ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

Sudeep: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ಗೆ ಕಾಯ್ತಾಇರ್ತಾರೆ ವೀಕ್ಷಕರು. ಅದರ ಜೊತೆ ಎಲಿಮಿನೇಶನ್‌ ಬಗ್ಗೆಯೇ ಚರ್ಚೆಗಳು ಆಗುತ್ತವೆ. ಅದರಲ್ಲೂ ಈ ವಾರ ಘಟಾನುಘಟಿಗಳೇ ನಾಮಿನೇಟ್‌ ಆಗಿದ್ದಾರೆ. ಆದರೆ ಟ್ವಿಸ್ಟ್‌ ಏನಪ್ಪ ಅಂದರೆ, ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಇಲ್ಲ. ಹೀಗಾಗಿ ಎಲಿಮಿನೇಶನ್‌ ಖಂಡಿತ ಇರಲ್ಲ. ಆದ್ರೂ ಇಬ್ಬರೂ ಹೊರಗೆ ಬರ್ತಾರೆ ಅನ್ನೋದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಚರ್ಚೆಗಳು ಆಗುತ್ತಿವೆ.

ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 13, 2025 10:16 AM

ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ಗೆ (Kichcha Sudeep) ಕಾಯ್ತಾಇರ್ತಾರೆ ವೀಕ್ಷಕರು. ಅದರ ಜೊತೆ ಎಲಿಮಿನೇಶನ್‌ (Elimination) ಬಗ್ಗೆಯೇ ಚರ್ಚೆಗಳು ಆಗುತ್ತವೆ. ಅದರಲ್ಲೂ ಈ ವಾರ ಘಟಾನುಘಟಿಗಳೇ ನಾಮಿನೇಟ್‌ (Nominate) ಆಗಿದ್ದಾರೆ. ಆದರೆ ಟ್ವಿಸ್ಟ್‌ ಏನಪ್ಪ ಅಂದರೆ, ಈ ವಾರ ವೋಟಿಂಗ್‌ ಲೈನ್ಸ್‌ (Voting Lines) ಓಪನ್‌ ಇಲ್ಲ. ಹೀಗಾಗಿ ಎಲಿಮಿನೇಶನ್‌ ಖಂಡಿತ ಇರಲ್ಲ. ಆದ್ರೂ ಇಬ್ಬರೂ ಹೊರಗೆ ಬರ್ತಾರೆ ಅನ್ನೋದು ಸೋಷಿಯಲ್‌ ಮೀಡಿಯಾದಲ್ಲಿ (Social Media) ಕೆಲವು ಚರ್ಚೆಗಳು ಆಗುತ್ತಿವೆ.

ಈ ವಾರ ಕ್ಯಾಪ್ಟನ್ ಆಗಿ ಅಭಿಷೇಕ್ ಶ್ರೀಕಾಂತ್ - ಸ್ಪಂದನಾ ಸೋಮಣ್ಣ ಆಯ್ಕೆ ಆಗಿದ್ದರು. ಆದರೆ, ಅಭಿಷೇಕ್ ಶ್ರೀಕಾಂತ್ ಔಟ್ ಆದರು. ವಿಲನ್ ಕೊಟ್ಟ ಬಿಗ್ ಟ್ವಿಸ್ಟ್‌ನಿಂದಾಗಿ ಸ್ಪಂದನಾ ಸೋಮಣ್ಣ ಜಾಗಕ್ಕೆ ಚೈತ್ರಾ ಕುಂದಾಪುರ ಬಂದರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಈ ವಾರ ರಜತ್, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ನಾಮಿನೇಟ್ ಆಗಿದ್ದರು. ಈ ವಾರವು ವೋಟಿಂಗ್‌ ಲೈನ್ಸ್‌ ಒಪನ್‌ ಆಗಿಲ್ಲ. ಹೀಗಾಗಿ ಎಲಿಮಿನೇಶನ್‌ ನಡೆಯೋದಿಲ್ಲ.

ಇದನ್ನೂ ಓದಿ: Bigg Boss Kannada 12: ವಿಲನ್ ಟಾಸ್ಕ್‌ಗಳಿಗೆ ಸ್ಪರ್ಧಿಗಳು ತತ್ತರ! ವೇಸ್ಟ್‌ ಅಂತ ಅಂದಿದ್ದ ಗಿಲ್ಲಿಗೆ ಕಾವು ಕೊಟ್ಟೇ ಬಿಟ್ರಾ ಉತ್ತರ?

ಟ್ವಿಸ್ಟ್‌ ಏನು?

ಮನೆಗೆ ರಜತ್‌ ಕಿಶನ್‌, ಚೈತ್ರಾ ಕುಂದಾಪುರ, ತ್ರಿವಿಕ್ರಮ್‌, ಮೋಕ್ಷಿತಾ ಪೈ, ಮ್ಯಾಕ್ಸ್‌ ಮಂಜು ಅವರು ಈ ಸೀಸನ್‌ಗೆ ಅತಿಥಿಗಳಾಗಿ ಬಂದಿದ್ದರು. ಅವರಲ್ಲಿ ಚೈತ್ರಾ ಕುಂದಾಪುರ, ರಜತ್‌ ಅವರು ವೈಲ್ಡ್‌ಕಾರ್ಡ್‌ ಸ್ಪರ್ಧಿಗಳು ಎಂದು ಘೋಷಣೆಯಾಯ್ತು.

ಕಲರ್ಸ್‌ ಕನ್ನಡ ಪ್ರೋಮೋ

ಚೈತ್ರಾ ಕುಂದಾಪುರ, ರಜತ್‌ ಅವರು ವೈಲ್ಡ್‌ಕಾರ್ಡ್‌ ಸ್ಪರ್ಧಿಗಳಲ್ಲ, ಅತಿಥಿಗಳು, ಇವರೇ ಮನೆಯಿಂದ ಆಚೆ ಹೋಗ್ತಾರೆ ಎಂದು ಚರ್ಚೆಗಳು ಆಗುತ್ತಿವೆ. ಹೀಗಾಗಿ ಈ ವಾರ ವೋಟಿಂಗ್‌ ಲೈನ್‌ ಓಪನ್‌ ಆಗಿಲ್ಲ ಅಂತ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಈ ವಾರ ಯಾರನ್ನೂ ಕಳಿಸದೆ, ಮುಂದಿನ ವಾರ ಡಬಲ್‌ ಎಲಿಮಿನೇಶನ್‌ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಈ ವಾರ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್‌ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್‌ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.