Bigg Boss Kannada 12: ರಕ್ಷಿತಾ ಅಮ್ಮನಿಗೆ ಧ್ರುವಂತ್ ಸಾಷ್ಟಾಂಗ ನಮಸ್ಕಾರ! ಡೊಡ್ಮನೆಯಲ್ಲಿ ಪುಟ್ಟಿ ತಾಯಿ ಜೊತೆ ವ್ಲಾಗ್
Rakshitha Shetty: ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈಗಾಗಲೇ ಸೂರಜ್ ಅವರ ತಾಯಿ ಅಕ್ಕ, ರಾಶಿಕಾ ಅವರ ತಮ್ಮ ಅಮ್ಮ , ಧನುಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ರಕ್ಷಿತಾ ಶೆಟ್ಟಿ ಸರದಿ. ವಿಶೇಷ ಅಂದರೆ ಬಿಗ್ ಬಾಸ್ ಒಂದು ರಕ್ಷಿತಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಲೈವ್ ಬ್ಲಾಗಿಂಗ್ ಮಾಡುತ್ತಲೇ ಅಮ್ಮನಿಗೆ ಬಿಗ್ ಬಾಸ್ ಮನೆಯನ್ನ ತೋರಿಸಿದ್ದಾರೆ ರಕ್ಷಿತಾ. ಇದೀಗ ಈ ಪ್ರೋಮೋ ಔಟ್ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ (Family Week) ನಡೆಯುತ್ತಿದೆ. ಈಗಾಗಲೇ ಸೂರಜ್ ಅವರ ತಾಯಿ ಅಕ್ಕ, ರಾಶಿಕಾ ಅವರ ತಮ್ಮ ಅಮ್ಮ , ಧನುಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ರಕ್ಷಿತಾ ಶೆಟ್ಟಿ (Rakshitha Shetty) ಸರದಿ. ವಿಶೇಷ ಅಂದರೆ ಬಿಗ್ ಬಾಸ್ ಒಂದು ರಕ್ಷಿತಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಲೈವ್ ಬ್ಲಾಗಿಂಗ್ (Live Blogging) ಮಾಡುತ್ತಲೇ ಅಮ್ಮನಿಗೆ ಬಿಗ್ ಬಾಸ್ ಮನೆಯನ್ನ ತೋರಿಸಿದ್ದಾರೆ ರಕ್ಷಿತಾ. ಇದೀಗ ಈ ಪ್ರೋಮೋ ಔಟ್ ಆಗಿದೆ.
ಸರ್‌ಪ್ರೈಸ್ ಕೊಟ್ಟ ಬಿಗ್ ಬಾಸ್
ರಕ್ಷಿತಾ ಅಮ್ಮ ಎಂಟ್ರಿ ಕೊಡುತ್ತಲೇ ಯಾರೊಂದಿಗೂ ಜಗಳ ಮಾಡಬೇಡ ಎಂದಿದ್ದಾರೆ. ಧ್ರುವಂತ್ ಬೆತ್ತ ತರಲಿಲ್ವಾ ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ಬೆತ್ತ ತಂದಿದ್ದರೆ ನಿನಗೆ ಹೊಡಿತಾ ಇದ್ದರು ಎಂದು ತಮಾಷೆ ಮಾಡಿದ್ದಾರೆ. ಇನ್ನು ರಕ್ಷಿತಾ ಅವರಿಗೆ ಬಿಗ್ ಬಾಸ್ ಒಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಮನೆಯಲ್ಲಿ ಮೀನು , ಕ್ಯಾಮೆರಾ ಎಲ್ಲವೂ ಇದೆ. ಲೈವ್ ಬ್ಲಾಗಿಂಗ್ ಶುರು ಮಾಡಿ ಎಂದಿದ್ದಾರೆ. ರಕ್ಷಿತಾ ಲೈವ್ ಬ್ಲಾಗಿಂಗ್ ಮಾಡುತ್ತ ಮೀನು ಫ್ರೈ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯೋರ ಬಗ್ಗೆ ಕಿಚ್ಚ ಹೇಳಿದ್ದೇನು?
