ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್‌ ನೇರ ಮಾತು

Bigg Boss Kannada 13: ಬಿಗ್‌ ಬಾಸ್‌ ಮನೆಗೆ ತಾಂಡವ್‌ ಬಂದಾಗಿದೆ. ಬರಬರುತ್ತಲೇ ಆಟಶುರು ಮಾಡಿದ್ದಾರೆ. ಕೆಲವು ವ್ಯಕ್ತಿತ್ವ ಅನುಗುಣವಾಗಿ ಬೋರ್ಡ್‌ವೊಂದನ್ನ ಕೊಡಬೇಕಿತ್ತು. ಆಗ ಆಸಿಯಾ (Asia) ಅಬ್ಬರಿಸಿದ್ದಾರೆ. ನನ್ನ ವ್ಯಕ್ತಿತ್ವದ ಬಗ್ಗೆ ನನಗೆ ಗೊತ್ತಿದೆ ಎಂದು ನೇರವಾಗಿ ಹೇಳಿದ್ದಾರೆ.

ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್‌ ನೇರ ಮಾತು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 2, 2026 8:49 AM

ಬಿಗ್‌ ಬಾಸ್‌ (Bigg Boss Kannada 13) ಮನೆಗೆ ತಾಂಡವ್‌ (Thandav) ಬಂದಾಗಿದೆ. ಬರಬರುತ್ತಲೇ ಆಟಶುರು ಮಾಡಿದ್ದಾರೆ. ಕೆಲವು ವ್ಯಕ್ತಿತ್ವ ಅನುಗುಣವಾಗಿ ಬೋರ್ಡ್‌ವೊಂದನ್ನ ಕೊಡಬೇಕಿತ್ತು. ಆಗ ಆಸಿಯಾ (Asia) ಅಬ್ಬರಿಸಿದ್ದಾರೆ. ನನ್ನ ವ್ಯಕ್ತಿತ್ವದ ಬಗ್ಗೆ ನನಗೆ ಗೊತ್ತಿದೆ ಎಂದು ನೇರವಾಗಿ ಹೇಳಿದ್ದಾರೆ.

ಮೊದಲಿಗೆ ತಾಂಡವ್‌ ಅವರು ಜಗ್ಗಿ ಬೆರೆಯವರ ನೆರಳಲ್ಲಿ ಬದುಕುತ್ತಿದ್ದಾರೆ ಎಂದರು. ಮುಖವಾಡ ಧರಿಸಿರುವವರು ಸೌಂದರ್ಯ. ನನ್ನ ಜೊತೆ ತುಂಬಾ ಚೆನ್ನಾಗಿದ್ದರು. ಆದರೆ ನನ್ನ ಅವಕಾಶಗಳನ್ನು ಕಿತ್ತುಕೊಂಡ್ರು. ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ ಅದು ಆಸಿಯಾ. ಟಾಸ್ಕ್‌ಗೆ ಇವರು ಸಹಾಯ ಆಗ್ತಾರೆ ಅಂತಾನೆ ನೀವು ಅವರ ಜೊತೆ ಬಾಂಡ್‌ ಕ್ರಿಯೇಟ್‌ ಮಾಡುತ್ತೀರಾ ಎಂದರು. ಆಸಿಯಾ ಇದನ್ನು ಒಪ್ಪಲಿಲ್ಲ. ಅದಕ್ಕೆ ಆಸಿಯಾ ಇದ್ದವರು, ನಾನು ಹೇಗೆ ಇದ್ದೇನೋ ಹಾಗೇ ಇರುವೆ. ನನ್ನ ವ್ಯಕ್ತಿತ್ವ ನೀವು ಪ್ರೂವ್‌ ಮಾಡೋ ಅಗತ್ಯ ಇಲ್ಲ. ಯಾರಿಗೆ ಗೊತ್ತಾಗಬೇಕೋ ಅವರಿಗೆ ಗೊತ್ತಾಗತ್ತೆ ನಾನು ಏನು ಅಂತ ಎಂದರು.

ಇದನ್ನೂ ಓದಿ: Bigg Boss Kannada 13: ದೊಡ್ಮನೆಯಲ್ಲಿ ಯಶಸ್ ನಡವಳಿಕೆಗೆ ವೀಕ್ಷಕರು ಫುಲ್ ಗರಂ; ಗಾನವಿ ಜೊತೆ ಅಡಲ್ಟ್ ಟಾಕ್

ತಾಂಡವ್ ರಾಮ್‌ ಮತ್ತೆ ದೊಡ್ಮನೆಗೆ ಅದ್ಧೂರಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ.ಕಳೆದ ವಾರದ ಟಾಸ್ಕ್‌ನಲ್ಲಿ ಗೆದ್ದು ವಿಶೇಷ ಅಡ್ವಾಂಟೇಜ್ ಪಡೆದಿದ್ದ ಧನುಷ್, ತಮ್ಮನ್ನ ಸೇಫ್ ಮಾಡಿಕೊಳ್ಳುವ ಸಲುವಾಗಿ ತಾಂಡವ್ ರಾಮ್ ಅವರ 50% ವೋಟ್‌ಗಳನ್ನ ಕಸಿದುಕೊಂಡಿದ್ದರು. ಈ ಮತಗಳ ಲೆಕ್ಕಾಚಾರದ ವ್ಯತ್ಯಾಸದಿಂದಾಗಿ ತಾಂಡವ್ ರಾಮ್ ಅನಿರೀಕ್ಷಿತವಾಗಿ ಎಲಿಮಿನೇಟ್ ಆಗಬೇಕಾಯ್ತು. ʻನಾವು ಇಷ್ಟಪಟ್ಟು ಹಾಕಿದ ವೋಟ್‌ಗಳನ್ನ ಮತ್ತೊಬ್ಬ ಸ್ಪರ್ಧಿ ಕಸಿದುಕೊಳ್ಳುವುದು ಅನ್‌ಫೇರ್ʼ ಎಂದು ಕಿಡಿಕಾರಿದ್ದ ಪ್ರೇಕ್ಷಕರು, ತಾಂಡವ್ ರಾಮ್ ಅವರನ್ನ ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: Bigg Boss Kannada 13: ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್‌ ನೇರ ಮಾತು

ಇದೀಗ ʻಬಿಗ್‌ ಬಾಸ್‌ʼ ಮನೆಗೆ ತಾಂಡವ್‌ ಹೊಸ ರೂಪದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂತಂದರೆ, ಡೈರೆಕ್ಟ್‌ ಕ್ಯಾಪ್ಟನ್‌ ಆಗಿ ಮನೆಗೆ ಬಂದಿದ್ದಾರೆ.