ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸೌಂದರ್ಯಾ ಶೆಟ್ಟಿ ವಿರುದ್ಧ ಪಕ್ಷಪಾತ ಆರೋಪ! ಸ್ಪಷ್ಟನೆ ನೀಡಿದ ಕಿಚ್ಚ

Bigg Boss Kannada 13: ಸ್ಪರ್ಧಿಗಳ ವಾದ-ಪ್ರತಿವಾದಗಳ ನಡುವೆಯೇ ಸುದೀಪ್ ಅವರು ಟಾಸ್ಕ್‌ಗೆ ಸಂಬಂಧಿಸಿದ ವಿಡಿಯೋ ತುಣುಕನ್ನು ಪ್ರದರ್ಶಿಸಿದರು. ಈ ವಿಡಿಯೋದಲ್ಲಿ ಗಗನ್ ತಂಡದ ಆಟಗಾರರು ನಿರೀಕ್ಷಿತ ಮಟ್ಟದ ಪ್ರಯತ್ನ ಮಾಡದಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ತಂಡದೊಳಗೆ ಗೆಲ್ಲುವ ಉತ್ಸಾಹ ಮತ್ತು ಪರಸ್ಪರ ಬೆಂಬಲದ ಕೊರತೆಯೂ ಎದ್ದು ಕಾಣುತ್ತಿತ್ತು.

ಸೌಂದರ್ಯಾ ಶೆಟ್ಟಿ ವಿರುದ್ಧ ಪಕ್ಷಪಾತ ಆರೋಪ! ಸ್ಪಷ್ಟನೆ ನೀಡಿದ ಕಿಚ್ಚ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 1, 2026 9:36 AM

ಬಿಗ್ ಬಾಸ್ ಕನ್ನಡ 13ರ (Bigg Boss Kannada 13) ಮನೆಯಲ್ಲಿ ಈ ವಾರ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ (Soundarya shetty) ಅವರ ನಿರ್ಧಾರವೊಂದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. 'ಸ್ವಯಂವರ' ಟಾಸ್ಕ್‌ನಲ್ಲಿ ಯಶಸ್ ಅವರನ್ನು ವಿಜೇತರೆಂದು ಘೋಷಿಸಿದ ಬೆನ್ನಲ್ಲೇ, ಸೌಂದರ್ಯಾ ತಮ್ಮ ಆಪ್ತ ಸ್ನೇಹಿತನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ವಾರದ ಪಂಚಾಯಿತಿಯಲ್ಲಿ ಈ ವಿವಾದಕ್ಕೆ ತೆರೆ ಎಳೆದಿರುವ ಕಿಚ್ಚ ಸುದೀಪ್, ಟಾಸ್ಕ್‌ನ ನೈಜ ಚಿತ್ರಣವನ್ನು ಸ್ಪರ್ಧಿಗಳ ಮುಂದಿಟ್ಟಿದ್ದಾರೆ.

ಯಶಸ್‌ಗೆ ಗೆಲುವು ನೀಡಿದ್ದೇ ವಿವಾದಕ್ಕೆ ಕಾರಣ!

ಈ ವಾರದ ಪ್ರಮುಖ ಆಟವಾದ 'ಸ್ವಯಂವರ' ಟಾಸ್ಕ್‌ನಲ್ಲಿ ಯಶಸ್ ಮತ್ತು ಗಗನ್ ಎರಡು ತಂಡಗಳಾಗಿ ಸ್ಪರ್ಧಿಸಿದ್ದರು. ಆಟದ ಅಂತ್ಯದಲ್ಲಿ ಇಬ್ಬರಲ್ಲಿ ಒಬ್ಬರನ್ನು ವಿಜೇತರೆಂದು ಆಯ್ಕೆ ಮಾಡುವ ಜವಾಬ್ದಾರಿ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರ ಮೇಲಿತ್ತು. ಅದರಂತೆ ಅವರು ಯಶಸ್ ಅವರನ್ನು ಗೆದ್ದ ಸ್ಪರ್ಧಿ ಎಂದು ಘೋಷಿಸಿದ್ದರು.

ಇದನ್ನೂ ಓದಿ: Bigg Boss Kannada 13: ಸಮುದಾಯವೊಂದನ್ನು ಹೀಯಾಳಿಸುವಂತಹ ಪದ ಬಳಕೆ; ಕ್ಷಮೆ ಕೇಳಿದ ಯಶಸ್

ಆದರೆ ಈ ನಿರ್ಧಾರ ಮನೆಯೊಳಗೆ ಎಲ್ಲರಿಗೂ ಒಪ್ಪಿಗೆಯಾಗಿರಲಿಲ್ಲ. ಯಶಸ್ ಜೊತೆಗಿನ ಆತ್ಮೀಯತೆಯಿಂದಾಗಿ ಸೌಂದರ್ಯಾ ಅವರಿಗೆ ಹೆಚ್ಚು ಒಲವು ತೋರಿಸಿದ್ದಾರೆ. ಹೀಗಾಗಿ ಗಗನ್‌ಗೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರವೇ ಬಳಿಕ ಬಿಗ್ ಬಾಸ್ ಮನೆಯ ಪ್ರಮುಖ ಚರ್ಚೆಯಾಗಿ ಮಾರ್ಪಟ್ಟಿತ್ತು.



ಸೌಂದರ್ಯಾ ಬಯಾಸ್ಡ್ ಆಗಿದ್ದರಾ? ಸುದೀಪ್ ಪ್ರಶ್ನೆ!

