ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bhagyalakshmi Kannada Serial: ತಾಳಿ ಕಟ್ಟಿದ ಮಾತ್ರಕ್ಕೆ ಗಂಡ ಆಗೋದಿಲ್ಲ; ಅಮ್ಮನ ಎದುರೇ ಭಾಗ್ಯ ಗರಂ

Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ' ಭಾಗ್ಯಲಕ್ಷ್ಮೀ ' . ಭಾಗ್ಯಾಳ ಜೀವನದಲ್ಲಿ ಬಂದ ಕಷ್ಟಗಳಿಗೆ ಆದಿ ಈಗ ಬೆನ್ನೆಲುಬಾಗಿ ನಿಂತಿದ್ದಾನೆ. ಅಮ್ಮನ ಎದುರು ಧೈರ್ಯವಾಗಿ ನಿಂತು ತನ್ನ ಪ್ರೀತಿಯನ್ನು ಸಾರಿದ್ದಾನೆ. ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ ಎಂದು ಹೇಳಿಯೂ ಆಗಿದೆ.ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ.

Bhagyalakshmi Serial: ಅಮ್ಮನ ಎದುರೇ ತಾಂಡವ್‌ ವಿಚಾರಕ್ಕೆ ಭಾಗ್ಯ ಗರಂ

ಭಾಗ್ಯಲಕ್ಷ್ಮೀ ಧಾರಾವಾಹಿ -

Yashaswi Devadiga
Yashaswi Devadiga Feb 25, 2026 3:19 PM

ಕಲರ್ಸ್ ಕನ್ನಡ ವಾಹಿನಿಯ (Colors Kannada) ಜನಪ್ರಿಯ ಧಾರಾವಾಹಿ ' ಭಾಗ್ಯಲಕ್ಷ್ಮೀ ' (bhagyalakshmi kannada serial). ಭಾಗ್ಯಾಳ ಜೀವನದಲ್ಲಿ ಬಂದ ಕಷ್ಟಗಳಿಗೆ ಆದಿ ಈಗ ಬೆನ್ನೆಲುಬಾಗಿ ನಿಂತಿದ್ದಾನೆ. ಅಮ್ಮನ ಎದುರು ಧೈರ್ಯವಾಗಿ ನಿಂತು ತನ್ನ ಪ್ರೀತಿಯನ್ನು ಸಾರಿದ್ದಾನೆ. ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ ಎಂದು ಹೇಳಿಯೂ ಆಗಿದೆ.ಇಷ್ಟು ದಿನ ಮನಸ್ಸಿನಲ್ಲೇ ನೋವು ನುಂಗುತ್ತಿದ್ದ ಭಾಗ್ಯಾ (Bhagya) ಈಗ ಅಮ್ಮನ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ.

ತಾಂಡವ್ ತನ್ನ ಗಂಡ ಎಂದು ಹೇಳಿದ್ದಕ್ಕೆ ಭಾಗ್ಯಾ ಆಕ್ಷೇಪ

ಭಾಗ್ಯಾ ಮತ್ತು ತಾಂಡವ್ ಸಂಬಂಧ ಬಿರುಕು ಈಗ ಬೀದಿಗೆ ಬಂದಿದೆ. ಭಾಗ್ಯಾ ಇದುವರೆಗೆ ತಾಂಡವ್ ಮಾಡಿದ್ದೆಲ್ಲವನ್ನೂ ಸಹಿಸಿಕೊಂಡು ಬಂದವಳು. ಮೆಸ್ಸ್ಗೆ ಊಟಕ್ಕೆ ಬಂದವರ ಮುಂದೆ ತಾಂಡವ್ ತನ್ನ ಗಂಡ ಎಂದು ಹೇಳಿದ್ದಕ್ಕೆ ಭಾಗ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾಳೆ.