ಧ್ರುವಂತ್ ಸಾಷ್ಟಂಗ ನಮಸ್ಕಾರ
ಬಿಗ್‌ಬಾಸ್ ಮನೆಗೆ ಬರುತ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ತಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂದಲು ಸಹ ಸರಿ ಮಾಡಿಕೊಳ್ಳಲ್ಲ ಎಂದು ಹೇಳಿ ಬಾಚಣಿಗೆ ಮಾಡಿದ್ದಾರೆ. ಮಕ್ಕಳು ಕೂದಲು ಹರಡಿಕೊಂಡು ಹೇಗೆ ಬೇಕೋ ಹಾಗಿದ್ರೆ ತಾಯಂದಿರಿಗೆ ಖಂಡಿತ ಇಷ್ಟವಾಗಲ್ಲ. ಮನೆಗೆ ಬರುತ್ತಿದ್ದಂತೆ ಮಗಳ ಕೂದಲನ್ನು ತಾಯಿ ಸರಿ ಮಾಡಿದ್ದಾರೆ. ಧ್ರುವಂತ್ ಸಾಷ್ಟಂಗ ನಮಸ್ಕಾರ ಹಾಕಿ ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.
ವೈರಲ್ ವಿಡಿಯೊ
Rakshitha Shetty family💝
— Patil Raviraj🇮🇳 (@raviraj_spatil) December 24, 2025
Rakshitha's identity Vlogging 🤳👌good concept ❤️#BBK12 #BBK12live #BBKSeason12 https://t.co/PfKFsDob7F
ನಿನ್ನೆಯ ಸಂಚಿಕೆಯಲ್ಲಿ ಧನುಷ್ ಅವರಿಗೆ ತುತ್ತಾ ಮುತ್ತಾ ಎನ್ನುವ ಸನ್ನೀವೇಶ ನಡೆದಿತ್ತು, ಫ್ಯಾಮಿಲಿ ರೌಂಡ್ ಅಲ್ಲಿ ಮನೆಯವರನ್ನ ಮೀಟ್ ಆಗುವ ಅವಕಾಶ ಇದೆ. ಹಾಗಾಗಿಯೇ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಮನೆಯವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಆದರೆ, ಧನುಷ್ ಗೌಡ ಮನೆಯವರು ಬಂದಾಗ ಸ್ಥಿತಿ ಬೇರೇನೆ ಇತ್ತು.
ಒಂದು ಕಡೆಗೆ ಅಮ್ಮ ಬಂದಿದ್ದಾರೆ. ಇನ್ನೊಂದು ಕಡೆಗೆ ಹೆಂಡ್ತಿ ಆಗಮಿಸಿದ್ದಾರೆ. ಇವರಲ್ಲಿ ಒಬ್ಬರನ್ನ ನೋಡುವ ಅವಕಾಶ ಮಾತ್ರ ಇದೆ. ಇದರಿಂದ ಧನುಷ್ ಕಣ್ಣೀರಾಗಿದ್ದಾರೆ. ಮಾತೇ ಬಾರದೆ ಕಣ್ಣೀರು ಹಾಕಿದ್ದಾರೆ. ಬಳಿಕ ಅಮ್ಮನ ಬಳಿ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಧನುಷ್.
ಇದನ್ನೂ ಓದಿ: Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
ಈ ವಾರ ಗಿಲ್ಲಿ, ರಾಶಿಕಾ, ಸ್ಪಂದನಾ, ಅಶ್ವಿನಿ, ಧ್ರುವಂತ್, ಧನುಷ್, ಮಾಳು, ರಘು, ರಕ್ಷಿತಾ ನಾಮಿನೇಟ್ ಆಗಿದ್ದಾರೆ. ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ.