Bigg Boss Kannada 13: ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!
Bigg Boss Kannada 13: ನಸಾಮನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದೆ ‘ಬಿಗ್ ಬಾಸ್’ ತಂಡ. ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಈ ಬಾರಿ ಅವರೇ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಸೆಟ್‌ನಲ್ಲೇ ವಿನಯ್ ವಿರುದ್ಧ ಗರಂ ಆಗಿದ್ದಾರೆ.
ಸಂಗೀತಾ ಶೃಂಗೇರಿ -
ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ (Agni Parikshe) ವೇದಿಕೆ ಸಜ್ಜಾಗಿದೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಜನಸಾಮನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದೆ ‘ಬಿಗ್ ಬಾಸ್’ ತಂಡ. ಸಂಗೀತಾ ಶೃಂಗೇರಿ (Sangeetha) ಮತ್ತು ವಿನಯ್ ಗೌಡ (Vinay Gowda) ಈ ಬಾರಿ ಅವರೇ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು (Nagative Comment) ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಸೆಟ್‌ನಲ್ಲೇ ವಿನಯ್ ವಿರುದ್ಧ ಗರಂ ಆಗಿದ್ದಾರೆ.
ಟ್ರೋಲ್ ಆದ ಸಂಗೀತಾ
ಸಂಗೀತಾ ಮೊದಲಿಗೆ ಜಡ್ಜ್ ಆಗಿ ಬಂದಿದ್ದೇ ತಪ್ಪು ಆಯ್ತು. ತುಂಬಾ ಟ್ರೋಲ್ ಮಾಡ್ತಿದ್ದಾರೆ. ವಿನಯ್ ನೀವು ನನ್ನ ಟ್ರೋಲ್‌ಗಳನ್ನು ಎಂಜಾಯ್ ಮಾಡ್ತಿದ್ದೀರಾ. ನಾನು ತುಂಬಾ ಹಾನೆಸ್ಟ್ ಆಗಿ ಹೇಳೋದೇ ತಪ್ಪಾಯ್ತಾ? ಬಿಗ್ ಬಾಸ್‌ಗೆ ಟಫ್ ಕಂಟೆಸ್ಟಂಟ್ ಬೇಕು ಅಂತ ಅಂದುಕೊಳ್ಳೋದೇ ತಪ್ಪಾ? ಅಂತ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Cocktail 2 OTT release: ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್!
ಅದಕ್ಕ ವಿನಯ್ ಪ್ರತಿಕ್ರಿಯಿಸಿ ‘ಬರೀ ನಿನ್ನಷ್ಟೇ ಅಲ್ಲ ಸಂಗೀತಾ, ನನ್ನ ಮೇಲೂ ಟ್ರೋಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್ ಓಪನ್ ಮಾಡಿದರೆ ಬರೀ ಇವೇ ಬರುತ್ತಿವೆ’ ಎಂದಿದ್ದಾರೆ. ವಿನಯ್ ಅವರು ಈ ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡು ನಗುತ್ತಿರುವುದನ್ನು ಕಂಡು ಸಂಗೀತಾ ಮತ್ತಷ್ಟು ಕೋಪಗೊಂಡಿದ್ದಾರೆ ಎಂದು ವಿನಯ್ ವಿರುದ್ಧ ಸಂಗೀತಾ ಗರಂ ಆಗಿ ಅಲ್ಲಿಂದ ತೆರಳಿದ್ದಾರೆ.ಇದಕ್ಕೆ ಎರಡನೇ ಪಾರ್ಟ್ ಕೂಡ ಬರಲಿದೆ ಎಂಬ ಮಾಹಿತಿ ನೀಡಲಾಗಿದೆ.
ಬಿಗ್ ಬಾಸ್ ಮನೆಯ ಸ್ಟಾರ್ ಕಂಟೆಸ್ಟಂಟ್ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್ ಗೌಡ ಅವರು ಬಿರುದು ಕೊಟ್ಟಿದ್ದಾರೆ.ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ. ಇವರಿಗೆ 20ವರ್ಷ ವಯಸ್ಸು ‘ಜೆನ್ ಝೀ’ ಅಂದ್ರೆ ಏನು ಅಂತ ಗೊತ್ತಿಲ್ಲದ ಮುಗ್ಧೆ. ಅದೇರೀತಿ ‘ಸ್ಟಾರ್ ಕಂಟೆಸ್ಟಂಟ್’ ಅಂತ ಬಿರುದು ಕೊಟ್ಟಿದ್ದಾರೆ. ಬ್ಯಾಡ್ಜ್ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 13: ‘ಬಿಗ್ ಬಾಸ್ ಅಗ್ನಿಪರೀಕ್ಷೆಗೆ’ ಸೆಲೆಕ್ಟ್ ಆದವರು ಇವರೇ; ಕನಸುಗಳಿಗೆ ಇಲ್ಲಿ age limit ಇಲ್ಲಪ್ಪೋ!
ಈ ಟಾಸ್ಕ್‌ಗಳನ್ನ ಪೂರ್ಣಗೊಳಿಸಲು ಸ್ಪರ್ಧಿಗಳು ಹರಸಾಹಸ ಪಡ್ತಿರೋದು ಪ್ರೋಮೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಅರ್ಹತೆ ಪಡೆಯುವವರು ಯಾರು? ಅನ್ನೋದೇ ಕುತೂಹಲ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.