ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

Ganavi Gowda: ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಗೌಡ (Ganvi Gowda) ಅವರು ಹೇಳಿದ ಕೆಲ ಮಾತುಗಳು ಗೊಂದಲ ಸೃಷ್ಟಿ ಮಾಡಿತ್ತು. ಬಿಗ್‌ ಬಾಸ್ ಮನೆ ಪ್ರವೇಶ ಮಾಡುವ ಸಂದರ್ಭದಲ್ಲಿ ನಮ್ಮದು ತುಂಬು ಕುಟುಂಬ, ಮನೆಯಲ್ಲಿ 18 ಜನ ಇದ್ದೀವಿ. ನನಗೆ ಇಬ್ಬರೂ ಸಹೋದರಿಯರು, ಅಪ್ಪ-ಅಮ್ಮ ಬೇರೆಯಾಗಿದ್ದಾರೆ ಎಂದು ಹೇಳಿದ್ದರು. ಪತ್ರವನ್ನು ಪಡೆಯಲು ಆಸಿಯಾ ಮತ್ತು ಗಾನವಿ ಅವರು ಮನೆ ಮಂದಿಯ ಮನ ಒಲಿಸಬೇಕಿತ್ತು. ಗಾನವಿ ಅವರು ಕಣ್ಣೀರು ಹಾಕುತ್ತಾ, ‘ನನ್ನ ತಾಯಿ ಸಿಂಗಲ್ ಮದರ್, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದೆಲ್ಲ ಹೇಳಿ ಎಲ್ಲರ ಮುಂಚೆ ಅತ್ತು ಬಿಟ್ಟರು. ಆದರೆ ನಿನ್ನೆ ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ (Sudeep) ಅವರು ಗಾನವಿಯ ನಿಜ ಬಣ್ಣ ಬಯಲು ಮಾಡಿದರು.

‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 8, 2026 9:36 AM

ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಗೌಡ (Ganvi Gowda) ಅವರು ಹೇಳಿದ ಕೆಲ ಮಾತುಗಳು ಗೊಂದಲ ಸೃಷ್ಟಿ ಮಾಡಿತ್ತು. ಬಿಗ್‌ ಬಾಸ್ ಮನೆ ಪ್ರವೇಶ ಮಾಡುವ ಸಂದರ್ಭದಲ್ಲಿ ನಮ್ಮದು ತುಂಬು ಕುಟುಂಬ, ಮನೆಯಲ್ಲಿ 18 ಜನ ಇದ್ದೀವಿ. ನನಗೆ ಇಬ್ಬರೂ ಸಹೋದರಿಯರು, ಅಪ್ಪ-ಅಮ್ಮ ಬೇರೆಯಾಗಿದ್ದಾರೆ ಎಂದು ಹೇಳಿದ್ದರು. ಪತ್ರವನ್ನು ಪಡೆಯಲು ಆಸಿಯಾ ಮತ್ತು ಗಾನವಿ ಅವರು ಮನೆ ಮಂದಿಯ ಮನ ಒಲಿಸಬೇಕಿತ್ತು. ಗಾನವಿ ಅವರು ಕಣ್ಣೀರು ಹಾಕುತ್ತಾ, ‘ನನ್ನ ತಾಯಿ ಸಿಂಗಲ್ ಮದರ್, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದೆಲ್ಲ ಹೇಳಿ ಎಲ್ಲರ ಮುಂಚೆ ಅತ್ತು ಬಿಟ್ಟರು. ಆದರೆ ನಿನ್ನೆ ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ (Sudeep) ಅವರು ಗಾನವಿಯ ನಿಜ ಬಣ್ಣ ಬಯಲು ಮಾಡಿದರು.

