ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss: ಬಿಗ್​​ಬಾಸ್ ಮನೆಯಲ್ಲಿ ಭಾರಿ ಗಲಾಟೆ; ಪರಸ್ಪರ ಹೊಡೆದಾಡಿಕೊಂಡ ಸ್ಪರ್ಧಿಗಳು

ಬಿಗ್​​ಬಾಸ್ (Bigg Boss) ಮನೆಯಲ್ಲ ಯಾರ ಮೇಲೂ ಸಹ ಹಲ್ಲೆ ಮಾಡಬಾರದು, ಕೈ ಎತ್ತಬಾರದು ಎಂದು. ಒಂದೊಮ್ಮೆ ಹೀಗೆ ಯಾರ ವಿರುದ್ಧವಾದರೂ ಕೈ ಎತ್ತಿದರೆ ಕೂಡಲೇ ಆ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಕನ್ನಡ ಶೋನಲ್ಲಿ ಈ ಹಿಂದೆ ಹೀಗೆ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದವರನ್ನು ಎಲಿಮಿನೇಟ್ ಮಾಡಲಾಗಿದೆ. ಕೋಪದ ಭರದಲ್ಲಿ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಾಗಿ ಪ್ರಾರಂಭವಾದ ವಿಷಯವು ಬೇಗನೆ ನಿಯಂತ್ರಣ ತಪ್ಪಿ, ವಾಸಸ್ಥಳದಲ್ಲಿ ದೈಹಿಕ ಘರ್ಷಣೆಗೆ ಕಾರಣವಾಯಿತು.

ಬಿಗ್​​ಬಾಸ್ ಮನೆಯಲ್ಲಿ ಭಾರಿ ಗಲಾಟೆ; ಪರಸ್ಪರ ಹೊಡೆದಾಡಿಕೊಂಡ ಸ್ಪರ್ಧಿಗಳು

bigg boss -

Yashaswi Devadiga
Yashaswi Devadiga Nov 6, 2025 7:27 AM

ಬಿಗ್ ಬಾಸ್ ತಮಿಳು (Bigg Boss Tamil 9) ಸೀಸನ್ 9 ರ ಮನೆಯಲ್ಲಿ ಸ್ಪರ್ಧಿಗಳಾದ ಕಮರುದ್ದೀನ್ ಮತ್ತು ಪ್ರವೀಣ್ ರಾಜ್ ನಡುವೆ ಭಾರಿ ಹೊಡೆದಾಟವಾಗಿದೆ. ಚಾನೆಲ್ ಬಿಡುಗಡೆ ಮಾಡಿದ ಇತ್ತೀಚಿನ ಪ್ರೋಮೋದಲ್ಲಿ (Pomo) ಬಿಸಿಯಾದ ವಾದ ದೈಹಿಕ ವಾಗ್ವಾದಕ್ಕಾಗಿ ತಿರುಗಿಕೊಂಡಿತ್ತು. ಯಾರ ವಿರುದ್ಧವಾದರೂ ಕೈ ಎತ್ತಿದರೆ ಕೂಡಲೇ ಆ ಸ್ಪರ್ಧಿಯನ್ನು ಎಲಿಮಿನೇಟ್ (Eliminate) ಮಾಡಲಾಗುತ್ತದೆ. ಆದರೀಗ ತಮಿಳು (Tamil Bigg Boss) ಬಿಗ್‌ ಬಾಸ್‌ನಲ್ಲಿ ಇಂತದ್ದೇ ಘಟನೆ ಸಂಭವಿಸಿದೆ.

ಕೋಪದ ಭರದಲ್ಲಿ ಹೊಡೆದಾಟ

ದೃಶ್ಯಗಳ ಪ್ರಕಾರ, ಪ್ರವೀಣ್ ರಾಜ್ ನಿರಂತರವಾಗಿ ಕಮರುದ್ದೀನ್ ಅವರನ್ನು ಕೆರಳಿಸಿದ ನಂತರ ಜಗಳ ಪ್ರಾರಂಭವಾಯಿತು ಎಂದು ವರದಿಯಾಗಿದೆ, ಕೋಪದ ಭರದಲ್ಲಿ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಾಗಿ ಪ್ರಾರಂಭವಾದ ವಿಷಯವು ಬೇಗನೆ ನಿಯಂತ್ರಣ ತಪ್ಪಿ, ವಾಸಸ್ಥಳದಲ್ಲಿ ದೈಹಿಕ ಘರ್ಷಣೆಗೆ ಕಾರಣವಾಯಿತು.

ಇದನ್ನೂ ಓದಿ: Yash: ಟಾಕ್ಸಿಕ್‌ ಸಿನಿಮಾದಲ್ಲಿ ಅಭಿನಯ! ಯಶ್‌ ಹೊಗಳಿ ಈ ಬಾಲಿವುಡ್‌ ನಟಿ ಹೇಳಿದ್ದೇನು?



ಕಮರುದ್ಧೀನ್ ಗೆ ಟಾಂಗ್

ಪರಿಸ್ಥಿತಿ ಹದಗೆಡುತ್ತಿದ್ದಂತೆ, ಇತರ ಮನೆಯ ಸದಸ್ಯರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ತಮಿಳು ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಕಮುರುದ್ಧೀನ್ ಮತ್ತು ಪ್ರವೀಣ್ ರಾಜ್ ವಿರುದ್ಧ ಜಗಳ ಉಂಟಾಗಿದೆ. ಪ್ರವೀಣ್ ಯಾವುದೋ ವಿಚಾರಕ್ಕೆ ಕಮರುದ್ಧೀನ್ ಗೆ ಟಾಂಗ್ ಕೊಡುತ್ತಿದ್ದರು ಆದರೆ ಇದರಿಂದ ಸಿಟ್ಟಾದ ಕಮುರುದ್ಧೀನ್ ಏಕಾ-ಏಕಿ ಪ್ರವೀಣ್ ಮೇಲೆ ಏರಿ ಬಂದಿದ್ದಾರೆ. ಈ ಜಗಳದಲ್ಲಿ ಇತರೆ ಕೆಲ ಸ್ಪರ್ಧಿಗಳು ಸಹ ಪರಸ್ಪರ ಎಳೆದಾಡಿರುವುದು ಪ್ರೋಮೊನಲ್ಲಿ ಕಾಣಿಸಿದೆ ಮಾತ್ರವಲ್ಲದೆ ಕಮುರುದ್ಧೀನ್ ಅವರ ಧರಿಸಿದ್ದ ಅಂಗಿಯನ್ನು ಸಹ ಹರಿಯಲಾಗಿದೆ.

ಯಾರೆಲ್ಲ ನಾಮಿನೇಟ್‌?

ಸ್ಪರ್ಧಿಗಳಾದ ಗಾನ ವಿನೋದ್, ವಿಯಾನಾ, ಶಬರಿ, ವಿಕ್ರಮ್, ವಿಜೆ ಪಾರು, ಕಾಮರುದ್ದೀನ್, ಪ್ರವೀಣ್ ರಾಜ್, ಕೆಮಿ, ತುಷಾರ್, ದಿವಾಕರ್, ರಮ್ಯಾ ಮತ್ತು ಎಫ್ಜೆ ಎಲ್ಲರೂ ಡೇಂಜರ್ಸ್‌ ಝೋನ್‌ನಲ್ಲಿ ಇದ್ದಾರೆ. ಇತ್ತೀಚೆಗಷ್ಟೆ ನಾಲ್ಕು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ನಾಮಿನೇಷನ್ ಸಹ ಈ ಬಾರಿ ಜೋರಾಗಿ ಆಗಿದೆ. ಬರೋಬ್ಬರಿ 12 ಮಂದಿ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಪ್ರವೀಣ್ ಮತ್ತು ಕಮರುದ್ಧೀನ್ ಸಹ ಇದ್ದಾರೆ.

ಇದನ್ನೂ ಓದಿ: BBK 12: ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’; ಗಿಲ್ಲಿ- ಸೂರಜ್ ಮೇಲೆ ರಿಷಾ ಕೆಂಡ

ಮೈತ್ರಿಗಳು ಬದಲಾಗುತ್ತಿದ್ದು, ಭಾವನೆಗಳು ಉತ್ತುಂಗದಲ್ಲಿವೆ. ಬಿಗ್ ಬಾಸ್ ಶಾಂತಿಯನ್ನು ಪುನಃಸ್ಥಾಪಿಸಲು ಮಧ್ಯಪ್ರವೇಶಿಸುತ್ತಾರೆಯೇ ಅಥವಾ ಮನೆಯ ಸದಸ್ಯರು ಈ ಗೊಂದಲವನ್ನು ತಾವೇ ನಿಭಾಯಿಸಲು ಬಿಡುತ್ತಾರೆಯೇ ಎಂದು ಅಭಿಮಾನಿಗಳು ಈಗ ಕುತೂಹಲದಿಂದ ಕಾದಿದ್ದರು.