ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಸಿಎಂ ವಿಜಯ್ ಪರ್ಸನಲ್ ವಿಷ್ಯ ಬಿಡಿ, ಧೈರ್ಯವಿದ್ದರೆ ಅವರ ಆಡಳಿತದ ಬಗ್ಗೆ ಮಾತಾಡಿ‌ʼ; ತ್ರಿಷಾ ಟಾರ್ಗೆಟ್‌ ಮಾಡಿದವರಿಗೆ ನಟಿ ಸಂಜನಾ ಗಲ್ರಾನಿ ಸವಾಲು!

ತಮಿಳುನಾಡು ಸಿಎಂ ವಿಜಯ್ ಅವರ ಖಾಸಗಿ ಬದುಕನ್ನು ಗುರಿಯಾಗಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ನಟಿ ಸಂಜನಾ ಗಲ್ರಾನಿ ಖಡಕ್ ಸವಾಲೆಸೆದಿದ್ದಾರೆ. ಆಡಳಿತದಲ್ಲಿ ಲೋಪ ಹುಡುಕಲಾಗದೆ ನಟಿ ತ್ರಿಷಾ ಹೆಸರನ್ನು ಎಳೆದು ತೇಜೋವಧೆ ಮಾಡುವುದು ಹೇಡಿತನ ಎಂದು ಅವರು ಹೇಳಿದ್ದಾರೆ.

‌ʻವಿಜಯ್ ಪರ್ಸನಲ್ ವಿಷ್ಯ ಬಿಡಿ, ಆಡಳಿತದ ಬಗ್ಗೆ ಮಾತಾಡಿʼ; ನಟಿ ಸಂಜನಾ ಗರಂ!

-

Avinash GR
Avinash GR Aug 20, 2026 8:18 PM

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ, ವಿಜಯ್ ಹಾಗೂ ನಟಿ ತ್ರಿಷಾ ನಡುವಿನ ಸಂಬಂಧದ ಕುರಿತು ಕೆಲ ರಾಜಕೀಯ ನಾಯಕರು ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿರುವುದನ್ನು ಅವರು ಖಂಡಿಸಿದ್ದಾರೆ.

ವೈಯಕ್ತಿಕ ತೇಜೋವಧೆಗೆ ಸಂಜನಾ ಆಕ್ಷೇಪ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಭಾಗವಹಿಸಿ, ಮುಖ್ಯಮಂತ್ರಿ ವಿಜಯ್‌ ಅವರ ಕುಟುಂಬದೊಂದಿಗೆ ಮುಂಚೂಣಿಯಲ್ಲಿ ಕುಳಿತಿದ್ದು ಮತ್ತು ವಿಜಯ್‌ ಅವರಿಗೆ ಗೌರವ ಸಲ್ಲಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಕೆಲ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಜನಾ, "ವೃತ್ತಿಪರವಾಗಿ ಮತ್ತು ಆಡಳಿತಾತ್ಮಕವಾಗಿ ವಿಜಯ್ ಅವರಲ್ಲಿ ಯಾವುದೇ ಲೋಪದೋಷಗಳು ಕಾಣುತ್ತಿಲ್ಲ. ಅದಕ್ಕಾಗಿಯೇ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ" ಎಂದಿದ್ದಾರೆ.

ಉತ್ತಮ ಆಡಳಿತ ವೈಖರಿ

"ವಿಜಯ್‌ ಅವರ ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ತೇಜೋವಧೆ ಮಾಡುತ್ತಿರುವುದು ಅತ್ಯಂತ ಅಸಹ್ಯಕರ ಬೆಳವಣಿಗೆ. ಇಂತಹ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರು ಕೈಗೊಂಡ ಜನಪರ ಯೋಜನೆಗಳು ಮತ್ತು ಅವರ ಆಡಳಿತ ವೈಖರಿ ಉತ್ತಮವಾಗಿದೆ" ಎಂದು ನಟಿ ಸಂಜನಾ ಕೊಂಡಾಡಿದ್ದಾರೆ.

Vijay Trisha: ತ್ರಿಶಾ ಜೊತೆಯಲ್ಲೇ ಬಂದ ಸಿಎಂ ವಿಜಯ್; ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಜೋಡಿ

ದೇಶಾದ್ಯಂತ ವ್ಯಕ್ತವಾಗುತ್ತಿರುವ ಮೆಚ್ಚುಗೆ

"ರಸ್ತೆ ಸಾರಿಗೆ, ಕುಡಿಯುವ ನೀರಿನ ಸಮಸ್ಯೆಗಳ ತ್ವರಿತ ಪರಿಹಾರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ನಾಣ್ಯ ನೀಡುವ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಯಾವುದೇ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಅವರ ತಂಡವು ನಿರಂತರವಾಗಿ ಶ್ರಮಿಸಿ ಪರಿಹಾರ ಒದಗಿಸುತ್ತಿದೆ. ಅವರ ಜನಪರ ಆಡಳಿತಕ್ಕೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ" ಎಂದು ಸಂಜನಾ ಹೇಳಿದ್ದಾರೆ.

Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ಮಹಿಳೆಯರ ಗೌರವಕ್ಕೆ ಧಕ್ಕೆ ತರಬೇಡಿ

ನಟಿ ತ್ರಿಷಾ ಸಮಾಜದಲ್ಲಿ ತಮ್ಮದೇ ಆದ ಗೌರವ ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ ಎಂದು ಹೇಳಿದ ಸಂಜನಾ, "ಅವರಿಬ್ಬರ ನಡುವಿನ ಸಂಬಂಧ ಅವರ ವೈಯಕ್ತಿಕ ವಿಚಾರ. ರಾಜಕೀಯ ಲಾಭಕ್ಕಾಗಿ ಮಹಿಳೆಯರನ್ನು ಗುರಿಯಾಗಿಸುವುದು ಮತ್ತು ಅವರ ವಿರುದ್ಧ ಅಸಭ್ಯ ಪದಗಳನ್ನು ಬಳಸುವುದು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವಿರೋಧಿಗಳಿಗೆ ಧೈರ್ಯವಿದ್ದರೆ ವಿಜಯ್ ಅವರ ಆಡಳಿತ, ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಚರ್ಚಿಸಲಿ" ಎಂದು ಸವಾಲು ಹಾಕಿದ್ದಾರೆ.