ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

Bigg Boss Kannada 13: ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ (sueep Panchayti) ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 12, 2026 7:25 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ (Bigg Boss Kannada 13) ಮೊದಲ ವಾರದ ಪಂಚಾಯ್ತಿ ಬಂದಿದೆ. ಗಗನ್ ಚಿನ್ನಪ್ಪಗೆ ನೀಡಲಾಗಿದ್ದ ವಿಐಪಿ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡಿರುವುದು ಸುದೀಪ್ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಇದೀಗ ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ (sueep Panchayti) ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ.

ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

ಸಾಮಾನ್ಯ ಸ್ಪರ್ಧಿಗಳನ್ನು ಟಾರ್ಗೆಟ್

ಮತ್ತೊಂದೆಡೆ ಮನೆಯಲ್ಲಿ ‘ಕಾಮನ್ ಮ್ಯಾನ್’ ಹಾಗೂ ‘ಸೆಲೆಬ್ರಿಟಿ’ ಎಂಬ ಭೇದಭಾವ ಮತ್ತೆ ತಲೆದೂರಿದೆ. ಗಗನ್ ಹಾಗೂ ತಾಂಡವ್ ರಾಮ್ ಅವರ ನಡೆಗಳು ಮನೆಯಲ್ಲಿ ಸಾರಾಸಗಟಾಗಿ ಸಾಮಾನ್ಯ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುವಂತಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವೇದಿಕೆ ಮೇಲೆಯೇ ಕಿಚ್ಚ ಸುದೀಪ್ ಗಂಭೀರ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: Spirit Movie: ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಖಡಕ್ ವಾರ್ನಿಂಗ್

ಈ ವಿಚಾರಕ್ಕೆ ಸಂಬಂಧಿಸಿದಂತೆ ಗಗನ ಚಿನ್ನಪ್ಪ ಮತ್ತು ತಾಂಡವ್ ರಾಮ್ ಗೆ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಮಿನೇಷನ್ ಎನ್ನುವುದು ವೈಯಕ್ತಿಕ ಆಯ್ಕೆ ಆಗಿರುವಾಗ, ಚರ್ಚೆ ಮಾಡಿಕೊಂಡು ನಾಮಿನೇಟ್ ಮಾಡುವುದು ಸರಿಯಲ್ಲ ಎಂದು ಸುದೀಪ್ ಸ್ಪಷ್ಟವಾಗಿ ಹೇಳಿದ್ದಾರೆ. ನಾಮಿನೇಷನ್ ವಿಚಾರದಲ್ಲಿ ಮಾತನಾಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾದರೆ ಮನೆಯ ಮುಖ್ಯದ್ವಾರ ತೆರೆದಿದೆ ಹಾಗೆಯೇ ಜಗದೀಶ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾರೆ ಹೊರತು ಮನೆಯ ಕೆಲಸದಾಳಾಗಿ ಬಂದಿಲ್ಲ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಮನೆಯ ಕೆಲಸ ಹಾಗೂ ಜವಾಬ್ದಾರಿಗಳ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಒಬ್ಬ ಸ್ಪರ್ಧಿಯನ್ನು ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ ಸುದೀಪ್ ಗುಡುಗಿದ್ದಾರೆ. ಕೆಲವು ಸ್ಪರ್ಧಿಗಳು ಜಗದೀಶ್ ನ ಮಹಿಳೆಯರನ್ನು ಮಾತನಾಡಿಸುವ ರೀತಿಯಲ್ಲಿ ಮಾತನಾಡಿಸಿರುವ ಬಗ್ಗೆಯೂ ಸುದೀಪ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : The Paradise: ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

ಒಬ್ಬ ವ್ಯಕ್ತಿಗೆ ಕುಟುಂಬವಿದೆ, ಅವರ ಕುಟುಂಬದ ಸದಸ್ಯರೂ ಈ ಕಾರ್ಯಕ್ರಮವನ್ನು ನೋಡುತ್ತಿರುತ್ತಾರೆ. ಹೀಗಿರುವಾಗ ಇಂತಹ ರೀತಿಯಲ್ಲಿ ಕರೆಯುದು ಎಷ್ಟು ಸರಿ ಎಂದು ಸುದೀಪ್ ಪ್ರಶ್ನಿಸಿದರು.