ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಮಿತಿ ಮೀರಿ ಮಾತನಾಡಲು ಆರಂಭಿಸಿದ್ದಾರೆ. ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪುಗಳನ್ನು ಮಾಡಿ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ ಮಂಜ ಅವರು ರಾಕ್ಷಸರ ಟೀಮ್​ನಲ್ಲಿ ಇದ್ದಾರೆ. ಮನಸ್ಸಿಗೆ ಬಂದಂತೆ ವರ್ತಿಸಲು ರಾಕ್ಷಸರಿಗೆ ಅವಕಾಶ ಇದೆ. ಹಾಗಾಗಿ ಮಂಜ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಆದರೀಗ ಎಲ್ಲ ಉಲ್ಟಾ ಆಗಿದೆ.

ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 8, 2026 10:06 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg boss Kannada 13) ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಮಿತಿ ಮೀರಿ ಮಾತನಾಡಲು ಆರಂಭಿಸಿದ್ದಾರೆ. ಗಂಧರ್ವರು ಮತ್ತು ರಾಕ್ಷಸರು (gandarvaru Rakshsaru) ಎಂಬ ಎರಡು ಗುಂಪುಗಳನ್ನು ಮಾಡಿ ಟಾಸ್ಕ್ ನೀಡಲಾಗಿದೆ. ಈ ಆಟದಲ್ಲಿ ಮಂಜ ಅವರು ರಾಕ್ಷಸರ ಟೀಮ್​ನಲ್ಲಿ ಇದ್ದಾರೆ. ಮನಸ್ಸಿಗೆ ಬಂದಂತೆ ವರ್ತಿಸಲು ರಾಕ್ಷಸರಿಗೆ ಅವಕಾಶ ಇದೆ. ಹಾಗಾಗಿ ಮಂಜ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಆದರೀಗ ಎಲ್ಲ ಉಲ್ಟಾ ಆಗಿದೆ.

ಕಮರ್ದ ಪ್ರತಿಫಲ

ಗಂಧರ್ವರು ರಾಕ್ಷಸರಾಗಿದ್ದಾರೆ. ಕಮರ್ದ ಪ್ರತಿಫಲ ಎಂದು ಕಾವ್ಯ ಹೇಳಿದರೆ, ಹುಚ್ಚುನಾಯಿ ಎಂದು ಯಶಸ್‌ ಹೇಳಿದ್ದಾರೆ. ಕಾಲಿನ ನೀರು ಮಂಜನ ಮುಖದ ಮೇಲೆ ಬೀಳುವಂತೆ ಆಗಲಿ ಎಂದು ಕಿರಣ್‌ ಶಾಸ್ತ್ರಿ ಇನ್ನೊಂದು ಕಡೆ ಹೇಳಿದ್ದಾರೆ, ಗಂಧರ್ವರ ಟೀಮ್​ನಲ್ಲಿ ಇರುವ ಕಾವ್ಯಾ ಅವರ ಕೂದಲಿಗೆ ಮಂಜ ಸ್ಪ್ರೇ ಹಾಕಿದ್ದಾರೆ. ಕೂದಲು ಹಾಳಾಗುತ್ತದೆ ಎಂದು ಕಾವ್ಯಾ ಮನವಿ ಮಾಡಿಕೊಂಡರೂ ಕೂಡ ಅವರು ನಿಲ್ಲಿಸಿಲ್ಲ.

ಇದನ್ನೂ ಓದಿ: Bigg Boss Kannada 13: ಗಾನವಿಗೆ ಹುಚ್ಚಿ ಹುಚ್ಚಿ ಎಂದು ಕೂಗಾಡಿ ರಂಪಾಟ ಮಾಡಿದ ಜಗ್ಗ!

ಬಳಿಕ, ಗಂಧರ್ವರಿಗೆ ಮೆಣಸಿನಕಾಯಿ ತಿನ್ನುವಂತೆ ಒತ್ತಾಯಿಸಿದ್ದಾರೆ. ಕಾವ್ಯಾ, ಯಶಸ್ ಮುಂತಾದವರಿಗೆ ಮೆಣಸಿನಕಾಯಿ ತಿನ್ನಿಸಲಾಗಿದೆ. ಇಷ್ಟೇ ಅಲ್ಲದೇ, ಅತಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಎಲ್ಲರೂ ಮಂಜನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ. ಎಂದು ಯಶಸ್‌ಗೆ ಮಂಜ ಹೇಳಿದ್ದರು. ‘ಬಿಗ್ ಬಾಸ್’ ಮನೆಗೆ ಬರೋ ಎಲ್ಲಾ ಸ್ಪರ್ಧಿಗಳು ಒಂದೇ ರೀತಿ ಇರೋದಿಲ್ಲ. ಕೆಲವರು ಬಿಗ್ ಬಾಸ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ಇನ್ನೂ ಕೆಲವು ಸ್ಪರ್ಧಿಗಳು ನಿಯಮ ಮೀರಿ ಆಡುತ್ತಾರೆ. ಪ್ರಶಾಂತ್ ಅವರು ಕೂಡ ಮೈಕ್ ಧರಿಸಿಯೇ ನೀರಿಗೆ ಬಿದ್ದರು.

ಇದನ್ನೂ ಓದಿ: Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!

ಇದರಿಂದ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡರು. ‘ನಿಮ್ಮ ಮೈಕ್ ಬಗ್ಗೆ ಗಮನ ಇರಲಿ’ ಎಂದು ಕಠೋರ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು. ಟಾಸ್ಕ್​ ವೇಳೆ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿ ನೋಡಿ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.