Bhagyalakshmi Serial: ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು? ಭಾಗ್ಯಲಕ್ಷ್ಮೀ ಶೂಟಿಂಗ್ ಕ್ಲಿಪ್ ವೈರಲ್
Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಕುತೂಹಲ ಘಟ್ಟ ತಲುಪಿದೆ. ತಾಂಡವ್ ಒಳ್ಳೆಯವನಾಗೋ ಪ್ರಯತ್ನದಲ್ಲಿ ಇದ್ದಾನೆ. ಭಾಗ್ಯಾಳ ಬಳಿ ಕ್ಷಮೆ ಕೇಳಿ ಮನೆಗೆ ಬರಬೇಕು ಎಂಬ ಪ್ರಯತ್ನಿಸುತ್ತಿದ್ದಾನೆ. ಇದು ನಾಟಕವೋ ಅಥವಾ ನಿಜಕ್ಕೂ ಆತ ಬದಲಾಗಿದ್ದಾನೋ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ ಆಗುವ ಪ್ರಯತ್ನದಲ್ಲಿ ಇದ್ದಾನೆ. ಚಿತ್ರೀಕರಣದ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟಾಗಿದೆ. ಸದ್ಯ ಸೀರಿಯಲ್‌ನ ಮೇಕಿಂಗ್ ಸೀನ್ ವೈರಲ್ ಆಗಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi Serial) ಕುತೂಹಲ ಘಟ್ಟ ತಲುಪಿದೆ. ತಾಂಡವ್ ಒಳ್ಳೆಯವನಾಗೋ ಪ್ರಯತ್ನದಲ್ಲಿ ಇದ್ದಾನೆ. ಭಾಗ್ಯಾಳ ಬಳಿ ಕ್ಷಮೆ ಕೇಳಿ ಮನೆಗೆ ಬರಬೇಕು ಎಂಬ ಪ್ರಯತ್ನಿಸುತ್ತಿದ್ದಾನೆ. ಇದು ನಾಟಕವೋ ಅಥವಾ ನಿಜಕ್ಕೂ ಆತ ಬದಲಾಗಿದ್ದಾನೋ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ (Bhagya Marriage) ಆಗುವ ಪ್ರಯತ್ನದಲ್ಲಿ ಇದ್ದಾನೆ. ಚಿತ್ರೀಕರಣದ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟಾಗಿದೆ. ಸದ್ಯ ಸೀರಿಯಲ್‌ನ (Serial) ಮೇಕಿಂಗ್ ಸೀನ್ ವೈರಲ್ ಆಗಿದೆ.
ಶ್ರೇಷ್ಠಾ ಕಿತಾಪತಿ
ಆದಿ, ತಾಂಡವ್ ಇಬ್ಬರನ್ನು ಕಿಡ್ನ್ಯಾಪ್ ಮಾಡಲಾಗಿರುತ್ತದೆ. ಈ ವೇಳೆ ಅಲ್ಲಿಗೆ ಬಂದ ಭ್ಯಾಗ್ಯಾ ಮೇಲೆ ಗೂಂಡಾಗಳು ಅಟ್ಯಾಕ್ ಮಾಡ್ತಾರೆ. ತಾಂಡವ್‌ನನ್ನು ಕಳೆದುಕೊಂಡ ಶ್ರೇಷ್ಠಾ ತನ್ನ ಕಿತಾಪತಿ ಕೆಲಸಗಳನ್ನು ಆರಂಭಿಸಿದ್ದಾಳೆ. ಭಾಗ್ಯಾಳಿಂದ ತಾಂಡವ್‌ನನ್ನು ದೂರ ಮಾಡಲು ಶ್ರೇಷ್ಠಾ ಪ್ಲಾನ್ ಮಾಡಿಕೊಂಡಿದ್ದಾಳೆ. ಅದಕ್ಕಾಗಿ ಭಾಗ್ಯಾಳನ್ನು ಕೊಲ್ಲಲು ಸಹ ಶ್ರೇಷ್ಠಾ ಮುಂದಾಗಿದ್ದಳು. ಸದ್ಯ ಸೀರಿಯಲ್‌ನಲ್ಲಿ ತಾಂಡವ್ ಮತ್ತು ಆದಿಯನ್ನು ಅಪಹರಿಸಲಾಗಿದೆ. ತಂದೆಗಾಗಿ ತನ್ವಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ.
ಇದನ್ನೂ ಓದಿ: Anand Deverakonda: ರಶ್ಮಿಕಾ-ವಿಜಯ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ
ಭಾಗ್ಯಾ ತಲೆಗೆ ಹೊಡೆಯುವ ದೃಶ್ಯ
ತಾಂಡವ್ ಹುಡುಕಲು ಬಂದು ಭಾಗ್ಯಾ ಮತ್ತು ಆದಿ ಸಹ ಸಿಕ್ಕಾಕೊಂಡಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನ ಮೇಕಿಂಗ್ ವಿಡಿಯೋ ಶೇರ್ ಆಗಿದೆ. ವ್ಯಕ್ತಿಯೋರ್ವ ಹಿಂದಿನಿಂದ ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯುವ ದೃಶ್ಯ ಇದಾಗಿದೆ. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯಲಾಗಿದೆ. ಆದ್ರೆ ಭಾಗ್ಯಾ ತಲೆಗೆ ಕೊಂಚ ಏಟು ಬಿದ್ದಂತೆ ಕಾಣಿಸುತ್ತಿದೆ. ಆದರೆ ಶೂಟಿಂಗ್ ಅಲ್ಲಿ ಹೆಚ್ಚಾಗಿ ನಕಲಿ ದೊಣ್ಣೆಯನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಭಾಗ್ಯಗೆ ಸಣ್ಣ ಪೆಟ್ಟು ಆಗಿರಬಹುದು ಅಂತ ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Agnisakshi Serial: 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?
ಈಗಾಗಲೇ ಭಾಗ್ಯ ಅಂತೂ ಆದಿ ಮೇಲಿನ ಪ್ರೀತಿ ಬಗ್ಗೆ ವ್ಯಕ್ತಪಡಿಸಿದ್ದಾಳೆ. ಹೀಗಿರುವಾಗ ತಾಂಡವ್ ಹಾಗೂ ಶ್ರೇಷ್ಠಾ ಗಲಾಟೆಯೂ ಮಿತಿ ಮೀರಿದೆ. ಇದರ ನಡುವೆಯೇ, ಜ್ಯೋತಿಷಿಯೊಬ್ಬ ಕಣಿ ನುಡಿದಿದ್ದಾರೆ.ಬರುವ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು. ಇಲ್ಲದಿದ್ದರೆ ತಾಳಿಭಾಗ್ಯ ಇಲ್ಲ ಎಂದಿದ್ದಾನೆ. ಹಾಗಿದ್ದರೆ ಹುಣ್ಣಿಮೆಯ ಒಳಗೆ ಭಾಗ್ಯಳಿಗೆ ತಾಳಿ ಕಟ್ಟುವವರು ಆದಿನೋ, ತಾಂಡವ್ನೋ ಎನ್ನುವ ಕುತೂಹಲ ಸದ್ಯಕ್ಕಿದೆ.