ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಕುಮಾರಿಗೆ ಸುದೀಪ್ ಕೊಟ್ರು ತಕ್ಕ ತಿರುಗೇಟು; ಸ್ಪರ್ಧಿ ಗಪ್‌ ಚುಪ್‌!

Bigg Boss Kannada 13: ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರ ಮುಂದೆ ಸ್ಪರ್ಧಿಗಳ ಯಾವ ಕಾರ್ಡ್‌ ನಡೆಯೋದಿಲ್ಲ. ಅದರಲ್ಲೂ ತಾನು ಬುದ್ಧಿವಂತೆ ಅಂದುಕೊಂಡಿದ್ದ ಕುಮಾರಿಗೆ ಮಾತಿನಲ್ಲೇ ಚಮಕ್‌ ಕೊಟ್ಟಿದ್ದಾರೆ ಕಿಚ್ಚ ಸುದೀಪ್‌. ಶುಗರ್‌ಕೋಟಿಂಗ್ ಮಾಡಿ ಮಾತನಾಡಲ್ಲ ಎಂದು ತಮ್ಮದೇ ಶೈಲಿಯಲ್ಲಿ ಕುಮಾರಿ ಹೇಳಿದರು. ಅದಕ್ಕೆ ಕಿಚ್ಚ ಸುದೀಪ್‌ ಏನಂದ್ರು?

ಕುಮಾರಿಗೆ ಸುದೀಪ್ ಕೊಟ್ರು ತಕ್ಕ ತಿರುಗೇಟು; ಸ್ಪರ್ಧಿ ಗಪ್‌ ಚುಪ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 19, 2026 11:06 AM

ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ (kichcha sudeepa) ಅವರ ಮುಂದೆ ಸ್ಪರ್ಧಿಗಳ ಯಾವ ಕಾರ್ಡ್‌ ನಡೆಯೋದಿಲ್ಲ. ಅದರಲ್ಲೂ ತಾನು ಬುದ್ಧಿವಂತೆ ಅಂದುಕೊಂಡಿದ್ದ ಕುಮಾರಿಗೆ (Kumari) ಮಾತಿನಲ್ಲೇ ಚಮಕ್‌ ಕೊಟ್ಟಿದ್ದಾರೆ ಕಿಚ್ಚ ಸುದೀಪ್‌. ಶುಗರ್‌ಕೋಟಿಂಗ್ (Sugar Caoting) ಮಾಡಿ ಮಾತನಾಡಲ್ಲ ಎಂದು ತಮ್ಮದೇ ಶೈಲಿಯಲ್ಲಿ ಕುಮಾರಿ ಹೇಳಿದರು. ಅದಕ್ಕೆ ಕಿಚ್ಚ ಸುದೀಪ್‌ ಏನಂದ್ರು?

ಯಾರು ಬೆಸ್ಟ್‌?

ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸುದೀಪ್ ಅವರ ಎದುರು ಹಂಚಿಕೊಳ್ಳಬೇಕಿತ್ತು. ಈ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ, ತಾಂಡವ್ ಸೇರಿದಂತೆ ಇನ್ನೂ ಕೆಲವು ಮನೆ ಮಂದಿಯ ಬಗ್ಗೆ ಸುದೀಪ್ ಎದುರು ದೂರುಗಳ ಪಟ್ಟಿಯನ್ನೇ ಹೇಳಿದ್ರು.

ಇದನ್ನೂ ಓದಿ: Bigg Boss Kannada 13: ಕಿರೀಟ ತೊಟ್ಟು ಕಿಚ್ಚ ಸುದೀಪ್‌ ಎದುರು ʻದೊಡ್ಡವರೆಲ್ಲ ಜಾಣರಲ್ಲʼ ಎಂದ ಕುಮಾರಿ

