ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ‘ನೇರವಾಗಿ ನಾಮಿನೇಟ್ ಮಾಡ್ತೀನಿ’; ನಿಯಮ ಮುರಿದ ಸ್ಪರ್ಧಿಗಳಿಗೆ ಕಿಚ್ಚ ಎಚ್ಚರಿಕೆ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ(Bigg Boss Kannada 13) ಹಲವು ಬಾರಿ ನಿಯಮಗಳನ್ನು ಬ್ರೇಕ್‌ ಮಾಡಿದ್ದೇ ಲಿಖಿತ್‌ ಹಾಗೂ ಕಿರಣ್‌ (Likhith Kiran). ಕ್ಯಾಪ್ಟನ್ ಹೇಳುವುದು ಕೇಳುವುದಿಲ್ಲ. ಬಿಗ್​​ಬಾಸ್ ಆದೇಶಕ್ಕೂ ಸಹ ಬೆಲೆ ಕೊಡದೇ ವರ್ತಿಸುತ್ತಾರೆ. ಇದನ್ನು ಗಮನಿಸಿದ್ದ ಸುದೀಪ್ (Sudeep) ಅವರು ಈ ವಾರ ನಿಯಮ ಮುರಿಯುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಈ ವಾರ್ನಿಂಗ್‌ಗೆ ಸಖತ್‌ ಭಯ ಆಗಿದ್ರು ಕಿರಣ್‌.

ನೇರವಾಗಿ ನಾಮಿನೇಟ್ ಮಾಡ್ತೀನಿ;ನಿಯಮ ಮುರಿದ ಸ್ಪರ್ಧಿಗಳಿಗೆ ಕಿಚ್ಚ ಎಚ್ಚರಿಕೆ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 27, 2026 10:05 AM

ಬಿಗ್‌ ಬಾಸ್‌ ಮನೆಯಲ್ಲಿ(Bigg Boss Kannada 13) ಹಲವು ಬಾರಿ ನಿಯಮಗಳನ್ನು ಬ್ರೇಕ್‌ ಮಾಡಿದ್ದೇ ಲಿಖಿತ್‌ ಹಾಗೂ ಕಿರಣ್‌ (Likhith Kiran). ಕ್ಯಾಪ್ಟನ್ ಹೇಳುವುದು ಕೇಳುವುದಿಲ್ಲ. ಬಿಗ್​​ಬಾಸ್ ಆದೇಶಕ್ಕೂ ಸಹ ಬೆಲೆ ಕೊಡದೇ ವರ್ತಿಸುತ್ತಾರೆ. ಇದನ್ನು ಗಮನಿಸಿದ್ದ ಸುದೀಪ್ (Sudeep) ಅವರು ಈ ವಾರ ನಿಯಮ ಮುರಿಯುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಈ ವಾರ್ನಿಂಗ್‌ಗೆ ಸಖತ್‌ ಭಯ ಆಗಿದ್ರು ಕಿರಣ್‌.

ಶನಿವಾರದ ‘ಎಮರ್ಜೆನ್ಸಿ ಎಕ್ಸಿಟ್’ ಸಂಚಿಕೆಯಲ್ಲಿ ಕಿರಣ್ ಶಾಸ್ತ್ರಿ ಹಾಗೂ ಲಿಖಿತ್‌ಗೆ ಕಿಚ್ಚ ಸುದೀಪ್‌ ಸ್ಪೆಷಲ್ ಕ್ಲಾಸ್ ತೆಗೆದುಕೊಂಡರು. ಲೈಟ್ಸ್ ಇನ್ನೂ ಆನ್ ಇರುವಾಗಲೇ ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಪದೇ ಪದೇ ನಿದ್ದೆಗೆ ಜಾರುತ್ತಾರೆ. ಶಿಕ್ಷೆಯ ರೂಪದಲ್ಲಿ ಇಬ್ಬರ ಹಾಸಿಗೆ, ದಿಂಬು ಹಾಗೂ ಬೆಡ್‌ಶೀಟ್‌ಗಳನ್ನ ‘ಬಿಗ್ ಬಾಸ್’ ಹಿಂಪಡೆದಿದ್ದರು. ಖಾಲಿ ಬೆಡ್‌ ಮೇಲೆ ಇಬ್ಬರೂ ಮಲಗಬೇಕಿತ್ತು. ಆದರೆ, ಅದನ್ನ ಇಬ್ಬರೂ ಪಾಲಿಸಲಿಲ್ಲ. ಸೋಫಾ ಮೇಲೆ ಮಲಗಿದ್ದಾರೆ.

ಇದನ್ನೂ ಓದಿ: Bigg Boss Kannada 13: 5 ಜನ 'ವೈಲ್ಡ್‌ ಕಾರ್ಡ್‌' ಎಂಟ್ರಿ? ಏನಿದು ಟ್ವಿಸ್ಟ್‌?

ಸೋಫಾದಲ್ಲಿ ಮಲಗೋಕಾ ಬಿಗ್‌ ಬಾಸ್‌ ಅದೆಲ್ಲ ಕಸಿದುಕೊಂಡಿದ್ದು?

