ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೂ ಅಶ್ಲೀಲ ಸನ್ನೆ; ವಿಕೃತ ಮನಸ್ಸಿನ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಕೆಂಡಾಮಂಡಲ

ಸ್ವಿಮ್ಮಿಂಗ್ ಪೂಲ್ ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೆ ಪುರುಷರು ಅಶ್ಲೀಲ ಸನ್ನೆ ಮಾಡಿದ ವೀಡಿಯೋ ವೈರಲ್‌ ಆಗಿದ್ದು, ನಟಿ ಭೂಮಿ ಪೆಡ್ನೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಇದು ಯುವ ಪೀಳಿಗೆಯ ಆತಂಕಕಾರಿ ವಿಕೃತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ.

ಅಶ್ಲೀಲ ಸನ್ನೆ ತೋರಿಸಿದ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಗರಂ!

-

Avinash GR
Avinash GR May 25, 2026 12:19 PM

ಸ್ವಿಮ್ಮಿಂಗ್ ಪೂಲ್ ಬಳಿಯ ಗೋಡೆ ಮೇಲಿದ್ದ ಮಹಿಳೆಯೊಬ್ಬರ ಚಿತ್ರವನ್ನು (Wall Painting) ನೋಡಿ ಕೆಲವು ಪುರುಷರು ಅಶ್ಲೀಲವಾಗಿ ಮತ್ತು ಅನುಚಿತವಾಗಿ ಸನ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನಟಿ ಭೂಮಿ ಪೆಡ್ನೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ಟ್ವಿಶಾ ಶರ್ಮಾ ಮತ್ತು ದೀಪಿಕಾ ನಗರ್ ಅವರ ಸಾವುಗಳು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಭೂಮಿ ಪೆಡ್ನೇಕರ್ ಅವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಸಮಾಜದ ಆತಂಕಕಾರಿ ಮನಸ್ಥಿತಿ

ಈ ವಿಡಿಯೋ ಕ್ಲಿಪ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿರುವ ಭೂಮಿ, ಈ ವಿಡಿಯೋ ಸಮಾಜದ ಆತಂಕಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ ಮತ್ತು ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. 'ಟ್ಯೂಬ್ ಇಂಡಿಯನ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊದಲು ಹಂಚಿಕೊಳ್ಳಲಾಗಿದ್ದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭೂಮಿ ಪೆಡ್ನೇಕರ್ ಹೇಳಿದ್ದೇನು?

ಆ ವಿಡಿಯೋವನ್ನು ರೀ-ಪೋಸ್ಟ್‌ ಮಾಡಿದ ಭೂಮಿ, "ಇದು ನಮ್ಮ ಇಂದಿನ ಯುವ ಪೀಳಿಗೆಯ ಮನಸ್ಥಿತಿ. ಇವರೇ ಮುಂದೆ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ವ್ಯಕ್ತಿಗಳು. ನಾವು ಒಂದು ರೀತಿಯ ಸಾಂಕ್ರಾಮಿಕ ರೋಗದಲ್ಲಿದ್ದೇವೆ. ಇದನ್ನು ಕಂಡು ಕೇವಲ ಮಾತನಾಡುವುದು, ನಾಚಿಕೆಪಡುವುದು ಸಾಕು. ಇಂಥದ್ದಕ್ಕೆಲ್ಲಾ ಕಡಿವಾಣ ಹಾಕಲು ನಮಗೆ ಇನ್ನೂ ಕಠಿಣ ಕಾನೂನುಗಳು ಬೇಕು, ಕಠಿಣ ಕಾನೂನುಗಳು ಬೇಕು.." ಎಂದು ಬರೆದುಕೊಂಡಿದ್ದಾರೆ.

ಹತ್ಯೆಗೈದವರಿಗೆ ಶಿಕ್ಷೆಯಾಗಲಿ ಎಂದು ಕಣ್ಣೀರಿಟ್ಟು ತ್ವಿಶಾ ಶರ್ಮಾ ಅಂತ್ಯ ಸಂಸ್ಕಾರ ನೆರವೇರಿಸಿದ ಹೆತ್ತವರು: ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ದೇಶ

ದೆಹಲಿ ಘಟನೆ ಬಗ್ಗೆ ಬೇಸರಿಸಿದ್ದ ನಟಿ

ಇಂತಹ ಘಟನೆಗಳ ವಿರುದ್ಧ ಭೂಮಿ ಪೆಡ್ನೇಕರ್ ಧ್ವನಿ ಎತ್ತುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜನವರಿಯಲ್ಲಿ, ದೆಹಲಿಯಲ್ಲಿ 10, 13 ಮತ್ತು 14 ವರ್ಷದ ಮೂವರು ಅಪ್ರಾಪ್ತ ಬಾಲಕರು ಆರು ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ವರದಿಯನ್ನು ನೋಡಿ ತಾವು ತೀವ್ರವಾಗಿ ನೊಂದಿರುವುದಾಗಿ ಹೇಳಿದ್ದರು. ಆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದ ಅವರು, ಆರೋಪಿಗಳನ್ನು ರಾಕ್ಷಸರು ಎಂದು ಕರೆದಿದ್ದರು ಮತ್ತು ಲೈಂಗಿಕ ದೌರ್ಜನ್ಯ ಎಸಗಿದರೂ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಜನರು ಇಂದಿಗೂ ಭಾವಿಸುತ್ತಿರುವುದೇ ನಮ್ಮ ಸಮಾಜದ ಸೋಲಿಗೆ ಕಾರಣ ಎಂದಿದ್ದರು.

ಭೂಮಿ ಪೆಡ್ನೇಕರ್ ಇನ್‌ಸ್ಟಾಗ್ರಾಮ್‌ ಸ್ಟೋರಿ

Bhumi Pednekar

ನಾವು ಅಸಹಾಯಕರನ್ನು ಶಿಕ್ಷಿಸುತ್ತಿದ್ದೇವೆ

"ಅಪ್ರಾಪ್ತ ಬಾಲಕರು ಇಂತಹ ಹೇಯ ಕೃತ್ಯ ಎಸಗುತ್ತಿರುವುದನ್ನು ನೋಡಿ ನನ್ನ ಹೃದಯ ಒಡೆಯುತ್ತದೆ. ಅವರು ಎಂತಹ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ನಮ್ಮ ದೇಶದಲ್ಲಿ ನಾವು ಅಸಹಾಯಕರನ್ನು ಶಿಕ್ಷಿಸುತ್ತಿದ್ದೇವೆ, ಆದರೆ ನಾಯಿಗಳು ದೇಶಕ್ಕೆ ದೊಡ್ಡ ಆಪತ್ತು ಎಂಬಂತೆ ವಿಷಯವನ್ನು ಹೆಚ್ಚು ಸೆನ್ಸೇಷನಲ್ ಮಾಡುತ್ತಿದ್ದೇವೆ" ಎಂದು ಭೂಮಿ ಬೇಸರ ವ್ಯಕ್ತಪಡಿಸಿದ್ದರು.