ವಾರದ ಪಂಚಾಯಿತಿಯಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡ ಕಿಚ್ಚ ಸುದೀಪ್, ನೇರವಾಗಿಯೇ ಸ್ಪರ್ಧಿಗಳನ್ನು ಪ್ರಶ್ನಿಸಿದರು. 'ಸೌಂದರ್ಯಾ ನಿಜವಾಗಿಯೂ ಬಯಾಸ್ಡ್ ಆಗಿದ್ದರಾ?' ಎಂಬ ಪ್ರಶ್ನೆ ಮನೆಯವರಲ್ಲಿ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿತು.

ಈ ವೇಳೆ ಧನುಷ್ ಮಾತನಾಡಿ, ಯಶಸ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ತನಗೆ ಮೊದಲಿನಿಂದಲೂ ಇತ್ತು ಎಂದು ಹೇಳಿದರು. ಮತ್ತೊಂದೆಡೆ ಆಸಿಯಾ, ಸೌಂದರ್ಯಾ ಅವರ ನಿರ್ಧಾರದಲ್ಲಿ ಪಕ್ಷಪಾತವಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೌಂದರ್ಯಾ, ಟಾಸ್ಕ್ ನಡೆಯುವ ಸಂದರ್ಭದಲ್ಲೇ ಗಗನ್ ಸೋಲನ್ನು ಒಪ್ಪಿಕೊಂಡಂತೆ ವರ್ತಿಸುತ್ತಿದ್ದರು. ಅವರ ತಂಡದಿಂದ ಗೆಲ್ಲುವ ಪ್ರಯತ್ನ ಕಂಡುಬರಲಿಲ್ಲ. ಹೀಗಾಗಿ ಯಶಸ್ ತಂಡವೇ ಉತ್ತಮ ಪ್ರದರ್ಶನ ನೀಡಿದೆ ಎಂದು ತಮಗೆ ಅನಿಸಿತ್ತು ಎಂಬ ಸ್ಪಷ್ಟನೆ ನೀಡಿದರು.

ಗಗನ್ ತಂಡದ ಆಟದ ಅಸಲಿ ಮುಖ ಬಯಲು ಮಾಡಿದ ವಿಟಿ!

ಸ್ಪರ್ಧಿಗಳ ವಾದ-ಪ್ರತಿವಾದಗಳ ನಡುವೆಯೇ ಸುದೀಪ್ ಅವರು ಟಾಸ್ಕ್‌ಗೆ ಸಂಬಂಧಿಸಿದ ವಿಡಿಯೋ ತುಣುಕನ್ನು ಪ್ರದರ್ಶಿಸಿದರು. ಈ ವಿಡಿಯೋದಲ್ಲಿ ಗಗನ್ ತಂಡದ ಆಟಗಾರರು ನಿರೀಕ್ಷಿತ ಮಟ್ಟದ ಪ್ರಯತ್ನ ಮಾಡದಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ತಂಡದೊಳಗೆ ಗೆಲ್ಲುವ ಉತ್ಸಾಹ ಮತ್ತು ಪರಸ್ಪರ ಬೆಂಬಲದ ಕೊರತೆಯೂ ಎದ್ದು ಕಾಣುತ್ತಿತ್ತು.

ಇದನ್ನು ಗಮನಿಸಿದ ಸುದೀಪ್, ಆಟ ನಡೆಯುವಾಗಲೇ ಹಿಂದೆ ಸರಿದುಕೊಂಡು, ಫಲಿತಾಂಶದ ನಂತರ ಮಾತ್ರ ನಿರ್ಧಾರದ ಬಗ್ಗೆ ಪ್ರಶ್ನಿಸುವುದು ಎಷ್ಟು ಸರಿ ಎಂದು ಗಗನ್ ಅವರನ್ನು ಪ್ರಶ್ನಿಸಿದರು.

ವಿಡಿಯೋ ಸಾಕ್ಷ್ಯವನ್ನು ಪರಿಶೀಲಿಸಿದ ಬಳಿಕ ಸುದೀಪ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು. ಯಶಸ್ ತಂಡದವರು ಟಾಸ್ಕ್‌ನಲ್ಲಿ ಗೆಲ್ಲಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಮತ್ತೊಂದೆಡೆ ಗಗನ್ ತಂಡದಿಂದ ನಿರೀಕ್ಷಿತ ಮಟ್ಟದ ಸಹಕಾರ ಸಿಕ್ಕಿರಲಿಲ್ಲ. ಹೀಗಾಗಿ ಯಶಸ್ ಅವರನ್ನು ವಿಜೇತರೆಂದು ಆಯ್ಕೆ ಮಾಡಿರುವ ಸೌಂದರ್ಯಾ ಅವರ ನಿರ್ಧಾರದಲ್ಲಿ ತಪ್ಪಿಲ್ಲ ಎಂಬುದನ್ನು ತಿಳಿಸಿದರು.

ಇದನ್ನೂ ಓದಿ: Bigg Boss Kannada 13: ಬೆನ್ನಹಿಂದೆ ಚಾಕು ಹಾಕಿದ ಯಶಸ್; ಅತ್ತ ಸೌದರ್ಯ ಅಸಲಿ ಬಣ್ಣ ರಿವೀಲ್‌!

ಒಟ್ಟಿನಲ್ಲಿ, ಈ ವಾರದ ಪಂಚಾಯಿತಿಯಲ್ಲಿ ಸೌಂದರ್ಯಾ ಶೆಟ್ಟಿ ಅವರ ನಿರ್ಧಾರಕ್ಕೆ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಸ್ವಯಂವರ ಟಾಸ್ಕ್‌ನ ಗೆಲುವಿನ ಸುತ್ತ ಎದ್ದಿದ್ದ ವಿವಾದಕ್ಕೆ ಸ್ಪಷ್ಟನೆ ಸಿಕ್ಕಿದೆ.