ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸುದೀಪ್ ಬಳಿ ಗಾನವಿ ಕ್ಷಮೆ ಕೇಳಿದ್ದು ಏಕೆ?

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ (Bigg Boss Kannada 13) ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಾರಿ ಮಾತಿನ ಚಕಮಕಿ ಜೋರಾಗಿತ್ತು. ಅದರಲ್ಲೂ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಾನವಿ ಎತ್ತಿದ ಹಳೆಯ ವಿಚಾರವೊಂದು ದೊಡ್ಡ ಚರ್ಚೆಗೆ ಕಾರಣವಾಯಿತು. ಮನೆಯ ಸದಸ್ಯರ ಕುಟುಂಬದ ಬಗ್ಗೆ ಮಾತನಾಡುವ ವಿಚಾರದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗುತ್ತಿಲ್ಲ ಎಂಬ ಅಸಮಾಧಾನವನ್ನು ಗಾನವಿ ವ್ಯಕ್ತಪಡಿಸಿದರು.

Bigg Boss Kannada 13: ಸುದೀಪ್ ಬಳಿ ಗಾನವಿ ಕ್ಷಮೆ ಕೇಳಿದ್ದು ಏಕೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 29, 2026 9:57 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ರ (Bigg Boss Kannada 13) ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಾರಿ ಮಾತಿನ ಚಕಮಕಿ ಜೋರಾಗಿತ್ತು. ಅದರಲ್ಲೂ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಾನವಿ ಎತ್ತಿದ ಹಳೆಯ ವಿಚಾರವೊಂದು ದೊಡ್ಡ ಚರ್ಚೆಗೆ ಕಾರಣವಾಯಿತು. ಮನೆಯ ಸದಸ್ಯರ ಕುಟುಂಬದ ಬಗ್ಗೆ ಮಾತನಾಡುವ ವಿಚಾರದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗುತ್ತಿಲ್ಲ ಎಂಬ ಅಸಮಾಧಾನವನ್ನು ಗಾನವಿ ವ್ಯಕ್ತಪಡಿಸಿದರು. ಆದರೆ ಈ ಚರ್ಚೆಗೆ ಸುದೀಪ್ ಖಡಕ್ ಆಗಿಯೇ ಪ್ರತಿಕ್ರಿಯಿಸಿದರು. ಕೊನೆಗೆ ಗಾನವಿ (Ganavi) ಕ್ಷಮೆ ಕೇಳುವಂತಾಯಿತು.

ಹಳೆಯ ವಿಚಾರ ಮತ್ತೆ ಮುನ್ನೆಲೆಗೆ ತಂದ ಗಾನವಿ

ಸಾಮಾನ್ಯವಾಗಿ ಶನಿವಾರದ ವೀಕೆಂಡ್ ಎಪಿಸೋಡ್‌ನಲ್ಲಿ ವಾರವಿಡೀ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಸುದೀಪ್ ಚರ್ಚೆ ನಡೆಸುತ್ತಾರೆ. ಸ್ಪರ್ಧಿಗಳ ತಪ್ಪುಗಳನ್ನು ಎತ್ತಿ ತೋರಿಸುವುದರ ಜೊತೆಗೆ ಆಟವನ್ನು ಸುಧಾರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಹೀಗಾಗಿ ಈ ಸಂಚಿಕೆಗೆ ವಿಶೇಷ ಮಹತ್ವವಿರುತ್ತದೆ.

ಇದನ್ನೂ ಓದಿ: Bigg Boss Kannada 13: ಕಿಚ್ಚನ ಜೊತೆ ಆ ಒಂದು ಗುಳ್ಳೆನರಿಯ ಕತೆ! ಕಾದಿದೆ ಶಾಕಿಂಗ್‌ ಟ್ವಿಸ್ಟ್

ಆದರೆ ಈ ಬಾರಿ ಕಾರ್ಯಕ್ರಮದ ಆರಂಭದಲ್ಲೇ ಗಾನವಿ ಹಳೆಯ ಘಟನೆಯೊಂದನ್ನು ಪ್ರಸ್ತಾಪಿಸಿದರು. ಹಿಂದೆ ಗಗನ್ ಚಿನ್ನಪ್ಪ ಅವರ ತಾಯಿಯ ಬಗ್ಗೆ ಮಾತನಾಡಿದ್ದ ಸಂದರ್ಭದಲ್ಲಿ ಸುದೀಪ್ ತಮ್ಮನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆ ಘಟನೆಯಿಂದ ತಮಗೆ ಬೇಸರವಾಗಿತ್ತು ಎಂಬುದನ್ನು ಗಾನವಿ ಪರೋಕ್ಷವಾಗಿ ವ್ಯಕ್ತಪಡಿಸಿದರು.

ಮನೆಯ ಇತರ ಸದಸ್ಯರು ಕೂಡ ಕುಟುಂಬದ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಾರೆ. ಆದರೆ ಆ ವಿಚಾರಗಳಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ ಎಂಬುದು ಗಾನವಿ ಅವರ ಆಕ್ಷೇಪವಾಗಿತ್ತು.

ಸೌಂದರ್ಯಾ ವಿರುದ್ಧವೂ ಆರೋಪ ಮಾಡಿದ ಗಾನವಿ

ತಮ್ಮ ಮಾತನ್ನು ಮುಂದುವರಿಸಿದ ಗಾನವಿ, ಸೌಂದರ್ಯಾ ಕೂಡ ಹಲವು ಬಾರಿ ಮನೆಯ ಸದಸ್ಯರ ಕುಟುಂಬದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಸೌಂದರ್ಯಾ ಇತರರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಕೆಲವು ಮಾತುಗಳನ್ನೂ ಸುದೀಪ್ ಅವರ ಗಮನಕ್ಕೆ ತಂದರು.

