ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻರಾಜಕಾರಣದ ಮೂಲಕ ನನ್ನ 3ನೇ ಇನ್ನಿಂಗ್ಸ್‌ ಆರಂಭಿಸಿದ್ದೇನೆʼ ಎಂದ ನಿರೂಪಕಿ ಜಾಹ್ನವಿ; ಜೆಡಿಎಸ್‌ ಪಕ್ಷ ಸೇರಿದ ಮಾಜಿ ʻಬಿಗ್‌ ಬಾಸ್‌ʼ ಸ್ಪರ್ಧಿ

ಕಿರುತೆರೆ ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಾಧ್ಯಮ ಹಾಗೂ ರಿಯಾಲಿಟಿ ಶೋಗಳ ಯಶಸ್ಸಿನ ಬಳಿಕ ಇದು ತಮ್ಮ ಮೂರನೇ ಇನ್ನಿಂಗ್ಸ್ ಎಂದು ಬಣ್ಣಿಸಿರುವ ಅವರು, ಸಮಾಜ ಸೇವೆಯೇ ತಮ್ಮ ಏಕೈಕ ಹೆಗ್ಗುರಿಯಾಗಿದೆ ಎಂದಿದ್ದಾರೆ.

JDS ಸೇರಿ ʻ3ನೇ ಇನ್ನಿಂಗ್ಸ್ ಆರಂಭʼ ಎಂದ ʻಬಿಗ್ ಬಾಸ್ʼ ಜಾಹ್ನವಿ

-

Avinash GR
Avinash GR May 25, 2026 12:56 PM

ಕಿರುತೆರೆ ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರು ಜೆಡಿಎಸ್ (JDS) ಪಕ್ಷವನ್ನು ಸೇರುವ ಮೂಲಕ ತಮ್ಮ ಜೀವನದ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಾಹ್ನವಿ ಅವರು ಅಧಿಕೃತವಾಗಿ ಪಕ್ಷದ ಧ್ವಜವನ್ನು ಸ್ವೀಕರಿಸಿದರು.

ಇದು ನನ್ನ ಮೂರನೇ ಇನ್ನಿಂಗ್ಸ್

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಜಾಹ್ನವಿ, "ಕುಮಾರಸ್ವಾಮಿ ಸರ್ (ಕುಮಾರಣ್ಣ) ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನ್ನ ಈ ಬೆಳವಣಿಗೆಗೆ ರಾಜ್ಯದ ಜನರ ಆಶೀರ್ವಾದವೇ ಕಾರಣ. ನಾನು ಕಳೆದ 12 ವರ್ಷಗಳ ಕಾಲ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸ ಮಾಡಿದೆ, ಅದು ನನ್ನ ಮೊದಲ ಇನ್ನಿಂಗ್ಸ್. ಆನಂತರ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳು, ಆಂಕರಿಂಗ್ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿ ನನ್ನ 'ಸೆಕೆಂಡ್ ಇನ್ನಿಂಗ್ಸ್' ಶುರುವಾಯಿತು. ಈಗ ರಾಜಕಾರಣದ ಮೂಲಕ ನನ್ನ 'ಥರ್ಡ್ ಇನ್ನಿಂಗ್ಸ್' ಆರಂಭಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ

ಸಮಾಜ ಸೇವೆಯೇ ನನ್ನ ಏಕೈಕ ಹೆಗ್ಗುರಿ

ಇತ್ತೀಚಿನ ದಿನಗಳಲ್ಲಿ ತಾವು ಮಾಡುತ್ತಿದ್ದ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಜೆಡಿಎಸ್ ಯುವ ಮುಖಂಡ ಪುನೀತ್ ಗೌಡ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದರು ಎಂದು ಜಾಹ್ನವಿ ತಿಳಿಸಿದರು. "ನನ್ನ ಸಣ್ಣ ಸಹಾಯವನ್ನು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿದ ರಾಜ್ಯದ ಜನರೇ ನನ್ನನ್ನು ಇವತ್ತು ಜೆಡಿಎಸ್ ಪಕ್ಷದ ಆಹ್ವಾನದವರೆಗೂ ತಂದು ನಿಲ್ಲಿಸಿದ್ದಾರೆ. ಸಮಾಜ ಸೇವೆಯೇ ನನ್ನ ಏಕೈಕ ಹೆಗ್ಗುರಿ" ಎಂದರು.

ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ನಿರೂಪಕಿ ಜಾಹ್ನವಿ

ನನ್ನ ಮೇಲೆ ರಾಜ್ಯದ ಜನರ ಆಶೀರ್ವಾದ ಇರಲಿ

ಇದೇ ವೇಳೆ ಇಂದಿನ ರಾಜಕೀಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿರುವ ಜಾಹ್ನವಿ ಅವರು, "ಚುನಾವಣೆ ವೇಳೆ 2000, 1000, 500 ರೂಪಾಯಿಗಳನ್ನು ಇಸ್ಕೊಂಡು ನಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳುವುದು, ರಾಜಕಾರಣಿಗಳಿಗೆ ಗುಲಾಮರಂತೆ ಶರಣಾಗುವುದು.. ಈ ಎಲ್ಲ ಹಳೆಯ ರಾಜಕೀಯ ಶೈಲಿಯನ್ನು ಕಿತ್ತೊಗೆಯಬೇಕಿದೆ. ಜನರ ಸೇವಕರಾಗಿ ದುಡಿದು ರಾಜ್ಯದ ಅಭಿವೃದ್ಧಿಗೋಸ್ಕರ ಶ್ರಮಿಸುವ ಮೂಲಕ ಹೊಸ ರಾಜಕೀಯ ಭಾಷ್ಯ ಬರೆಯಬೇಕೆನ್ನುವುದು ನನ್ನ ಮಹದಾಸೆಯಾಗಿದೆ. ನನ್ನ ಈ ಮೂರನೇ ಇನ್ನಿಂಗ್ಸ್‌ಗೆ ರಾಜ್ಯದ ಜನರ ಆಶೀರ್ವಾದ ಇರಲಿ" ಎಂದು ಕೋರಿಕೊಂಡಿದ್ದಾರೆ.