ ಫ್ಯಾನ್ಸ್ ಫಿದಾ, ಇಲ್ಲಿದೆ ಓದಿ ಫುಲ್‌ ಸಾಂಗ್!

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಎರಡನೇ ಹಾಡು 'ಮನಮೋಹಕ' ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ವಿರಹ ಹಾಗೂ ಹಂಬಲದ ಪ್ರೇಮಗೀತೆಯನ್ನು ಸಿದ್ಧಾರ್ಥ್ ಬಸ್ರೂರ್ ಅವರು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಹಾಡಿದ್ದಾರೆ.

Toxic ಚಿತ್ರಕ್ಕಾಗಿ ಪ್ರಮೋದ್‌ ಮರವಂತೆ ಬರೆದ ಹಾಡಿನ ಲಿರಿಕ್ಸ್‌ ಇಲ್ಲಿದೆ

-

Avinash GR
Avinash GR Jul 21, 2026 3:04 PM

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡು ‘ಮನಮೋಹಕ’ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ಹಾಡು ‘ತಬಾಹಿ’ಗೆ ವಿಶಾಲ್ ಮಿಶ್ರಾ ಮತ್ತು ಯೋಗರಾಜ್ ಭಟ್ ಸಾಥ್ ನೀಡಿದ್ದರೆ, ಈ ಹೊಸ ಪ್ರೇಮಗೀತೆಗೆ ತನಿಷ್ಕ್ ಬಾಗ್ಚಿ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಸಂಗೀತ ಸಂಯೋಜಿಸಿದ್ದಾರೆ.

ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಅವರ ಸಾಹಿತ್ಯಿಕ ಸ್ಪರ್ಶಕ್ಕೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಗಾಯಕ ಸಿದ್ಧಾರ್ಥ್ ಬಸ್ರೂರ್ ಅವರ ಗಾಯನ ಈ ಹಾಡಿಗೆ ಮತ್ತಷ್ಟು ಜೀವ ತುಂಬಿದೆ. ಈ ಮೆಲೋಡಿ ಗೀತೆಯು ಬಹುಭಾಷೆಗಳಲ್ಲಿ ಮೂಡಿಬಂದಿದ್ದು, ವಿಶೇಷವೆಂದರೆ ಗಾಯಕ ಸಿದ್ಧಾರ್ಥ್ ಬಸ್ರೂರ್ ಅವರೇ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಹಾಡನ್ನು ಹಾಡಿದ್ದಾರೆ.

'ಟಾಕ್ಸಿಕ್' ಚಿತ್ರದ 2ನೇ ಸಾಂಗ್ ರಿಲೀಸ್: ಯಶ್ - ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

ಇನ್ನು, ಹಂಬಲ, ವಿರಹ ಮತ್ತು ಹೇಳಲಾಗದ ಮನಸ್ಸಿನ ಅಸಹಾಯಕತೆಯ ಭಾವನೆಗಳನ್ನು ಸಾರುವ ಈ ಸಾಹಿತ್ಯವು ಕೇಳುಗರ ಮನಸ್ಸನ್ನು ತಟ್ಟುತ್ತಿದೆ. ಪ್ರಮೋದ್‌ ಮರವಂತೆ ಬರೆದ 'ಮನಮೋಹಕ' ಹಾಡಿನ ಸಾಹಿತ್ಯ ಇಲ್ಲಿದೆ.

ಮಿಂಚೊಂದು ಎದೆ ತುಂಬಾ

ನಡೆದಾಡಿ ಮರೆಯಾದಂತೆ

ಯಾಕಿಂಥ ತಿಳಿಗಾಳಿಯು

ಆ ಬಿರುಗಾಳಿಯ ಹಾಗೇ ಕಾಡಿದೆ

ಅಂತರಾಳ ಅಲೆದಾಡುತ್ತಿದೆ

ತಾ ತಾನಾಗೇ ಹಾಕಿ ಸವಾಲು

ಆ ನೆನಪು ಕೊಡೋ ಖುಷಿನೇ ವಿಷ

ನಾ ಕಾದಾಡುತಾ ನಿಂತೆ ನನ್ನ ಜೊತೆ

ಮನಮೋಹಕ ತುಸು ಮಾದಕ

ಬದಲಾಯಿತೆ ನನ್ನ ಲೋಕ

ಹೊಸ ಹಂಬಲ

ತುಸು ಗೊಂದಲ

ನಾನೀಗ ಮೂಕ ನಾವಿಕ

ಮನಮೋಹಕ ತುಸು ಮಾದಕ

ಬದಲಾಯಿತೆ ನನ್ನ ಲೋಕ

ನಾ ನನ್ನ ನೆರಳ ಮೇಲೆ

ಜಾರಿ ಬಿದ್ದ ವೇಳೆ

ನಗಬೇಡ ನೀ ಕಾಲವೇ

ಇದೇ ಕಣ್ಮುಂದೆ ಇದೇ ಹೂಬನ

ಎದೆಯಲ್ಲಿ ಯಾಕೀ ಭೂಕಂಪನ

ಇದೊಂದು ಥರ ಹೊಸ ಜೀವನ

ನಾ ನನ್ನಲ್ಲೇ ಸತ್ತು ಹುಟ್ಟುವೆನು ದಿನ

ಮನಮೋಹಕ ತುಸು ಮಾದಕ

- ಕನ್ನಡದಲ್ಲಿ 'ಮನಮೋಹಕ' ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದರೆ, ಹಿಂದಿಯಲ್ಲಿ ಅರ್ಸ್ಲಾನ್ ನಿಜಾಮಿ ಮತ್ತು ಸೈಯದ್ ಮುರಾದ್ ಗಿಲಾನಿ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್, ಮತ್ತು ಮಲಯಾಳಂನಲ್ಲಿ ರಾಜೀವ್ ಗೋವಿಂದನ್ ಅವರು ಸಾಹಿತ್ಯ ಬರೆದಿದ್ದಾರೆ.

ಆಗಸ್ಟ್ 26ಕ್ಕೆ ವಿಶ್ವಾದ್ಯಂತ ಬಿಡುಗಡೆ

ಗೀತು ಮೋಹನ್‌ದಾಸ್ ಮತ್ತು ಯಶ್ ಜಂಟಿಯಾಗಿ ಕಥೆ ಬರೆದಿರುವ 'ಟಾಕ್ಸಿಕ್' ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಉಳಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗಿದೆ.‌

Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 26 ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.