ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಕ್ಯಾಪ್ಟನ್ಸಿ ಓಟದಿಂದ ಔಟ್‌; ಆಸಿಯಾ ಪರ ನಿಂತ ಸೌಂದರ್ಯ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಒಂಟಿ VS ಜಂಟಿಗಳ ನಡುವೆ ಟಾಸ್ಕ್ ಶುರುವಾಗಿದೆ. ತಂಡಗಳ ನಡುವೆಯೇ ಅಸಮಾಧಾನ ಭುಗಿಲೆದ್ದಿದೆ. ಮೊದಲಿಗೆ Puzzle ಪೈಪೋಟಿ ಎನ್ನುವ ಟಾಸ್ಕ್ ನೀಡಲಾಗಿದೆ. ಸ್ವತಂತ್ರವಾಗಿ ಆಡುವ ಸಾಮರ್ಥ್ಯ ಇರುವವರು ಯಾರು? ಇಲ್ಲದವರು ಯಾರು ಎಂದು ಕ್ಯಾಪ್ಟನ್ ಧನುಷ್ ತೀರ್ಮಾನಿಸಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಈ ಬಾರಿ ಅತ್ಯಂತ ಕಠಿಣವಾದ ಟಾಸ್ಕ್ ಒಂದನ್ನು ನೀಡಲಾಗಿದೆ. ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುತ್ತಾ, ಸಮತೋಲನ ಕಾಯ್ದುಕೊಂಡು ಸಾಗಬೇಕು.

ಕ್ಯಾಪ್ಟನ್ಸಿ ಓಟದಿಂದ  ಔಟ್‌; ಆಸಿಯಾ ಪರ ನಿಂತ ಸೌಂದರ್ಯ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 14, 2026 7:12 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಒಂಟಿ VS ಜಂಟಿಗಳ ನಡುವೆ ಟಾಸ್ಕ್ ಶುರುವಾಗಿದೆ. ತಂಡಗಳ ನಡುವೆಯೇ ಅಸಮಾಧಾನ ಭುಗಿಲೆದ್ದಿದೆ. ಮೊದಲಿಗೆ Puzzle ಪೈಪೋಟಿ ಎನ್ನುವ ಟಾಸ್ಕ್ ನೀಡಲಾಗಿದೆ. ಸ್ವತಂತ್ರವಾಗಿ ಆಡುವ ಸಾಮರ್ಥ್ಯ ಇರುವವರು ಯಾರು? ಇಲ್ಲದವರು ಯಾರು ಎಂದು ಕ್ಯಾಪ್ಟನ್ ಧನುಷ್ (Captain Dhanuh) ತೀರ್ಮಾನಿಸಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಈ ಬಾರಿ ಅತ್ಯಂತ ಕಠಿಣವಾದ ಟಾಸ್ಕ್ ಒಂದನ್ನು ನೀಡಲಾಗಿದೆ. ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುತ್ತಾ, ಸಮತೋಲನ ಕಾಯ್ದುಕೊಂಡು ಸಾಗಬೇಕು.

ಎದುರಾಳಿ ತಂಡದ ಸದಸ್ಯರು ನೀಡುವ ಅಡೆತಡೆಗಳನ್ನು ತಪ್ಪಿಸಿಕೊಂಡು ಸ್ಪರ್ಧಿಗಳು ಸಾಗಬೇಕಿದೆ. ಈ ಕಠಿಣವಾದ ಟಾಸ್ಕ್‌ನಲ್ಲಿ ಈಜುಕೊಳದಲ್ಲಿ ಪಜಲ್ ಪೀಸ್ ಅನ್ನು ಜೋಡಿಸುವುದು ಕೂಡ ಕಷ್ಟಕರ ಆಗಿದೆ. ಒಂದರ ಹಿಂದೆ ಒಂದರಂತೆ ಎದುರಾಗುವ ಈ ಕಠಿಣ ಸವಾಲುಗಳಿಂದಾಗಿ ಮನೆಯ ಸ್ಪರ್ಧಿಗಳು ಹೈರಾಣಾಗಿದ್ದಾರೆ.

ಈ ಆಟದ ನಡುವೆ ಆಸಿಯಾ ಅವರ ಮುಖಕ್ಕೆ ಗಾಯವಾಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Bigg Boss Kannada 13: Puzzle ಪೈಪೋಟಿ; ಹೆಜ್ಜೆ ಹೆಜ್ಜೆಗೂ ಸವಾಲ್!