ಕುಮಾರಿಗೆ ಕಿರೀಟ ಕೊಟ್ಟ ಗಾನವಿ, ಬಂದ ಕೆಲವೇ ದಿನಗಳಲ್ಲಿ ಆಟ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ದಡ್ಡರಂತ ಬಂದಾಗ ಫೊಟೋಗೆ ಇಂಕ್‌ ಹಾಕಬೇಕಿತ್ತು. ತಾಂಡವ್‌ಗೆ ಇಂಕ್‌ ಹಾಕಿದರು ಸೌಂದರ್ಯ. ತನ್ನನ್ನು ಸೇವ್‌ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೆಳಗೆ ಹಾಕುತ್ತಾರೆ ಎಂದಿದ್ದಾರೆ.ಇನ್ನು ತಾಂಡವ್‌ ಸರದಿ ಬಂದಾಗ, ಕುಮಾರಿಗೆ ತಾನು ಅವಕಾಶ ಕೊಟ್ಟೆ ಎಂದಿದ್ದಾರೆ ಅದಕ್ಕೆ ಕುಮಾರಿ ಇದ್ದರು, ಬರೀ ಮಾತಿಗೆ ಅಷ್ಟೇ ಹೇಳುತ್ತಾರೆ. ಸೌಂದರ್ಯಗೆ ಯಶಸ್‌ ಜೊತೆ ಆಡಬೇಕು, ಕೆಲವರಿಗೆ ಶಾಸ್ತ್ರಿ ಬೇಕು. ಯಾರೂ ಅವಕಾಶ ಕೊಟ್ಟಿಲ್ಲ. ಅದೇನೋ ಹೇಳ್ತಾರಲ್ಲ ದೊಡ್ಡವರೆಲ್ಲ ಜಾಣರಲ್ಲ ಎಂದಿದ್ದಾರೆ.

ಇಷ್ಟೆಲ್ಲ ಆದ ಬಳಿಕ ಸುದಿಪ್‌ ಇದ್ದವರು ನಿನ್ನೆ ಮೊನ್ನೆ ಬಂದ ಸ್ಪರ್ಧಿಗಳಿಗೆ ಕಿರೀಟ ಸಿಕ್ಕಿದೆ ಅಂತ ಹೇಳಿದರು. ಇಷ್ಟೆಲ್ಲ ಹೊಗಳಿದ ಬಳಿಕ ಕುಮಾರಿ ಮನೆಯಲ್ಲಿ ಸಿಂಪತಿ ಕಾರ್ಡ್ ಯೂಸ್ ಮಾಡ್ತಿದ್ದಾರೆ ಎಂಬ ಹೇಳಿಕೆಯನ್ನು ಸುದೀಪ್ ಹೇಳಿದರು. ಈ ಹೇಳಿಕೆಗೆ ಮತ್ತೋರ್ವ ಸ್ಪರ್ಧಿಯಾಗಿರೋ ಲಕ್ಷ್ಮೀ ಹೌದು ಎಂದು ಹೇಳುತ್ತಾರೆ. ಕುಮಾರಿ ಚಿಕ್ಕವಳು ಎಂದು ಹೇಳುತ್ತಾ ದಡ್ಡರಾಗುತ್ತಿದ್ದಾರೆ ಎಂದರು.

ಪ್ರತಿಕ್ರಿಯಿಸಿದ ಕುಮಾರಿ, ನಾನು ಏನು ಇದೆಯೋ ಅದನ್ನು ಹೇಳುತ್ತೇನೆ. ಯಾರನ್ನು ಮೆಚ್ಚಿಸಲು ಅಭಿಪ್ರಾಯಗಳನ್ನು ಮರೆ ಮಾಡಲ್ಲ. ಶುಗರ್‌ಕೋಟಿಂಗ್ ಮಾಡಿ ಮಾತನಾಡಲ್ಲ ಎಂದರು. ಮಾತಿನ ಮಧ್ಯೆ ಬಂದ ಸುದೀಪ್, ಹಾಗಾದ್ರೆ ಇಲ್ಲಿ ಯಾರು ಆ ರೀತಿ ಮಾತಾಡ್ತಾರೆ ಎಂದು ಪ್ರಶ್ನೆ ಮಾಡಿದರು.ಅಕ್ಕ-ಪಕ್ಕ ಕುಳಿತ ಸ್ಪರ್ಧಿಗಳನ್ನು ನೋಡಿ ಸಮಯ ತೆಗೆದುಕೊಂಡು ತಾಂಡವ್ ಹೆಸರು ಹೇಳಿದರು.

ಇದನ್ನೂ ಓದಿ: Bigg Boss kannada 13: ಬಿಗ್‌ ಬಾಸ್‌ ಕೊಟ್ಟ ಚಮಕ್‌ಗೆ ಥಂಡಾ ಹೊಡೆದ ಸ್ಪರ್ಧಿಗಳು

ಕುಮಾರಿ ಯೋಚಿಸಿ ಉತ್ತರ ನೀಡಿದ್ದಕ್ಕೆ ಸುದೀಪ್, ಇದು ಶುಗರ್‌ಕೋಟ್ ಅಲ್ಲವೇ? ನೀವು ಹೇಳುವಂತೆ ಆಕ್ಚುಲಿ ಎಂಬ ಪದ ಬಳಸಿ ತಾಂಡವ್ ಮಾತನಾಡಲ್ಲ ಎಂದು ಕುಮಾರಿಗೆ ನೇರವಾಗಿ ಹೇಳಿದರು.