ಈ ವಿಚಾರದ ಬಗ್ಗೆ ಧನುಶ್ ಎದುರು ಗಾನವಿ ಮಾತನಾಡಿದ್ದ ಹಳೆಯ ದೃಶ್ಯವನ್ನೂ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಇದರಿಂದ ಚರ್ಚೆ ಮತ್ತಷ್ಟು ತೀವ್ರವಾಯಿತು.

ಆದರೆ ಗಾನವಿ ಆರೋಪಗಳಿಗೆ ಸೌಂದರ್ಯಾ ತಮ್ಮದೇ ಆದ ಸ್ಪಷ್ಟನೆ ನೀಡಿದರು. ತಾವು ಯಾರ ಮನೆಯವರನ್ನೂ ಕೆಟ್ಟದಾಗಿ ನಿಂದಿಸಿಲ್ಲ. ಬದಲಿಗೆ, ಕುಟುಂಬದವರು ಇಂತಹ ಮಾತುಗಳನ್ನೇ ಕಲಿಸಿದ್ದಾರೆಯೇ ಎಂಬ ರೀತಿಯಲ್ಲಿ ಪ್ರಶ್ನಿಸಿದ್ದಾಗಿ ಹೇಳಿದರು. ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಂದರ್ಭದಲ್ಲಷ್ಟೇ ಅಂತಹ ಪದಗಳನ್ನು ಬಳಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ಯಶಸ್ ಕೊಟ್ಟ ಒಂದೇ ವಾಕ್ಯದ ಉತ್ತರ!

ಗಾನವಿ ಮತ್ತು ಸೌಂದರ್ಯಾ ನಡುವಿನ ವಾದ ಮುಂದುವರಿದಾಗ ಸುದೀಪ್ ಅವರು ಯಶಸ್ ಕೃಷ್ಣ ಅವರ ಅಭಿಪ್ರಾಯ ಕೇಳಿದರು. ಆಗ ಯಶಸ್ ನೀಡಿದ ಉತ್ತರ ಎಲ್ಲರ ಗಮನ ಸೆಳೆಯಿತು.

‘ಇದು ನಿಮ್ಮ ಎದುರು ಚರ್ಚೆ ಮಾಡುವ ವಿಷಯವೇ ಅಲ್ಲ’ ಎಂದು ಯಶಸ್ ನೇರವಾಗಿ ಹೇಳಿದರು. ಅವರ ಈ ಚಿಕ್ಕ ಉತ್ತರ ಚರ್ಚೆಗೆ ಹೊಸ ತಿರುವು ನೀಡಿತು.

ಗಾನವಿಗೆ ಸುದೀಪ್ ಖಡಕ್ ಎಚ್ಚರಿಕೆ

ಯಶಸ್ ಮಾತಿಗೆ ಪ್ರತಿಕ್ರಿಯಿಸಿದ ಸುದೀಪ್, ಈ ವಿಚಾರವನ್ನು ತಮ್ಮ ಮುಂದೆ ಮಾತ್ರವಲ್ಲದೆ ಕರ್ನಾಟಕದ ಜನರ ಮುಂದೆ ಚರ್ಚಿಸುವ ಅಗತ್ಯವೂ ಇಲ್ಲ ಎಂದು ಹೇಳಿದರು. ಅನಗತ್ಯವಾಗಿ ಇಂತಹ ವಿಚಾರಗಳನ್ನು ಎಳೆದು ತಂದು ಎಲ್ಲರ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ, ಗಾನವಿ ಹಿಂದೆ ಗಗನ್ ಅವರ ಕುಟುಂಬದ ಬಗ್ಗೆ ಆಡಿದ್ದ ಮಾತುಗಳಿಗೂ, ಈಗ ಸೌಂದರ್ಯಾ ಆಡಿದ್ದಾರೆ ಎನ್ನಲಾದ ಮಾತುಗಳಿಗೂ ಹೋಲಿಕೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಎರಡೂ ಘಟನೆಗಳ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ಗಾನವಿ ಅವರ ವಾದಕ್ಕೆ ಸುದೀಪ್ ತೆರೆ ಎಳೆದರು.

ಇದನ್ನೂ ಓದಿ: Bigg Boss Kannada 13: ಸೀಕ್ರೆಟ್ ಟಾಸ್ಕ್ ಗೆದ್ದು ಸೇಡು ತೀರಿಸಿಕೊಂಡ ಯಶಸ್!

ಕೊನೆಗೆ ಕ್ಷಮೆ ಕೇಳಿದ ಗಾನವಿ

ಸುದೀಪ್ ಅವರ ಮಾತಿನ ಬಳಿಕ ಗಾನವಿ ತಮ್ಮ ತಪ್ಪನ್ನು ಒಪ್ಪಿಕೊಂಡರು. ಅನಗತ್ಯವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕಾಗಿ ಸುದೀಪ್ ಅವರ ಬಳಿ ಕ್ಷಮೆ ಕೇಳಿದರು. ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯ ಸದಸ್ಯರು ಹಾಗೂ ವೀಕ್ಷಕರಲ್ಲಿಯೂ ಕ್ಷಮೆಯಾಚಿಸಿದರು.