ಸೌಂದರ್ಯ ಗರಂ

ಮತ್ತೊಂದು ಕಡೆ ಟಾಸ್ಕ್‌ನಲ್ಲಿ ಸೋತ ಒಂಟಿ ಪಂಟರ್ಸ್ ತಂಡ ವಾರದ ಕ್ಯಾಪ್ಟನ್ಸಿ ಓಟದಿಂದ ಇಬ್ಬರು ಸದಸ್ಯರನ್ನು ಹೊರಗಿಡಬೇಕೆಂದು 'ಬಿಗ್ ಬಾಸ್' ಹೇಳಿದ್ದಾರೆ. ಇದರಿಂದ ಒಂಟಿ ಸದಸ್ಯರು ಒಮ್ಮತದಿಂದ ಆಸಿಯಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ಆಸಿಯಾ ಅವರು ಇನ್ನು ಸ್ವಲ್ಪ ಚೆನ್ನಾಗಿ ಆಡಬಹುದಿತ್ತು ಎಂದು ಪ್ರಶಾಂತ್ ತಮ್ಮ ಕಾರಣವನ್ನು ನೀಡಿದ್ದಾರೆ. ಇನ್ನು ಧನುಷ್ ಆಸಿಯಾ ಅವರು ಗಿವ್ ಅಪ್ ಮಾಡುತ್ತಿದ್ದರು' ಎಂದಿದ್ದಾರೆ. ಇದಕ್ಕೆ ಆಸಿಯಾ ನಾನು ಗಿವ್ ಅಪ್ ಮಾಡುತ್ತಿಲ್ಲವೆಂದಿದ್ದಾರೆ.

ಈ ವಿಚಾರಕ್ಕೆ ಎದುರಾಳಿ ತಂಡದ ಸೌಂದರ್ಯ ಗರಂ ಆಗಿದ್ದಾರೆ. 'ಆಟ ಆಡಿದವರನ್ನು ಗೇಮ್‌ನಿಂದ ಹೊರಗಿಡುವುದು ತಪ್ಪು. ನೀವು ಬಕ್ರಾ ಆಗಿರುವುದು. ಅವಳೊಬ್ಬಳು ಆರ್ಟಿಸ್ಟ್. ಅವರ ಮುಖಕ್ಕೆ ಗಾಯವಾಗಿದೆ. ನೀವೆಲ್ಲ ಸೇರಿ ಅವಳನ್ನು ಹೊರಗಿಟ್ಟಿದ್ದೀರಿ. ಅವಳ ಮುಖ ನೋಡಿ ಒಮ್ಮೆ ಎಂದು ಒಂಟಿ ತಂಡದ ವಿರುದ್ಧ ಕೂಗಾಡಿದ್ದಾರೆ.

ಈ ವಾರ ಪಾಯಿಂಟ್ಸ್ ಬಿಲ್ಲೆಗಳನ್ನು ಬಿಗ್ ಬಾಸ್ ನೀಡಿದೆ. ಇಡೀ ಮನೆಯನ್ನು ಎರಡು ತಂಡಗಳನ್ನಾಗಿ ಮಾಡಲಾಗಿದೆ. ಪ್ರತಿ ತಂಡದ ನಾಯಕ ಬಿಲ್ಲೆಗಳನ್ನು ಹಂಚಬೇಕು. ಈ ವೇಳೆ ಗಗನ್ ಅವರು 50 ಪಾಯಿಂಟ್ಸ್ ಪೈಕಿ ಗಾನವಿಗೆ 5 ಹಾಗೂ ಆಸಿಯಾಗೆ 8 ಪಾಯಿಂಟ್ಸ್ ನೀಡಿದರು. ಇದನ್ನು ಗಾನವಿ ಪ್ರಶ್ನೆ ಮಾಡಿದ್ದಾರೆ. ನನಗೆ ಬಂದಿರೋ ಪಾಯಿಂಟ್ಸ್ ಮೇಲೆ ಖುಷಿ ಇಲ್ಲ ಎಂದಿದ್ದಾರೆ.ಕಳೆದವಾರ ಉಸ್ತುವಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಮಾತು ಹೈಲೈಟ್‌ ಆಗಿತ್ತು.

ಇದನ್ನೂ ಓದಿ: Bigg Boss Kannada 13: ಸ್ನೇಹಕ್ಕೂ ಆಟಕ್ಕೂ ಸಮರ! ತಾಂಡವ್‌ಗೆ ಕೌಂಟರ್‌ ಕೊಟ್ಟ ಪ್ರಶಾಂತ್‌

ಪ್ರತಿ ವಿಷಯಕ್ಕೂ ಅರಚಾಡುವುದು ಸರಿ ಅಲ್ಲ. ನಾನು ಸೈಲೆಂಟ್ ಆಗಿದ್ದೇನೆ ಎಂದ ಮಾತ್ರಕ್ಕೆ ಅದು ನನ್ನ ವೀಕ್​ನೆಸ್ ಅಂದುಕೊಳ್ಳಬೇಡಿ. ಈ ಜಗಳ, ಕಿರುಚಾಟ ಬೇಡ ಎಂದೇ ನಾನು ಸೈಲೆಂಟ್ ಆಗಿದ್ದೇನೆ’ ಎಂದು ಆಸಿಯಾ ಹೇಳಿದ್ದಾರೆ.