ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾನವೀಯತೆ ಮರೆತ ವಿದೇಶಿ ಕಲಾವಿದೆ; ಜೈಪುರದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು ಹಿಂಸೆ: ನೆಟ್ಟಿಗರಿಂದ ತರಾಟೆ

Viral Video: ರಷ್ಯಾದ ಕಲಾವಿದೆಯೊಬ್ಬಳು ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ ಆಗಿದೆ. ಆಕೆ ಕಲಾತ್ಮಕ ಚಿತ್ರಕ್ಕಾಗಿ ಜೀವಂತ ಆನೆಗೆ ಗುಲಾಬಿ ಬಣ್ಣ ಬಳಿದಿದ್ದಾಳೆ. ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ವಾಸ್ತುಶಿಲ್ಪ, ಬಣ್ಣಗಳು ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸಲು ನೈಜ ಆನೆಗೆ ಬಣ್ಣ ಬಳಿದಿರುವುದಾಗಿ ಜೂಲಿಯಾ ಬುರುಲೆವ ಹೇಳಿಕೊಂಡಿದ್ದಾಳೆ.

ಫೋಟೊಶೂಟ್‌ಗಾಗಿ ಆನೆಗೆ ಗುಲಾಬಿ ಬಣ್ಣ ಬಳಿದ ವಿದೇಶಿ ಕಲಾವಿದೆ

ಆನೆಗೆ ಗುಲಾಬಿ ಬಣ್ಣ ಬಳಿದ ವಿದೇಶಿ ಕಲಾವಿದೆ -

Profile
Pushpa Kumari Mar 29, 2026 7:28 PM

ಜೈಪುರ, ಮಾ. 29: ಇತ್ತೀಚೆಗೆ ಫೋಟೊಶೂಟ್‌ನ ಕ್ರೇಝ್‌ ಹೆಚ್ಚಾಗಿದೆ. ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಹುಚ್ಚಾಟ ಮೆರೆಯುವುದು ಇತ್ಯಾದಿ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ರಷ್ಯಾದ ಕಲಾವಿದೆಯೊಬ್ಬಳು ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಕೆ ಕಲಾತ್ಮಕ ಚಿತ್ರಕ್ಕಾಗಿ ಜೀವಂತ ಆನೆಗೆ ಗುಲಾಬಿ ಬಣ್ಣ ಬಳಿದಿದ್ದಾಳೆ. ಈ ವಿಡಿಯೊ (Viral News) ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ಛಾಯಾಗ್ರಾಹಕಿ ಜೂಲಿಯಾ ಬುರುಲೆವ ಭಾರತದ ವಾಸ್ತುಶಿಲ್ಪ, ಬಣ್ಣಗಳು ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸಲು ನೈಜ ಆನೆಗೆ ಬಣ್ಣ ಬಳಿದಿದ್ದಾಗಿ ತನ್ನ ಕೃತ್ಯವನ್ನು ಸಮರ್ಥಿಸಿದ್ದಾಳೆ. ಆಕೆ ಆನೆ ಮತ್ತು ಒಬ್ಬ ಮಾಡೆಲ್‌ಗೆ ಪೂರ್ತಿ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್ ಮಾಡಿಸಿದ್ದಾಳೆ. ಆನೆಗೆ ಗುಲಾಬಿ ಬಣ್ಣ ಬಳಸಿ ಮಾಡೆಲ್ ಅನ್ನು ಆನೆಯ ಮೇಲೆ ಕುಳ್ಳಿರಿಸಿ ಫೋಟೊಶೂಟ್ ಮಾಡಿಸಿದ್ದಾರೆ.

ವಿಡಿಯೊ ನೋಡಿ:

ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಸಾವಿರಾರು ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಹಿಳೆಯ ಕಲಾತ್ಮಕತೆಯನ್ನು ಹೊಗಳಿದರೆ, ಹಲವರು ಮುಗ್ಧ ಪ್ರಾಣಿಗೆ ಹಿಂಸೆ ನೀಡಿದ್ದಕ್ಕಾಗಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಜೂಲಿಯಾ ತನ್ನನ್ನು ಸಮರ್ಥಿಸಿಕೊಂಡಿದ್ದಾಳೆ. ಇದಕ್ಕೆ ಸಾವಯವ ಬಣ್ಣ ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದು ಚಿತ್ರೀಕರಣದ ಸಮಯದಲ್ಲಿ ಪ್ರಾಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಂಡಿದ್ದಾಳೆ.

ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ʼʼರಾಜಸ್ಥಾನದ ಜೈಪುರದಲ್ಲಿ ನಡೆಯುವ ಹಬ್ಬಗಳಲ್ಲಿ ಆನೆಗಳಿಗೆ ಬಣ್ಣ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ಇದೆ. ಅದನ್ನೇ ನಾನು ಅನುಸರಿಸಿದ್ದೇನೆʼʼ ಎಂದಿದ್ದಾಳೆ. ಈ ಬಗ್ಗೆ ನೆಟ್ಟಿಗರೊಬ್ಬರು ಕಿಡಿಕಾರಿದ್ದು, ''ಆನೆಗಳು ತುಂಬಾ ರಂಧ್ರಗಳಿರುವ ಚರ್ಮವನ್ನು ಹೊಂದಿರುತ್ತವೆ ಮತ್ತು ಅವು ಹೆಚ್ಚು ಸೂಕ್ಷ್ಮವಾಗಿರುತ್ತವೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʼʼಫೋಟೊಶೂಟ್‌ಗಾಗಿ ಆನೆಗೆ ಶಿಕ್ಷೆ ನೀಡುವುದು ತಪ್ಪುʼʼ ಎಂದಿದ್ದಾರೆ.