Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್ ವಾರ್ನಿಂಗ್
Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹಾವಳಿ ಜೋರಾಗಿದೆ. ಗಗನ್ ಚಿನ್ನಪ್ಪ ತಾಂಡವ್ ರಾಮ್ ತಂಡಕ್ಕೆ ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಇದೀಗ ಹೊಸ ಪ್ರೋಮೋ ಸಖತ್ ಸದ್ದು ಮಾಡುತ್ತಿದೆ. ಕಾವ್ಯ ಗೌಡಗೆ (Kavya Gowda) ಕಸದ ವಿಚಾರವಾಗಿ ಬೇಕಾಬಿಟ್ಟಿ ಮಾತನಾಡಿದ್ದಾರೆ.
ಗಗನ್ ಚಿನ್ನಪ್ಪ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಗಗನ್ ಚಿನ್ನಪ್ಪ (Gagan Chinnappa) ಹಾವಳಿ ಜೋರಾಗಿದೆ. ಗಗನ್ ಚಿನ್ನಪ್ಪ ತಾಂಡವ್ ರಾಮ್ ತಂಡಕ್ಕೆ ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಇದೀಗ ಹೊಸ ಪ್ರೋಮೋ (Promo) ಸಖತ್ ಸದ್ದು ಮಾಡುತ್ತಿದೆ. ಕಾವ್ಯ ಗೌಡಗೆ (Kavya Gowda) ಕಸದ ವಿಚಾರವಾಗಿ ಬೇಕಾಬಿಟ್ಟಿ ಮಾತನಾಡಿದ್ದಾರೆ.
ಕಾವ್ಯಳಿಗೆ ಗಗನ್, ನಿಮಗೆ ಅಡುಗೆ ಮನೆ ಉಸ್ತುವಾರಿ ಕೊಟ್ಟೆ. ಡಸ್ಟಬಿನ್ ಕ್ಲೀನ್ ಮಾಡಿದ್ರಾ? ಡಸ್ಟ್‌ಬಿನ್ ಕ್ಲೀನ್ ಮಾಡೋಕೆ ಆಗಲ್ವಾ? ನನಗೆ ಅದು ಮುಟ್ಟುಕೋ ಆಗಲ್ಲ, ಇದು ಮುಟ್ಟುಕೋ ಆಗಲ್ಲ! ಛೀ ಛೀ ಅಂತೀರಾ ಎಂದಿದ್ದಾರೆ. ಅದಕ್ಕೆ ಸಂಗೀತಾ ಇದ್ದವರು ಕವರ್ ಹೊರಗಡೆ ಹಾಗೇ ಹಾಕಿಬಿಟ್ಟಿದ್ದಾರೆ ಎಂದಿದ್ದಾರೆ. ಇನ್ನು ಸಂಗೀತಾ ಮಾತನಾಡೋವಾಗ ಕಾವ್ಯ ಅವರಿಗೆ ಗಗನ್ ಗರಂ ಆಗಿ, ಅವರಿಗೆ ಮಾತಾಡೋಕೆ ಬಾಯಿ ಇದೆ. ನೀವು influence ಮಾಡೋ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅಧಿಕ ಪ್ರಸಂಗ ಮಾತನಾಡಬೇಡಿ. ಬಾಯಿ ಬಡ್ಕೋಬೇಡ, ನನ್ನತ್ರ ಇದೆಲ್ಲ ನಡೆಯಲ್ಲ ಎಂದು ಕಾಬ್ಯ ಅವರಿಗೆ ನೇರವಾಗಿ ಹೇಳಿದ್ದಾರೆ ಗಗನ್.
ಬಿಗ್ ಬಾಸ್ ಮನೆಯಲ್ಲಿ ವಿಐಪಿ ಪಟ್ಟದಲ್ಲಿ ಗಗನ್ ಇದ್ದಾರೆ. ವಿಐಪಿ ಎಂದರೆ ಅವರು ಇಡೀ ಮನೆಯನ್ನು ಮುನ್ನಡೆಸಿಕೊಂಡು ಹೋಗಬೇಕು. ಒಂದೇ ರೀತಿಯ ನ್ಯಾಯ ನೀಡಬೇಕು. ಆದರೆ, ಗಗನ್ ಅವರನ್ನು ಅದನ್ನು ಮಾಡುತ್ತಿಲ್ಲ.
ತಾಂಡವ್ ಅವರ ತಂಡಕ್ಕೆ ಬೆನಿಫಿಟ್ ಸಿಗುವಂತೆ ನೋಡಿಕೊಂಡರು. ಇನ್ನು ನಾಮಿನೇಷನ್ ವಿಷಯವನ್ನು ನೇರವಾಗಿ ಮಾತನಾಡಿದ್ದರು ಗಗನ್. ಮಂಜು ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅಧಿಕಾರ ಸಿಕ್ಕಾಗ ಮಂಜು ಅವರನ್ನು ನಾಮಿನೇಟ್ ಮಾಡಿದರು. ಇದು ಕೂಡ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: Ranabaali Teaser: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!
ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿರುವ 8 ಜನರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಪ್ರತಿ ಟಾಸ್ಕ್ ಗೆಲ್ಲುವ ಅನಿರ್ವಾತೆ ಇದೆ. ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿಕೊಳ್ಳಲೇಬೇಕಿದೆ.