ಇದಕ್ಕೆ ಕಿಚ್ಚ ಗರಂ ಆದ್ರು. ಸೋಫಾದಲ್ಲಿ ಮಲಗೋಕಾ ಬಿಗ್‌ ಬಾಸ್‌ ಅದೆಲ್ಲ ಕಸಿದುಕೊಂಡಿದ್ದು? ನೀವು ನೆಮ್ಮದಿ ಆಗಿ ಇರಬಾರದು ಅಂತನಾ ಬಿಗ್‌ ಬಾಸ್‌ ಹೀಗೆ ಮಾಡ್ತಾ ಇದ್ದದ್ದು? ಒಳಗೆ ಹೋದ್ಮೇಲೆ ಕಾಮನರ್ಸ್, ಸೆಲೆಬ್ರಿಟೀಸ್ ಅಂತ ಬರಲ್ಲ. ನೀವು ಭವಿಷ್ಯದ ಬಗ್ಗೆ ಹೇಳ್ತಿದ್ದೀರಾ. ಆದ್ರೆ, ನಾನಿನ್ನೂ ಇತಿಹಾಸದಲ್ಲಿದ್ದೀನಿ’ಎಂದು ಕಿಚ್ಚ ಗರಂ ಆದ್ರು.

ನಿಮ್ಮಲ್ಲಿ ಕೆಲವರಿಗೆ ಒಂದು ಬುದ್ಧಿ ಇದೆ. ರೂಲ್ಸ್‌ ಬ್ರೇಕ್‌ ಮಾಡಿದ್ರೆ ಎಲ್ಲರಿಗೂ ಏಫೆಕ್ಟ್‌ ಆಗುತ್ತೆ ಅಂತ. ಬೇಕು ಬೇಕು ಅಂತ ಮಾಡಿದ್ರೆ ನಿಮ್ಮನ್ನ ಡೈರೆಕ್ಟ್ ಆಗಿ ನಾಮಿನೇಟ್ ಮಾಡ್ತೀನಿ. ರೂಲ್ಸ್ ಬಗ್ಗೆ ಬ್ಯಾಡ್ ಎಕ್ಸಾಂಪಲ್ ಸೆಟ್ ಮಾಡೋದಕ್ಕೆ ನಾವು ಬಿಡಲ್ಲ ಎಂದರು.

ಲಿಖಿತ್‌ ಹಾಗೂ ಯಶಸ್‌ಗೂ ಜೈಲಿನಲ್ಲಿ ಇರಿಸಿ ಸಾಕಷ್ಟು ಕ್ಲಾಸ್‌ ತೆಗೆದುಕೊಂಡರು. ಕ್ಲೀನಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಲಿಖಿತ್‌ಗೆ ಕಿಚ್ಚ ಖಡಕ್‌ ಕ್ಲಾಸ್‌ ತೆಗೆದುಕೊಂಡರು. ಕ್ಯಾಪ್ಟನ್ ಸಂಗೀತಾ ಪದೇ ಪದೇ ಹೇಳಿದರೂ ಸಹ ಕೆಲಸ ಮಾಡದೆ ಉದ್ದಟತನ ಮೆರೆದಿದ್ದರು.

ನಿಮ್ಮ ಹತ್ರ ಕ್ಲೀನಿಂಗ್‌ ಮಾಡೋಕೆ ಆಗದೇ ಇದ್ದರೆ ಹೇಳಿ ನಾವೇ ಬಂದು ಮಾಡ್ತೇವೆ. ಅದು ನಮ್ಮ ಮನೆ. ನಮ್ಮ ಮನೆಯನ್ನು ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದರು. ವಾರವಿಡೀ ಮನೆಯ ಜವಾಬ್ದಾರಿ ನಿಮ್ಮದು. ಯಾರಾದರೂ ಕೆಲಸ ಮಾಡಲಿಲ್ಲ ಅಂದ್ರೆ ನೀವೇ ಮಾಡಬೇಕು. ಕಾಲಿಗೆ ಬಿದ್ದಾದರೂ ಮಾಡಿಸಿ ಎಂದರು.

ಇದನ್ನೂ ಓದಿ: Bigg Boss Kannada 13: ‘ನೇರವಾಗಿ ನಾಮಿನೇಟ್ ಮಾಡ್ತೀನಿ’; ನಿಯಮ ಮುರಿದ ಸ್ಪರ್ಧಿಗಳಿಗೆ ಕಿಚ್ಚ ಎಚ್ಚರಿಕೆ

ಗೌರವ ಇಲ್ಲದೇ ವರ್ತಿಸುವವರನ್ನು ನಾನು ಇಲ್ಲಿಂದಲೇ ನೇರವಾಗಿ ನಾಮಿನೇಟ್ ಮಾಡುತ್ತೇನೆ ಎಂದು ಕಡೆಯ ಎಚ್ಚರಿಕೆ ಕೊಟ್ಟಿದ್ದಾರೆ.