ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OG Movie: ಹಿಟ್‌ ಸಿನಿಮಾ ಕೊಟ್ಟ ಡೈರೆಕ್ಟರ್‌ಗೆ ಐಷಾರಾಮಿ ಕಾರು ಗಿಫ್ಟ್‌ ನೀಡಿದ‌ ಡಿಸಿಎಂ ಪವನ್‌ ಕಲ್ಯಾಣ್; ಇದರ ಬೆಲೆ ಎಷ್ಟು ಗೊತ್ತಾ?

They Call Him OG Movie: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು 'They Call Him OG' ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಸುಜೀತ್‌ಗೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪವನ್ ಕಲ್ಯಾಣ್ ತಮ್ಮ ವೃತ್ತಿಜೀವನದಲ್ಲಿ ನಿರ್ದೇಶಕರೊಬ್ಬರಿಗೆ ಇಷ್ಟು ದುಬಾರಿ ಗಿಫ್ಟ್ ನೀಡುತ್ತಿರುವುದು ಇದೇ ಮೊದಲು.

ಅಬ್ಬಬ್ಬಾ! ಡೈರೆಕ್ಟರ್‌ಗೆ ದುಬಾರಿ ಕಾರು ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!

-

Avinash GR
Avinash GR Dec 16, 2025 3:07 PM

ʻಪವರ್‌ ಸ್ಟಾರ್‌ʼ ಪವನ್‌ ಕಲ್ಯಾಣ್‌ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡುವುದರ ಜೊತೆಗೆ ಸಿನಿಮಾರಂಗದಲ್ಲೂ ಸಕ್ರಿಯವಾಗಿದ್ದಾರೆ. ಈ ವರ್ಷ ಅವರ ಹರಿ ಹರ ವೀರ ಮಲ್ಲು ಸಿನಿಮಾವು ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ. ಆದರೆ ನಂತರ ಬಂದ ʻThey Call Him OGʼ ಸಿನಿಮಾವು ಪವನ್‌ಗೆ ಹೊಸ ಇಮೇಜ್‌ ತಂದುಕೊಟ್ಟಿತ್ತು. ಇದೀಗ ಈ ಚಿತ್ರದ ನಿರ್ದೇಶಕರಿಗೆ ದೊಡ್ಡ ಗಿಫ್ಟ್‌ ಸಿಕ್ಕಿದೆ. ಅದು ಕೂಡ ಪವನ್‌ ಕಡೆಯಿಂದಲೇ.

ಸುಜಿತ್‌ಗೆ ಸಿಕ್ತು ಲ್ಯಾಂಡ್‌ ರೋವರ್‌ ಕಾರು

ಹೌದು, ಪವನ್‌ ಕಲ್ಯಾಣ್‌ ಅವರು ʻThey Call Him OGʼ ಸಿನಿಮಾದ ನಿರ್ದೇಶಕ ಸುಜಿತ್‌ ಅವರಿಗೆ ದುಬಾರಿಯ ಬೆಲೆಯ ಲ್ಯಾಂಡ್‌ ರೋವರ್‌ ಡಿಫರೆಂಡರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪವನ್‌ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿರುವುದು. ಈ ನಡೆಯ ಮೂಲಕ ಅವರು ಎಲ್ಲರಿಗೂ ಅಚ್ಚರಿ ನೀಡಿದದ್ದಾರೆ.

Pawan Kalyan Udupi Visit: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್‌ ಕಲ್ಯಾಣ್‌; ಪುತ್ತಿಗೆ ಶ್ರೀಗಳಿಂದ ʼಅಭಿನವ ಕೃಷ್ಣದೇವರಾಯʼ ಬಿರುದು ನೀಡಿ ಗೌರವ

ಸುಜೀತ್‌ ಹೇಳಿದ್ದೇನು?

ಪವನ್‌ ಕಲ್ಯಾಣ್‌ ಅವರು ತಮಗೆ ಐಷಾರಾಮಿ ಕಾರನ್ನು ಗಿಫ್ಟ್‌ ಆಗಿ ನೀಡಿದ್ದಕ್ಕೆ ಖುಷಿಯಾಗಿರುವ ಸುಜೀತ್‌ಅವರು, ಆ ಕಾರಿನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್‌ ಮಾಡಿರುವ ಸುಜೀತ್, "ಇದುವರೆಗೆ ನನಗೆ ಸಿಕ್ಕಿರುವ ಅತ್ಯುತ್ತಮ ಉಡುಗೊರೆ ಇದಾಗಿದೆ. ಪದಗಳಿಗೆ ಮೀರಿದಷ್ಟು ಉತ್ಸಾಹಭರಿತ ಮತ್ತು ಕೃತಜ್ಞನಾಗಿದ್ದೇನೆ. ನನ್ನ ಪ್ರೀತಿಯ ಒಜಿ ಕಲ್ಯಾಣ್ ಅವರ ಪ್ರೀತಿ ಮತ್ತು ಪ್ರೋತ್ಸಾಹ ನನಗೆ ಎಲ್ಲವನ್ನೂ ಅರ್ಥೈಸುತ್ತದೆ. ಬಾಲ್ಯದ ಅಭಿಮಾನಿಯಾಗಿರುವುದರಿಂದ ಈ ವಿಶೇಷ ಕ್ಷಣದವರೆಗೆ. ಎಂದೆಂದಿಗೂ ಋಣಿಯಾಗಿರುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ಸುಜೀತ್‌ ಹಂಚಿಕೊಂಡ ಪೋಸ್ಟ್‌



ಈ ಕಾರಿನ ಬೆಲೆ ಎಷ್ಟು? ವಿಶೇಷತೆಗಳೇನು?

ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ಆಫ್-ರೋಡ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು Terrain Response 2 ವ್ಯವಸ್ಥೆಯನ್ನು ಹೊಂದಿದ್ದು, ಮಣ್ಣು, ಮರಳು, ಹಿಮ ಅಥವಾ ಕಲ್ಲುಗಳ ಮೇಲೆ ಸುಲಭವಾಗಿ ಚಲಿಸುತ್ತದೆ. ಇದರ ಗ್ರೌಂಡ್ ಕ್ಲಿಯರೆನ್ಸ್ ಉತ್ತಮವಾಗಿದೆ. ಉತ್ತಮ ತಂತ್ರಜ್ಞಾನ ಹೊಂದಿರುವ ಇದು 11.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3D ಸರೌಂಡ್ ಕ್ಯಾಮೆರಾ, ಮೆರಿಡಿಯನ್ ಸೌಂಡ್ ಸಿಸ್ಟಮ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿದೆ. ಇದರ ಬೆಲೆಯುವ ಸುಮಾರು 3.10 ಕೋಟಿ ರೂ.ಗಳವರೆಗೂ ಇದೆ.

ಓಜಿ ಸಿನಿಮಾ ಬಗ್ಗೆ

ಪವನ್‌ ಮತ್ತು ಸುಜೀತ್‌ ಕಾಂಬಿನೇಷನ್‌ನಲ್ಲಿ ಬಂದ ಒಜಿ ಸಿನಿಮಾವು ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು. ಇಮ್ಮಾನ್‌ ಹಶ್ಮೀ, ಪ್ರಕಾಶ್‌ ರಾಜ್‌, ಪ್ರಿಯಾಂಕಾ ಮೋಹನ್‌ ಪ್ರಮುಖ ಪಾತ್ರದಲ್ಲಿದ್ದ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 250 ರಿಂದ 300 ಕೋಟಿ ರೂ. ಗಳವರೆಗೂ ಕಮಾಯಿ ಮಾಡಿತ್ತು.