ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬಿಗ್ ಬಾಸ್ 18ʼ ಖ್ಯಾತಿಯ ರಜತ್ ದಲಾಲ್; ಮದುವೆಯಾದ ಹುಡುಗಿ ಯಾರು?
Bigg Boss 18 Rajat Dalal Wedding: ಬಿಗ್ ಬಾಸ್ 18 ಖ್ಯಾತಿಯ ಇನ್‌ಫ್ಲುಯೆನ್ಸರ್ ರಜತ್ ದಲಾಲ್ ಭಾನುವಾರ (ಮಾ. 29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಖಾಸಗಿಯಾಗಿ ನಡೆದ ಈ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.
-
ʻಬಿಗ್ ಬಾಸ್ 18ʼ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ರಜತ್ ದಲಾಲ್ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಮಾ.29) ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಈ ಇನ್‌ಫ್ಲುಯೆನ್ಸರ್ ಹಾಗೂ ರಿಯಾಲಿಟಿ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ಮದುವೆ ಸಮಾರಂಭವು ಅತ್ಯಂತ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದಿದ್ದು, ಅತ್ಯಂತ ಖಾಸಗಿಯಾಗಿ ನಡೆದಿದೆ ಎನ್ನಲಾಗಿದೆ.
ರಜತ್ ಮದುವೆ ಆಗಿರುವ ಹುಡುಗಿ ಯಾರು ಎಂಬುದು ಈವರೆಗೂ ಗೊತ್ತಾಗಿಲ್ಲ. ಪತ್ನಿಯ ಹಿನ್ನೆಲೆಯನ್ನು ರಜತ್ ಸದ್ಯಕ್ಕೆ ಗುಟ್ಟಾಗಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ರಜತ್ ದಲಾಲ್, "ಜೀವನದ ಹೊಸ ಘಟ್ಟದ ಆರಂಭ" ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
Actress Rajini: ಕಿರುತೆರೆ ನಟಿ ರಜಿನಿ ಮದುವೆ ಫೋಟೋಗಳು ಫುಲ್ ವೈರಲ್!
ವಿಡಿಯೋ ಸಂದೇಶದಲ್ಲಿ ಏನಿದೆ?
ಫೋಟೋಗಳ ಜೊತೆಗೆ ಇನ್‌ಸ್ಟಾಗ್ರಾಮ್ ಸ್ಟೋರೀಯಲ್ಲಿ ಒಂದು ವಿಡಿಯೋವನ್ನ ರಜತ್ ಹಂಚಿಕೊಂಡಿದ್ದಾರೆ. "ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ನೀವೆಲ್ಲರೂ ನನಗೆ ಅಪಾರ ಪ್ರೀತಿ ಮತ್ತು ಬೆಂಬಲ ನೀಡಿದ್ದೀರಿ, ನನ್ನನ್ನು ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಸಿದ್ದೀರಿ. ನನ್ನ ಎಲ್ಲಾ ಪ್ರೀತಿಯ ಸಹೋದರರೇ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ" ಎಂದು ರಜತ್ ದಲಾಲ್ ಕೇಳಿಕೊಂಡಿದ್ದಾರೆ.
Amruthavarshini actress Rajini: ಜಿಮ್ ಟ್ರೈನರ್ ಅರುಣ್ ಜೊತೆ ನಟಿ ರಜಿನಿ ಮದುವೆ: ಫೋಟೋಸ್ ಇಲ್ಲಿದೆ!
ರಜತ್ ಕಾಲೆಳೆದ ಮುನಾವರ್ ಫಾರೂಕಿ
ರಜತ್ ಅವರ ಮದುವೆಗೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ, ಆಪ್ತರು ವಿಶ್ ಮಾಡಿದ್ದಾರೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ, "ಕಾರಿನ ವೇಗವನ್ನು ನಿಯಂತ್ರಿಸುವವರು ಕೊನೆಗೂ ಬಂದರು... ನನ್ನ ಸಹೋದರ ಮತ್ತು ಅತ್ತಿಗೆಗೆ ಅಭಿನಂದನೆಗಳು" ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ, ದೆಹಲಿಯ ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ರಜತ್ ಅವರ ವಿಡಿಯೋ ವೈರಲ್ ಆಗಿದ್ದನ್ನು ಉಲ್ಲೇಖಿಸಿ ಮುನಾವರ್ ಈ ರೀತಿ ಕಾಲೆಳೆದಿದ್ದಾರೆ.
ರಜತ್ ದಲಾಲ್ ಮದುವೆ ಫೋಟೋಗಳು
ಬಿಗ್ ಬಾಸ್ 18ರಲ್ಲಿ ಸ್ಪರ್ಧಿಯಾಗಿದ್ದ ರಜತ್
2024ರಲ್ಲಿ ಪ್ರಸಾರವಾದ ಬಿಗ್ ಬಾಸ್ 18ರಲ್ಲಿ ಸ್ಪರ್ಧಿಯಾಗಿದ್ದ ರಜತ್, ಅಂದು ತಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. "ಸೋಶಿಯಲ್ ಮೀಡಿಯಾದಲ್ಲಿ ನನಗೆ ಕೆಟ್ಟ ಹುಡುಗ ಅಂತ ಕರೀತಾರೆ. ಎಲ್ಲರು ನನ್ನ ವಿವಾದಗಳನ್ನು ನೋಡುತ್ತಾರೆ. ಆದರೆ ಅದರ ಹಿಂದಿರುವ ಸತ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋದಿಲ್ಲ. ನಾನು ಪವರ್ ಲಿಫ್ಟರ್ ಆಗಿ ಸಾಕಷ್ಟು ಮೆಡಲ್ ಗೆದ್ದಾಗ ಯಾರೂ ನನ್ನ ಕಡೆ ಗಮನ ಕೊಡಲಿಲ್ಲ, ನನ್ನ ಕೈಗೆ ಕೋಳ ಬಿದ್ದಾಗ ಸಾಕಷ್ಟು ಪ್ರಚಾರ ಕೊಟ್ಟರು" ಎಂದು ರಜತ್ ದಲಾಲ್ ಹೇಳಿಕೊಂಡಿದ್ದರು. ಅಂದಹಾಗೆ, ರಜತ್ ದಲಾಲ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 54 ಲಕ್ಷ ಫಾಲೋವರ್ಸ್ ಇದ್ದಾರೆ.