Bigg Boss Kannada: ಮೂಲ ನಿಯಮ ಉಲ್ಲಂಘನೆ; ಕಾವ್ಯ ಫ್ಯಾಮಿಲಿಯನ್ನ ಮನೆಯಿಂದ ಆಚೆ ಕಳುಹಿಸಿದ ಬಿಗ್ ಬಾಸ್
Kavya Shaiva:ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ನಿಯಮಗಳಿಗೆ ಆದ್ಯತೆ ನೀಡುತ್ತಾರೆ. ಅದರಲ್ಲೂ ಮೂಲ ನಿಯಮ ಉಲ್ಲಂಘನೆ ಆದರೆ ಕಠಿಣ ಕ್ರಮ ಬಿಗ್ ಬಾಸ್ ತೆಗೆದುಕೊಳ್ಳುತ್ತಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆದಿದೆ. ಮನೆಯ ಎಲ್ಲ ಸದಸ್ಯರ ಮನೆಯವರು ಮನೆಗೆ ಬಂದಿದ್ದಾರೆ. ಹೊರ ಜಗತ್ತಿನಲ್ಲಿ ಏನಾಗ್ತಿದೆ ಅನ್ನೋದು ಅವರು ಹೇಳೋ ಹಾಗಿಲ್ಲ. ಆದರೆ ಕಾವ್ಯ ಅವರ ಅಮ್ಮ , ತಮ್ಮ ಈ ನಿಯಮವನ್ನು ಉಲ್ಲಂಘನೆ ಮಾಡಿದ ಪರಿಣಾಮ, ತಕ್ಷಣ ಮನೆಯಿಂದ ಆಚೆ ಕಳುಹಿಸಿದರು ಬಿಗ್ ಬಾಸ್.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಮೊದಲಿಗೆ ನಿಯಮಗಳಿಗೆ ಆದ್ಯತೆ ನೀಡುತ್ತಾರೆ. ಅದರಲ್ಲೂ ಮೂಲ ನಿಯಮ ಉಲ್ಲಂಘನೆ ಆದರೆ ಕಠಿಣ ಕ್ರಮ ಬಿಗ್ ಬಾಸ್ ತೆಗೆದುಕೊಳ್ಳುತ್ತಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ (Family Week) ನಡೆದಿದೆ. ಮನೆಯ ಎಲ್ಲ ಸದಸ್ಯರ ಮನೆಯವರು ಮನೆಗೆ ಬಂದಿದ್ದಾರೆ. ಹೊರ ಜಗತ್ತಿನಲ್ಲಿ ಏನಾಗ್ತಿದೆ ಅನ್ನೋದು ಅವರು ಹೇಳೋ ಹಾಗಿಲ್ಲ. ಆದರೆ ಕಾವ್ಯ ಅವರ ಅಮ್ಮ , ತಮ್ಮ ಈ ನಿಯಮವನ್ನು ಉಲ್ಲಂಘನೆ ಮಾಡಿದ ಪರಿಣಾಮ, ತಕ್ಷಣ ಮನೆಯಿಂದ ಆಚೆ ಕಳುಹಿಸಿದರು ಬಿಗ್ ಬಾಸ್. ಹೀಗಾಗಿ ಕಾವ್ಯ ಶೈವ (Kavya Shaiva) ಕಣ್ಣೀರಿಟ್ಟಿದ್ದಾರೆ.
ಮೂಲ ನಿಯಮದ ಉಲ್ಲಂಘನೆ
ಹೊರಗಿನಿಂದ ಬಂದ ಕುಟುಂಬದವರು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಹೊರ ಜಗತ್ತಿನ ವಿಷಯಗಳನ್ನು ಇಲ್ಲಿ ಚರ್ಚೆ ಮಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಇದು ಎಲ್ಲರೂ ಪಾಲಿಸಬೇಕಾದ ಅಂಶವೂ ಆಗಿದೆ. ಆದರೆ ಕಾವ್ಯ ಅವರ ಬಳಿ ಗಿಲ್ಲಿ ಕುರಿತಾಗಿ ಸಹೋದರ ಹಾಗೂ ಅಮ್ಮ ಗುಟ್ಟಾಗಿ ಮಾತನಾಡಿದರು.
She was happiest during his Captain week, believing her family would come then.But it ended differently
— Kumar🐉🀄 (@Kumaraliaskumar) December 26, 2025
Here Kavya is crying and her mother’s silent pain.
While others enjoy family moments, hers ended too soon😟#BBK12 pic.twitter.com/ujGQaWZWNr
ಕಾವ್ಯ ಸಹೋದರ ಹೇಳಿದ್ದೇನು?
