ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ `ಅಗ್ನಿಪರೀಕ್ಷೆ'ಯ juries! ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ

Bigg Boss Kannada 13:ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ರತ್ನಾ ಚಂದ್ರಪ್ಪ, ಕಬಾಬ್ ಮಂಜು, ಚರಣ್ ಶೆಟ್ಟಿ ಹಾಗೂ ಜಿ.ಕೆ. ಪೂರ್ಣಿಮಾ ಅವರ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹೊಸ ಪ್ರೋಮೋ ಔಟ್‌ ಆಗಿದೆ.

ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ ʻಅಗ್ನಿಪರೀಕ್ಷೆʼಯ juries!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 17, 2026 1:57 PM

ಬಿಗ್​​ಬಾಸ್ ‘ಅಗ್ನಿಪರೀಕ್ಷೆ’ (Bigg Boss Agni parikshe ಆರಂಭವಾಗಿದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ರತ್ನಾ ಚಂದ್ರಪ್ಪ, ಕಬಾಬ್ ಮಂಜು, ಚರಣ್ ಶೆಟ್ಟಿ ಹಾಗೂ ಜಿ.ಕೆ. ಪೂರ್ಣಿಮಾ ಅವರ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹೊಸ ಪ್ರೋಮೋ (New Promo) ಔಟ್‌ ಆಗಿದೆ.

ಗಂಗಕ್ಕ ಹೈಡ್ರಾಮ

ಬಿಗ್ ಬಾಸ್ ವೇದಿಕೆ ಮೇಲೆ ಗಂಗಕ್ಕ ಹೈಡ್ರಾಮ ಮಾಡಿದ್ದಾರೆ. ತಮ್ಮ ಹ್ಯಾಪಿ ಬರ್ತ್‌ಡೇ ರೀಲ್ಸ್‌ ಮೂಲಕವೇ ವೈರಲ್‌ ಆಗಿರುವ ಗಂಗಾ ಕೂಡ ಬಿಗ್‌ಬಾಸ್‌ ಅಗ್ನಿಪರೀಕ್ಷೆಯ ವೇದಿಕೆ ಏರಿದ್ದಾರೆ. ಆದರೆ, ಅವರಿಗೆ ಬಿಗ್‌ಬಾಸ್‌ಗೆ ಹೋಗೋ ಅರ್ಹತೆಯೇ ಇಲ್ಲ ಎಂದು ಸಂಗೀತಾ ಶೃಂಗೇರಿ ಅವರಿಗೆ ಗೇಟ್‌ಪಾಸ್‌ ನೀಡಿರುವುದು ಕಂಡಿದೆ.

ಇದನ್ನೂ ಓದಿ: Ramayana trailer: ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್; ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕಿರುಚಾಡುವ ರೀಲ್ಸ್‌ನಿಂದಲೇ ಫೇಮಸ್‌ ಆಗಿರುವ ಗಂಗಾ ಜಡ್ಜ್‌ಗಳ ಗಮನಸೆಳೆಯಲು ಭಿನ್ನ-ವಿಭಿನ್ನ ಪ್ರಯತ್ನ ಮಾಡಿದರು. ನಾನು ಪಕ್ಕಾ ಎಂಟರ್‌ಟೇನ್‌ಮೆಂಟ್‌ ಕೊಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಮೇಡಮ್‌ ಎಂದು ವೇದಿಕೆಯಲ್ಲೇ ನೆಲದ ಮೇಲೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದರು. ನಿಮ್ಮ ಇಂಥ ಕ್ರಿಂಜ್‌ ವರ್ತನೆಗಳನ್ನು ನಾವು ಎಂಟರ್‌ಟೇನ್‌ಮೆಂಟ್‌ ಎಂದು ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಬಿಗ್‌ಬಾಸ್‌ನಲ್ಲಿ ಇಂಥ ನಡವಳಿಕೆಯ ವ್ಯಕ್ತಿ ಇರೋದನ್ನು ನಾವ ಬಯಸೋದಿಲ್ಲ ಎಂದು ಹೇಳುತ್ತಲೇ ಅವರನ್ನು ಶೋನಿಂದ ನೇರವಾಗಿ ರಿಜೆಕ್ಟ್‌ ಮಾಡಿದ್ದಾರೆ.

ಹೇಮಲತಾ ಜಯಣ್ಣ ಕಥೆ ಏನು?

ಮತ್ತೊಂದು ಕಡೆ ಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಅಪ್ಪಟ ಹಳ್ಳಿ ಪ್ರತಿಭೆ. ಲಕ್ಷಾಂತರ ಜನ ಫಾಲೋವರ್ಸ್‌ನ ಹೊಂದಿದ್ದಾರೆ. ಹೆಚ್ಚು ಜನರಿಗೆ ತಲುಪಿದ್ದು ಇಂಗ್ಲಿಷ್‌ನ ಬಿಲಿವರ್‌ ಹಾಡಿನ ಮೂಲಕ. ಸಖತ್‌ ಟ್ರೆಂಡ್‌ ಆಗಿರುವ ಈ ಹಾಡನ್ನ ಅದೇ ದಾಟಿಯಲ್ಲಿ ಹಾಡಿ, ಸೋಷಿಯಲ್‌ ಮೀಡಿಯಾ ವೀಕ್ಷಕರ ಮನ ಗೆದ್ದಿದ್ದರು. ಈಗ ಅವರಿಗೂಶೃತಿ ಮಾತ್ರ ಇಷ್ಟ ಎಂದಿದ್ದಾರೆ. ಉಳಿದವರು ರಿಜೆಕ್ಟ್‌ ಮಾಡಿರುವಂತಿದೆ.

ಎಪಿಸೋಡ್​​ನಲ್ಲಿ ಮೊದಲು ಬಂದ ಸ್ಪರ್ಧಿಗೆ, ಫೋನ್ ಮಾಡಿ ಕಾರಣವಿಲ್ಲದೆ ಉದ್ಯೋಗಕ್ಕೆ ರಾಜೀನಾಮೆ ಕೊಡು ಎಂದರು. ಆ ಯುವತಿ, ಜಡ್ಜ್​ಗಳು ಹೇಳಿದಂತೆ ಮಾಡಿದರು. ಆದರೂ ಅವರು ಆಯ್ಕೆ ಆಗಲಿಲ್ಲ. ಅಗ್ನಿಪರೀಕ್ಷೆಯ ರೂಲ್ಸ್ ಪ್ರಕಾರ, ಎಲ್ಲರೂ ಗ್ರೀನ್ ಕೊಟ್ಟರೆ ಸ್ಟಾರ್ ಕ್ಯಾಂಡಿಡೇಟ್, ಇಬ್ಬರು ಗ್ರೀನ್ ಕೊಟ್ಟು ಇಬ್ಬರು ರೆಡ್ ಕೊಟ್ಟರೆ ಹೋಲ್ಡ್, ಮತ್ತೆ ಅವಕಾಶ ಸಿಗುತ್ತದೆ. ಒಬ್ಬರು ಮಾತ್ರ ಗ್ರೀನ್ ಕೊಟ್ಟು ಮೂವರು ರೆಡ್ ಕೊಟ್ಟರೆ ಔಟ್. ಎಲ್ಲರೂ ರೆಡ್ ಕೊಟ್ಟರೆ ಸಹ ಔಟ್.

ಇದನ್ನೂ ಓದಿ: Bigg Boss kannada 13: ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

ಜ್ಯೂರಿಗಳ ಪರೀಕ್ಷೆ ಮುಗಿದ ನಂತರ ಆರಂಭವಾಗುವ ಎರಡನೇ ಸುತ್ತಿನಲ್ಲಿ ಅಂತಿಮ ತೀರ್ಮಾನ ವೀಕ್ಷಕರ ಕೈಯಲ್ಲಿದ್ದು, ಮತದಾನದ ಮೂಲಕ ಯಾರು ದೊಡ್ಮನೆ ಪ್ರವೇಶಿಸಬೇಕು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ.