ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್‌!

Gilli Nata: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್​​ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಇದೀಗ ಗಿಲ್ಲಿ ಸ್ನೇಹಿತ ಕಿರುತೆರೆಯ ಯಶಸ್ವಿ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ನಟಿಸಿದ್ದ ಅಭಿ ದಾಸ್‌ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 13, 2026 7:11 PM

ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್​​ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ (Fans) ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಇದೀಗ ಗಿಲ್ಲಿ ಸ್ನೇಹಿತ ಕಿರುತೆರೆಯ ಯಶಸ್ವಿ ಧಾರಾವಾಹಿ 'ಗಟ್ಟಿಮೇಳ'ದಲ್ಲಿ (Gattimela) ನಟಿಸಿದ್ದ ಅಭಿ ದಾಸ್ (Abhi Das) ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೇಜಸ್ಸು ಕಾಣ್ತಾ ಇದೆ!

ಸದ್ಯ ಅಭಿ ದಾಸ್ ಕಲರ್ಸ್‌ ಕನ್ನಡದ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಂದರ್ಶನದಲ್ಲಿ ನಟ ಅಭಿ ಮಾತನಾಡಿ, ಸ್ಪಂದನಾ ಚೆನ್ನಾಗಿ ಆಡಿದ್ರು. ನನ್ನ ಮೆಚ್ಚಿನ ಸ್ಪರ್ಧಿ ಗಿಲ್ಲಿ. ಮಾತಾಡೋದ್ರಲ್ಲಿ ಗಿಲ್ಲಿ ಕಲಾವಿದ. ಕ್ಯಾಮೆರಾ ಇಲ್ಲ ಅಂದ್ರೂ ಹಾಗೆ ಇರ್ತಾನೆ. ಟೈಮ್‌ ಹೋಗೋದು ಗೊತ್ತಾಗಲ್ಲ.

ಇದನ್ನೂ ಓದಿ: Bigg Boss Kannada 12: ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?



ಈ ಸೀಸನ್‌ನಲ್ಲಿ ಅಂತ ಅಲ್ಲ ಯಾವುದೇ ಸೀಸನ್‌ನಲ್ಲಿ ಗಿಲ್ಲಿ ಇದ್ದಿದ್ದರೂ ಅವನೇ ಗೆಲ್ಲೋದು. ನಂದಗೋಕುಲ ಪ್ರಮೋಷನ್‌ ಸಲುವಾಗಿ ನಾನು ಬಿಗ್‌ ಬಾಸ್‌ ಮನೆಗೆ ಹೋಗಿದ್ದೆ. ಅವರೆಲ್ಲರನ್ನು ನೋಡುವಾಗ, ಆಪ್ತಮಿತ್ರದಲ್ಲಿ ವಿಷ್ಣುವರ್ಧನ್‌ ಅವರು ಇಳಿಯುವಾಗ ತೇಜಸ್ಸು ಕಾಣ್ತಾ ಇದೆ ಅನ್ನೋ ಸೀನ್‌ ಇರುತ್ತಲ್ಲ ಹಾಗೇ ಅಲ್ಲಿ ಗೆಲ್ತಾನೆ ಅನ್ನೋ ತೇಜಸ್ಸು ಗಿಲ್ಲಿ ಮುಖದಲ್ಲಿ ಕಂಡಿತ್ತು. ಅವನ ಕಾನ್‌ಫಿಡೆನ್ಸ್‌ ನೋಡಿ ಅವನೇ ಗೆಲ್ಲೋದು ಅನ್ನಿಸಿತ್ತು ನನಗೆ.

ಚಿಕ್ಕ ಪಾರ್ಟಿ ಮಾಡಿದ್ದರೂ ಅಲ್ಲೇ ಸಣ್ಣ ಕಾಮಿಡಿ ಮಾಡ್ತಾನೆ, ಗಿಲ್ಲಿ ಮಾತಾಡೋದೇ ನಗು ಬಂದು ಬಿಡತ್ತೆ. ಕಾಂಪಿಟೇಶನ್‌ ಅಂತ ಬಂದಾಗ ಬೇರೆ ಅವರನ್ನ ಕೆಳಗೆ ಹಾಕಬೇಕು ಆದರೆ ತುಳಿಯಬಾರದು. ಆ ರೀತಿ ಗಿಲ್ಲಿ ಕಾಮಿಡಿ ಮಾಡೋದು ತಪ್ಪೇನಿಲ್ಲ ಎಂದಿದ್ದಾರೆ.

ಗಿಲ್ಲಿ ಬಗ್ಗೆ ಒಂದು ಆರೋಪ ವೈರಲ್‌

ಗಿಲ್ಲಿ ಬಗ್ಗೆ ಒಂದು ಆರೋಪ ಕೇಳಿಬಂದಿದೆ. ಹೊರಗಡೆ ಪಿಆರ್‌ ಮಾಡುತ್ತಿದ್ದಾರೆ. ತಮ್ಮ ಪರವಾಗಿ ಅಲೆ ಸೃಷ್ಟಿಯಾಗಲು ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

"ಗಿಲ್ಲಿ ನಟ ಅವರ ಕುಟುಂಬದವರು ಮಿಡಲ್‌ ಕ್ಲಾಸ್‌ ಜನ. ಅವರ ತಂದೆ ತಾಯಿ ಇಂದಿಗೂ ವ್ಯವಸಾಯ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಹೇಳುವಂತೆ ಪಿಆರ್‌ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ; ಒನ್ ಮ್ಯಾನ್ ಆರ್ಮಿ ಎಂದು ಅಬ್ಬರಿಸಿದ ಧ್ರುವಂತ್‌!

ಆದರೆ ಅವರ ತಂದೆ ತಾಯಿಗೆ ಪಿಆರ್‌ ಎಂದರೆ ಯಾರೂ ಎಂದೇ ಗೊತ್ತಿಲ್ಲ. ಗಿಲ್ಲಿ ಕುಟುಂಬದವರು ಈಗಲೂ ಕೃಷಿಯನ್ನೇ ನಂಬಿಕೊಂಡು ಇದ್ದಾರೆ" ಎಂದು ಸಂಬಂಧಿಕರು ಹೇಳಿದ್ದಾರೆ.