ಆಸಿಯಾ ಅವರಿಗೆ ಒಂದುವರೆ ನಿಮಿಷ ಸಮಯ ಸಿಗುತ್ತೆ. “ಸತತ 4 ವಾರಗಳಿಂದ ಕುಗ್ಗಿದ್ದ ಆಸಿಯಾ ಕಣ್ಣೀರನ್ನು ತಡೆದುಕೊಂಡು, ಇಷ್ಟು ವರ್ಷದಲ್ಲಿ ನಾನು ಯಾವತ್ತೂ ಅಪ್ಪ-ಅಮ್ಮನ ಒಂದು ದಿನವೂ ಬಿಟ್ಟಿರಲಿಲ್ಲ, ನನಗೆ ಈ ಪತ್ರ ಸ್ಥೈರ್ಯ ತುಂಬುತ್ತೆ. ನನಗೆ ಒಂದು ಚೈತನ್ಯ ಕೊಡುತ್ತೆ” ಎನ್ನುತ್ತಾರೆ.ಮತ ಹಾಕಲು ಹೋದ ಸ್ಪರ್ಧಿಗಳಿಗೆ ತಾಂಡವ್‌ ರಾಮ್‌ ಅವರು ಕಣ್ಣು ಸನ್ನೆ ಮಾಡಿ, ಗಾನವಿ ಅವರಿಗೆ ಮತ ಹಾಕಿ ಎಂದು ಹೇಳುತ್ತಾರೆ. ಈ ಬಗ್ಗೆ ಸ್ವತಃ ಅವರೇ ಈ ಪ್ರಕ್ರಿಯೆ ಮುಕ್ತಾಯದ ಬಳಿಕ ಗಾನವಿ ಅವರ ಬಳಿ ಹೋಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 13: ಪತ್ರ ಪಡೆಯುವ ವೇಳೆ ಗಾನವಿ ಹೈಡ್ರಾಮ; ಮೊಸಳೆ ಕಣ್ಣೀರಿನ ಕಥೆ ಬಿಚ್ಚಿಟ್ಟ ಕಿಚ್ಚ


‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ಬಹಿರಂಗ

ಗಾನವಿ ಅತ್ತಿದ್ದನ್ನು ನೋಡಿ ಬಹಳ ಭಾವುಕ

ಟಾಸ್ಕ್ ವೇಳೆ ಗಾನವಿ ಅತ್ತಿದ್ದನ್ನು ನೋಡಿ ಬಹಳ ಭಾವುಕರಾಗಿಬಿಟ್ಟಿದ್ದರು. ಖುದ್ದು ತಾವು ವೋಟ್ ಹಾಕುವ ಜೊತೆಗೆ ಬೇರೆ ಕೆಲವರಿಂದಲೂ ಗಾನವಿಗೆ ವೋಟ್ ಹಾಕಿಸಿದ್ದರು. ಆದರೆ ಸುದೀಪ್ ತೋರಿಸಿದ ವಿಡಿಯೋ ನೋಡಿ ತಾಂಡವ್​​ಗೆ ಶಾಕ್ ಆಗಿ ಬಿಟ್ಟಿತು.ಅದಾದ ಮೇಲೆ ಗಾನವಿ ಹೇಳಿದಂತೆ. ‘ಮಂಗಳೂರಿನಲ್ಲಿ ನಮ್ಮ ಕುಟುಂಬ ಇರುತ್ತದೆ. ಮೊದಲು ನಾವೆಲ್ಲ ಒಟ್ಟಿಗೆ ಇದ್ದೆವು ಈಗ ಇಲ್ಲ. ಅಮ್ಮ ಪೊಲೀಸ್ ಇಲಾಖೆಯಲ್ಲಿದ್ದಾರೆ. ಅವರಿಗೆ ನೈಟ್ ಶಿಫ್ಟ್ ಎಲ್ಲ ಇರುತ್ತದೆ. ಅವರೊಟ್ಟಿಗೆ ಮಕ್ಕಳಾದ ನಾವುಗಳು ಇರುವುದಿಲ್ಲ. ಹಾಗಾಗಿ ಹಾಗೆ ಹೇಳಿದೆ’ ಎಂದರು ಗಾನವಿ.

ಕಿಚ್ಚ ಸುದೀಪ್‌ ಅವರು, ಗೊಂದಲ ಸೃಷ್ಟಿಯಾಗಿದೆ. ನಾವು ನಿಮಗೆ ಅವಮಾನ ಮಾಡಬೇಕು ಎಂದು ಈ ವಿಡಿಯೋ ತೋರಿಸಿ ಹೇಳುತ್ತಿಲ್ಲ. ನಿಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿಲ್ಲ.

ಇದನ್ನೂ ಓದಿ: Kannada web Series: ‘ಕಾರ್ಪೊರೇಟ್ ಲವ್ ಸ್ಟೋರಿ’; ಪನ್ನಗ ಭರಣ ನಿರ್ದೇಶನದ ಹೊಸ ವೆಬ್ ಸರಣಿ ಒಟಿಟಿಗೆ ಎಂಟ್ರಿ

ಈಗ ಒಂದು ವೇಳೆ ನಾವು ಈ ವಿಡಿಯೋ ತೋರಿಸದಿದ್ದರೇ, ನಿಮಗೆ ಮಾತನಾಡಲು ಅವಕಾಶ ಕೊಡದಿದ್ದರೇ ಮೀಮ್ಸ್‌ಗಳಲ್ಲಿ ಓಡುತ್ತಿರುವುದು ಸತ್ಯ ಎಂದು ಪ್ರೂವ್‌ ಆಗುತ್ತಿತ್ತು ಎಂದರು.