ತಮ್ಮ ಹೇಳಿದ್ದು ಹೀಗೆ. ನೋಡುವರಿಗೆ ನೀನು ಎಫರ್ಟ್ ಹಾಕುತ್ತದ್ದೀಯಾ ಅನ್ನಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್ ಲೆವೆಲ್ನಲ್ಲಿ ಇದೆ. ನಾಮಿನೇಷನ್ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು. ಇದಾದ ಬಳಿಕ ಬಿಗ್ ಬಾಸ್ ಒಂದು ವಾರ್ನಿಂಗ್ ಕೊಟ್ಟರು. ಹೊರಗಡೆ ವಿಚಾರ ಚರ್ಚಿಸುವಂತಿಲ್ಲ ಎಂದು. ಆದರೂ ಕಾವ್ಯ ಅವರು ಮಾತು ಮುಂದುವರಿಸಿದರು.
ಅಣ್ಣ ಅಣ್ಣ ಅನ್ನೋಕೆ ಹೋಗಬೇಡ
ಗಿಲ್ಲಿಯಿಂದ ಕಾವ್ಯಾ ಅಂತ ಹೇಳಿಸಿಕೊಳ್ಳುವುದು ನನಗೆ ಇಷ್ಟ ಇಲ್ಲಒಬ್ಬರನ್ನು ಕೆಳಗೆ ಇಟ್ಟು ಮಾತಾಡೋದು ಅವನ ಉದ್ದೇಶ ಆಗಿರಲ್ಲ. ಮಾತಿನ ಭರದಲ್ಲಿ ಹೇಳುತ್ತಾನೆ. ಅದನ್ನು ಕಟ್ ಮಾಡಲು ನಾನು ಅವನನ್ನು ನಾಮಿನೇಟ್ ಮಾಡಿದೆ. ಎಂದು ಕಾವ್ಯ ಅಂದರು. ‘ಗಿಲ್ಲಿಗೆ ಯಾವಾಗಲೂ ಅಣ್ಣ ಅಣ್ಣ ಅನ್ನೋಕೆ ಹೋಗಬೇಡ. ಅವನು ನಿನ್ನ ಫ್ರೆಂಡ್ ಎಂದು ಕಾವ್ಯಾ ಅವರ ತಾಯಿ ಹೇಳಿದರು. ನಿಮ್ಮಿಬ್ಬರ ಸ್ನೇಹ ಬ್ರೇಕ್ ಆಗದೇ ಬಂದಿದೆ ಹಾಗೇ ಇರಲಿ ಎಂದು ಕಾವ್ಯ ತಮ್ಮ ಹೇಳಿದರು.
ಇಷ್ಟೆಲ್ಲ ಆದ ಬಳಿಕ ಬಿಗ್ ಬಾಸ್ ಆದೇಶ ನೀಡಿದರು. ಹೊರ ಜಗತ್ತಿನಲ್ಲಿ ಏನೆಲ್ಲ ಆಗಿದೆ ಅದರ ಬಗ್ಗೆ ಚರ್ಚಿಸುವಂತಿಲ್ಲ. ಮೂಲ ನಿಯಮ ಉಲ್ಲಂಘನೆ ಆಗಿದೆ. ಕಾರ್ತಿಕ್, ಸಾವಿತ್ರಿ ಮನೆಯಿಂದ ಆಚೆ ಬರಬೇಕು ಎಂದು ಬಿಗ್ ಬಾಸ್ ಆದೇಶಿಸಿದರು.
ಇದನ್ನೂ ಓದಿ: Bigg Boss Kannada 12: ರಜತ್ ಪ್ರಕಾರ ಬಿಗ್ ಬಾಸ್ನಲ್ಲಿ ಅಶ್ವಿನಿ ಗೌಡ ಹೇಗೆ? ಗಿಲ್ಲಿ ಹೊಗಳಿದ `ಬುಜ್ಜಿ'!
ಇನ್ನು ಈ ವಾರ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದಾರೆ. ಫ್ಯಾಮಿಲಿ ವೀಕ್ʼನಲ್ಲಿ ಗಿಲ್ಲಿ ನಟನಿಗೆ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಹೆಚ್ಚಿನ ಬೆಂಬಲ ದೊರೆಯಿತು. ಈ ವಿಶೇಷ ವಾರದಲ್ಲಿ ಕುಟುಂಬ ಸದಸ್ಯರಿಗೆ ಕ್ಯಾಪ್ಟನ್ಸಿ ರೇಸ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ನೀಡಲಾಗಿತ್ತು. ಈ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಅತ್ಯಧಿಕ ವೋಟ್‌ಗಳನ್ನ ಪಡೆದು ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು.