ʻ35 ವರ್ಷದವನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದೇ ನನ್ನ ದೊಡ್ಡತನʼ; ರಶ್ಮಿಕಾ ತಾಯಿಯದ್ದು ಎನ್ನಲಾದ ಆಡಿಯೋ ವೈರಲ್! ಬ್ರೇಕಪ್ ಹಿಂದಿನ ರಹಸ್ಯ ಹೊರಬಿತ್ತಾ?
Rashmika Mandanna Breakup: ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದೆನ್ನಲಾದ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. 2017ರಲ್ಲಿ ನಡೆದಿದ್ದ ರಶ್ಮಿಕಾ ಅವರ ಎಂಗೇಜ್‌ಮೆಂಟ್ ಮುರಿದುಬೀಳಲು ಯಾರು ಕಾರಣ ಎಂಬ ಮಾಹಿತಿ ಆ ಆಡಿಯೋದಲ್ಲಿದೆ.
-
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದು ಜಾಸ್ತಿ ದಿವಸ ಇರಲಿಲ್ಲ. ಒಂದು ವರ್ಷ ತುಂಬುವುದರೊಳಗ ಅದು ಮುರಿದುಬಿದ್ದಿತ್ತು. ಇದೀಗ ಈ ವಿಚಾರದಲ್ಲಿ ದೊಡ್ಡ ತಿರುವು ಸಿಕ್ಕಿದೆ. ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಮ್ಮ ಮಗಳಿಗೆ ಆದ ಅನ್ಯಾಯದ ಬಗ್ಗೆ ಹೇಳಲಾಗಿದೆ.
ನಾನು ಸ್ಟ್ರಾಂಗ್ ಆಗಿ ಇರುವುದಕ್ಕೆ ಬಚಾವ್
“ಆ ಸಂದರ್ಭದಲ್ಲಿ ಇವನು ನನ್ನ ಜೊತೆ ನಿಲ್ಲಬೇಕಾ? ಅಥವಾ ಗಲಾಟೆ ಮಾಡಬೇಕಾ? ಇವನು ನನ್ನ ಜೊತೆಗೆ ಗಲಾಟೆ ಮಾಡಿದ. ಅವರ ಅಮ್ಮ ಮಾಡಿದ ಕೆಲಸ ಎಂಥ ಗೊತ್ತಾ? ನಿನ್ನ ಅಮ್ಮ (ಸುಮನ್ ಮಂದಣ್ಣ) ನನಗೆ ಬಂದು ಸಾರಿ ಹೇಳಬೇಕು ಅಂತ. ಇವರಿಗೆ ಅವರನ್ನು ಒಟ್ಟಿಗೆ ಇರುವಂತೆ ಮಾಡುವುದಾ? ಅಂತ ಒಡೆದು ಹಾಕುವುದಾ? ಅಲ್ಲಾ, ನನ್ನ ಪುಣ್ಯ ಆಮೇಲೆ ಸಂಬಂಧ ಒಡೆದುಹೋಯಿತು. ನನಗೆ 10 ಜನರಿಗೆ ಸಹಾಯ ಮಾಡಿ ಗೊತ್ತೇ ವಿನಃ ಸಾರಿ ಎಲ್ಲಾ ಕೇಳುವುದಿಲ್ಲ. ಅಮ್ಮ ಆದಮೇಲೆ ಅಣ್ಣನ ಹೆಂಡತಿ ಕೂಡ ಫೋನ್ ಮಾಡಿದ್ದಾರೆ. ನನ್ನ ಮಗಳು ಒಳಗೆ ತುಂಬಾ ನರಳಿದ್ದಾಳೆ. ನಾನು ಸ್ಟ್ರಾಂಗ್ ಆಗಿ ಇರುವುದಕ್ಕೆ ಬಚಾವ್" ಎಂದು ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋದಲ್ಲಿ ಹೇಳಲಾಗಿದೆ.
ನಮ್ಮ ಹುಡುಗಿ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು
"ನೀನು (ರಶ್ಮಿಕಾ) ಎಲ್ಲವನ್ನೂ ಬಿಟ್ಟು, ಇನ್ಮೇಲೆ ಯಾವ ಸಿನಿಮಾ ಮಾಡಲ್ಲ ಎಂದು ಟ್ವೀಟ್ ಮಾಡಬೇಕು ಅಂತ ರಶ್ಮಿಕಾಗೆ ಹೇಳಿದ್ರು. ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು. ಏನು ವಿಷ್ಯ ಇದ್ರು ಇವನು ತಲೆ ಹಾಕೋದು ಯಾಕೆ? ನಾನು ಯಾವ ಗ್ಯಾರೆಂಟಿಯಲ್ಲಿ ಮದುವೆ ಮಾಡಿಕೊಡಲಿ? ಎಲ್ಲದಕ್ಕೂ ಅವನಿಗೆ ಕೇಳಬೇಕು. 21 ವರ್ಷದ ಹುಡುಗಿಯನ್ನ 35 ವರ್ಷ ಹುಡುಗನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದೆ ನನ್ನ ದೊಡ್ಡತನ" ಎಂದು ಈ ಆಡಿಯೋದಲ್ಲಿ ಹೇಳಲಾಗಿದೆ.
Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!
ಮಧ್ಯರಾತ್ರಿ ಹೈದರಾಬಾದ್‌ನಿಂದ ಬರೋದಕ್ಕೆ ಹೇಳಿದ್ರಾ?
ನಟಿ ರಶ್ಮಿಕಾ ಮಂದಣ್ಣ ಅವರು ಗೀತಾ ಗೋವಿಂದಂ ಸಿನಿಮಾದ ಪ್ರಮೋಷನ್‌ಲ್ಲಿ ಬ್ಯುಸಿ ಆಗಿದ್ದರು. ರಿಲೀಸ್ ಹಿಂದಿನ ರಾತ್ರಿವರೆಗೂ ಪ್ರಮೋಷನ್‌ನಲ್ಲಿ ರಶ್ಮಿಕಾ ಬ್ಯುಸಿ ಇದ್ದರು. ಆದರೆ ಮಧ್ಯರಾತ್ರಿ 2 ಗಂಟೆಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಾ ಎಂದು ಫೋನ್ ಮಾಡಲಾಗಿತ್ತಂತೆ. ಆ ಬಗ್ಗೆ ಈ ಆಡಿಯೋದಲ್ಲಿ ಹೇಳಲಾಗಿದೆ.
"ಆವತ್ತೊಂದಿನ ಮಧ್ಯರಾತ್ರಿ 2 ಗಂಟೆ ತನಕ ಗೀತಾ ಗೋವಿಂದಂ ಸಿನಿಮಾ ಕುರಿತ ಇಂಟರ್ವ್ಯೂನಲ್ಲಿ ರಶ್ಮಿಕಾ ಭಾಗಿಯಾಗಿದ್ದಳು. ಮಾರನೇ ಸಿನಿಮಾ ರಿಲೀಸ್. ಆಗ ಕರೆಮಾಡಿ, ನೀನು ಕಾರು ತಗೊಂಡು ಇವರನ್ನು ನೋಡೋಕೆ ಬೆಂಗಳೂರಿಗೆ ಬಾ ಅಂತ ಕರೀತಿದ್ದಾರೆ. ರಾತ್ರಿ 2 ಗಂಟೆಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದು ಮಾರನೇ ದಿನ 8 ಗಂಟೆಗೆ ವಾಪಸ್ ಹೈದರಾಬಾದ್‌ಗೆ ಹೋಗಬೇಕಂತೆ. ಮನುಷ್ಯರಾ ಇವರು? ನನ್ನ ಮಗಳಿಗೆ ಏನಾದರೂ ತೊಂದರೆಯಾದ್ರೆ ಯಾರು ಹೊಣೆ? ಇವರಿಗೇನು ಸಾವಿರ ಹುಡುಗಿಯರು ಸಿಕ್ತಾರೆ, ಮದುವೆ ಆಗ್ತಿರಿ? ನನ್ನ ಮಗಳಿಗೆ ಏನಾದರೂ ಆದರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ಳು, ನಾನು ಬರೋದಕ್ಕೆ ಆಗಲ್ಲ, ನನಗೆ ಈಗ ದಿನ ಪ್ರೆಸ್‌ನವರೇ ಇಂಪಾರ್ಟೆಂಟ್ ಅಂತ” ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೆ, ಈ ಆಡಿಯೋ ಹಿಂದಿನ ಅಸಲಿಯತ್ತು ಇನ್ನೂ ಗೊತ್ತಾಗಿಲ್ಲ. ಇದು ಯಾವಾಗಿನ ಆಡಿಯೋ? ಸುಮನ್ ಮಂದಣ್ಣ ಅವರೇ ಮಾತನಾಡಿದ್ದ? ಒಂದುವೇಳೆ ಮಾತನಾಡಿದ್ದರೆ, ಯಾವಾಗ ಮಾತನಾಡಿದ್ದು ಎಂಬ ವಿಚಾರಗಳನ್ನು ಇನ್ನಷ್ಟೇ ಗೊತ್ತಾಗಬೇಕಿದೆ.