ಇದನ್ನೂ ಓದಿ: Annayya Serial: ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

ಅಮ್ಮನ ಎದುರೇ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ನಿನಗೆ ತಾಳಿ ಕಟ್ಟಿದವನು ಅವನೇ ತಾನೇ?" ಎಂದು ತಾಯಿ ಪ್ರಶ್ನೆ ಇಡುತ್ತಾರೆ. ಇದಕ್ಕೆ ಭಾಗ್ಯ ತಾಳಿ ಕಟ್ಟಿದ ಮಾತ್ರಕ್ಕೆ ಗಂಡ ಆಗೋದಿಲ್ಲ ಅಮ್ಮ ಎಂದು ಭಾಗ್ಯಾ ಖಡಕ್ ಆಗಿ ಹೇಳಿದ್ದಾಳೆ.

ತಾಂಡವ್ ಈಗ ಬದಲಾಗಿದ್ದಾನೆ ಎಂದು ಅಮ್ಮ ನಂಬಿದ್ದಾರೆ. ಅವನಿಗೆ ಒಂದು ಅವಕಾಶ ನೀಡುವಂತೆ ಭಾಗ್ಯಾಳಲ್ಲಿ ಮನವಿ ಮಾಡುತ್ತಾರೆ. ಆದರೆ ಭಾಗ್ಯಾ ಇದಕ್ಕೆ ಒಪ್ಪುತ್ತಿಲ್ಲ ಭಾಗ್ಯಾ ಮತ್ತು ತಾಂಡವ್ ಮತ್ತೆ ಒಂದಾಗುತ್ತಾರಾ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಮಗಳು ತನ್ವಿ ಮೂಲಕ ತಾಂಡವ್ ಪರ ಇದ್ದಾಳೆ. ಭಾಗ್ಯಾಳ ತಾಯಿ ಸುನಂದ ಕೂಡ ಅದನ್ನು ನಂಬಿಬಿಟ್ಟಿದ್ದಾಳೆ. ಹೇಗಾದರೂ ಭಾಗ್ಯ, ತಾಂಡವ್ ಒಂದಾಗಿಬಿಟ್ಟರೆ ಸಾಕು ಎನ್ನುವುದು ಆಕೆ ಬಯಸುತ್ತಿದ್ದಾಳೆ.

ಸುನಂದಾ ಮುಂದೆ ಆದಿ ಮನಸ್ಸಿನ ಮಾತು ಹೇಳಾಯ್ತು

ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ. ನನ್ನ ಮಾತಿನ ಅರ್ಥ ನಾನು ಭಾಗ್ಯ ಅವರನ್ನ ಮನಸಾರೆ ಪ್ರೀತಿಸುತ್ತಿದ್ದೇನೆ. ಎಂತದ್ದೇ ಸಂದರ್ಭ ಬಂದರೂ ನಾನು ಅವರನ್ನು ಬಿಟ್ಟು ಹೋಗೋ ಮಾತೇ ಇಲ್ಲ. ಭಾಗ್ಯ ಅವರ ಕಷ್ಟ ಸುಖದಲ್ಲಿ ನಾನು ಜೊತೆ ಆಗಿರ್ತೀನಿ. ಅವರ ನೋವಿಗೆ ನಾನು ಮದ್ದು ಆಗಿರ್ತೀನಿ.

ಇದನ್ನೂ ಓದಿ: Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

ಇದು ನನ್ನ ಮಾತುಗಳು ಅಷ್ಟೇ ಅಲ್ಲ. ಭಾಗ್ಯ ಅವರ ಮಾತುಗಳು ಕೂಡ. ಏಕೆ ಅಂದರೆ ಭಾಗ್ಯ ಅವರ ಮನಸ್ಸಿನಲ್ಲಿಯೂ ನಾನು ಇದ್ದೀನಿ ಎಂದು ಸುನಂದಾ ಬಳಿ ನೇರವಾಗಿ ಹೇಳಿದ್ದೂ ಆಗಿದೆ. ಒಟ್ಟಿನಲ್ಲಿ 'ಭಾಗ್ಯಲಕ್ಷ್ಮಿ' ಧಾರಾವಾಹಿ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ..