Bigg Boss Kannada 12: ಸೀಕ್ರೆಟ್ ರೂಮ್ ಬಗ್ಗೆ ರಘುಗೆ ಸಿಕ್ತಾ ಸುಳಿವು? ಗಿಲ್ಲಿ ಬಳಿ ಹೇಳಿದ್ದೇನು?
Raghu: ಈ ವಾರ ಡಬಲ್ ಎಲಿಮಿನೇಶನ್ ಇರುತ್ತೆ ಅಂತ ಸ್ಪರ್ಧಿಗಳು ಯೋಚನೆ ಕೂಡ ಮಾಡಿರಲಿಲ್ಲ. ಆದ್ರೆ ಧ್ರುವಂತ್ ಅವರು ಎಲಿಮಿನೇಟ್ ಆಗ್ತಾರೆ ಅಂತ ಅಂದುಕೊಂಡಿದ್ದರು ಸ್ಪರ್ಧಿಗಳು. ಆದರೆ ಕೊನೆಗೆ ಆಗಿದ್ದೇ ಬೇರೆ. ರಕ್ಷಿತಾ ಅವರು ಮನೆಯಿಂದ ಆಚೆ ಹೋಗಿರೋದು ಕೆಲವು ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು. ಫಿನಾಲೆಗೆ ಹೋಗೋ ರಕ್ಷಿತಾ ಏಕಾಏಕಿ ಔಟ್ ಆಗ್ತಾರೆ ಅಂದ್ರೆ ಕೆಲವರಿಗೆ ನಂಬಲು ಅಸಾಧ್ಯವಾಗಿದೆ. ಇದೆಲ್ಲದರ ನಡುವೆ, ರಘುಗೆ ಒಂದು ಸುಳಿವು ಸಿಕ್ಕಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ(Bigg Boss Kannada 12) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಧ್ರುವಂತ್ (Dhruvanth Rakshitha) ಹಾಗೂ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸಿದ್ದಾರೆ. ರಕ್ಷಿತಾ ಅವರು ಮನೆಯಿಂದ ಆಚೆ ಹೋಗಿರೋದು ಕೆಲವು ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು. ಫಿನಾಲೆಗೆ ಹೋಗೋ ರಕ್ಷಿತಾ (Rakshitha Shetty) ಏಕಾಏಕಿ ಔಟ್ ಆಗ್ತಾರೆ ಅಂದ್ರೆ ಕೆಲವರಿಗೆ ನಂಬಲು ಅಸಾಧ್ಯವಾಗಿದೆ. ಇದೆಲ್ಲದರ ನಡುವೆ, ರಘುಗೆ ಒಂದು ಸುಳಿವು ಸಿಕ್ಕಿದೆ.
ಈ ವಾರ ಡಬಲ್ ಎಲಿಮಿನೇಶನ್ ಇರುತ್ತೆ ಅಂತ ಸ್ಪರ್ಧಿಗಳು ಯೋಚನೆ ಕೂಡ ಮಾಡಿರಲಿಲ್ಲ. ಆದ್ರೆ ಧ್ರುವಂತ್ ಅವರು ಎಲಿಮಿನೇಟ್ ಆಗ್ತಾರೆ ಅಂತ ಅಂದುಕೊಂಡಿದ್ದರು ಸ್ಪರ್ಧಿಗಳು. ಆದರೆ ಕೊನೆಗೆ ಆಗಿದ್ದೇ ಬೇರೆ. ಆದರೆ ಇದಲ್ಲ ಗಮನಿಸಿದ ರಘು ಅವರಿಗೆ ಎಲಿಮಿನೇಷನ್ ಫೇಕ್ ಇರಬಹುದು ಎಂದು ಸಂಶಯ ಮೂಡಿದೆ.
ಇದನ್ನೂ ಓದಿ: Bigg Boss Kannada 12: ವೀಕೆಂಡ್‌ನಲ್ಲಿ ಕೆಲವರಿಗೆ ಮಾತ್ರ ಸುದೀಪ್ ಬೈಯೋದ್ಯಾಕೆ? ಕೊಟ್ಟರು ಕಾರಣ
ಏನೋ ಟ್ವಿಸ್ಟ್ ಇದೆ!
ಗಿಲ್ಲಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ‘ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್ ಬರುತ್ತದೆ. ಬ್ಯಾಕ್ ಸ್ಟೇಜ್ ಇಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್ ಬಂದಿಲ್ಲ’ ಎಂದು ರಘು ಅವರು ಹೇಳಿದ್ದಾರೆ.
ರಘು ಅವರು ಹೇಳಿದ ಮಾತು ಕೇಳಿದ ಮೇಲೆ ಗಿಲ್ಲಿ ಅವರಿಗೂ ಹೌದು ಅನಿಸುತ್ತಿದೆ. ರಕ್ಷಿತಾ ವಾಪಸ್ ಬಂದಾಗ ಅವರೆಲ್ಲರೂ ಖುಷಿಪಡಲಿದ್ದಾರೆ. ಆದರೆ ಧ್ರುವಂತ್ ವಾಪಸ್ ಬರಬಾರದು ಎಂದು ರಜತ್ ಹೇಳಿದ್ದಾರೆ.
ಇನ್ನು ಸೀಕ್ರೆಟ್ ರೂಂನಲ್ಲಿ ಇದೆಲ್ಲವನ್ನು ನೋಡುತ್ತಿದ್ದಾರೆ ಧ್ರುವಂತ್ ರಕ್ಷಿತಾ, ರಘು, ಗಿಲ್ಲಿ ಮಾತಿಗೆ ರಕ್ಷಿತಾ ಭಾವುಕರಾಗುತ್ತಿದ್ದಾರೆ. ಆದರೆ ಧ್ರುವಂತ್ ಮಾತ್ರ ತಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿಕೊಳ್ಳುವವರ ನೋಡಿ ಕೋಪಗೊಂಡಿದ್ದಾರೆ.
am watching og🔥bb language. rakshita is so authentic one her emotional, laughable, pointing out words are so heart touching feel. 2 people are in secret room . kannada bb is reality one and tamil bb 👎unreal , cringe, fakeness #BiggBossTamil9 #BBK12 #BiggBossTamilSeason9 pic.twitter.com/PUmvK5yzR1
— Agira Nitesh தமிழன் (@NiteshThoughts) December 15, 2025
ಸೀಕ್ರೆಟ್ ರೂಮ್‌ನಲ್ಲಿ ಗಲಾಟೆ
ಧ್ರುವಂತ್ ಹಾಗೂ ರಕ್ಷಿತಾ ಜಗಳ ಮಿತಿ ಮೀರುತ್ತಿದೆ. ನಿನ್ನೆಯ ಕೆಲವು ಟಾಸ್ಕ್‌ನಲ್ಲಿಯೂ ಕೆಲವು ನಿರ್ಧಾರಗಳನ್ನು ತೆಗದುಕೊಳ್ಳುವ ಹಕ್ಕನ್ನು ಇವರಿಬ್ಬರಿಗೆ ನೀಡಿದ್ದರು ಬಿಗ್ ಬಾಸ್. ಇವರ ಅವತಾರ ಕಂಡು ಧ್ರುವಂತ್ ನಾಗವಲ್ಲಿ ಆಗಿ ಬದಲಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ನಂಗೆ ಒಂದು ಪ್ರಶ್ನೆ ಇದೆ. ಇಷ್ಟು ಸ್ಟೈಲ್ ಯಾಕೆ ಮಾಡ್ತೀರಾ ಅತ ಕೇಳಿದ್ದಾರೆ ರಕ್ಷಿತಾ. ಅದಕ್ಕೆ ಧ್ರುವಂತ್ ಅವರು ನಾನು ನನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.
ಬಿಗ್ ಬಾಸ್ ಕೂಡ ಯೋಚನೆ ಮಾಡ್ತಾ ಇದ್ದಾರೆ. ನಿಮ್ಮನ್ನು ಸೀಕ್ರೆಟ್ ರೂಂಗೆ ಹಾಕಿ ತಪ್ಪಾಯ್ತು ಅಂತ ರಕ್ಷಿತಾ ಹೇಳಿದ್ದಾರೆ.ನಿನ್ನ ಅಟಿಟ್ಯುಡ್, ನೀನು ಆಡುವ ರೀತಿ, ನೀನು ಒಳ್ಳೆಯದಕ್ಕೆ ಹೇಳಿದರೂ ಅದೇನೋ ಸನ್ನೆ ಮಾಡಿ ತೋರಿಸುತ್ತೀಯಾ ಅಂತ ವ್ಯಂಗ್ಯ ಮಾಡಿದ್ದಾರೆ. ಅದಕ್ಕೆ ರಕ್ಷಿತಾ, ಫೋಟೇಜ್ ಬೇಕಾ? ಅಂತ ಪ್ರಶ್ನೆ ಇಟ್ಟು ಧ್ರುವಂತ್ ಅವರನ್ನೇ ಇಮಿಟೇಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸೀಕ್ರೆಟ್ ರೂಮಲ್ಲಿ ಧ್ರುವಂತ್ ಸಣ್ಣ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಕೆಂಡ!
ಕಾಪಿ ಕ್ಯಾಟ್, ರಕ್ಷಿತಾ ಆಗಲಿಕ್ಕೆ ಹೋಗ್ತಾ ಇದ್ದೀರಾ? ಅಂತ ಕೂಗಾಡಿದ್ದಾರೆ. ಇನ್ನು ಧ್ರುವಂತ್ ಕೂಡ ಕಾಲು ತೋರಿಸಿ, ಅತ್ಯಂತ ಅತಿರೇಕ ವರ್ತನೆ ತೋರಿದ್ದಾರೆ.