ʻಬಿಗ್ ಬಾಸ್ʼ ಖ್ಯಾತಿಯ ವಿಷ್ಣುಪ್ರಿಯಾಗೆ ವಿವಾದವೇ ವರವಾಯ್ತಾ? ಕೇಸ್ ದಾಖಲಾಗುತ್ತಿದ್ದಂತೆಯೇ ಹೆಚ್ಚಿತು ಆದಾಯ
Vishnu Priya Bhimineni Controversy: ತನ್ನ ಇನ್‌ಸ್ಟಾಗ್ರಾಮ್‌ನ 'ಎಕ್ಸ್‌ಕ್ಲೂಸಿವ್ ಕಂಟೆಂಟ್' ಮೂಲಕ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿ ವಿಷ್ಣುಪ್ರಿಯಾ ಭೀಮಿನೇನಿ ವಿರುದ್ಧ ವಿಜಯವಾಡದಲ್ಲಿ ದೂರು ದಾಖಲಾಗಿದೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಈ ಕಾನೂನು ಸಂಕಷ್ಟವು ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಆದಾಯ ಮೂರು ಪಟ್ಟು ಅಧಿಕವಾಗಿದೆ.
-
ಕಿರುತೆರೆ ನಟಿ, ಬಿಗ್‌ಬಾಸ್ ಖ್ಯಾತಿಯ ವಿಷ್ಣುಪ್ರಿಯಾ ಭೀಮಿನೇನಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಕಾರಂಣ, ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಅಂತ ಅವರ ಮೇಲೆ ದೂರು ದಾಖಲಾಗಿದೆ. ಈ ಕೇಸ್‌ನಿಂದಾಗಿ ಅವರಿಗೆ ಬೇಸರವಾಗಿರಬಹುದು, ಕಾನೂನು ಸಂಕಷ್ಟಕ್ಕೆ ಸಿಲುಕಿರಬಹುದು. ಆದರೆ ಆರ್ಥಿಕವಾಗಿ ಇದು ಅವರಿಗೆ ಲಾಭ ತಂದುಕೊಟ್ಟಿದೆ ಎಂದರೆ ನೀವು ನಂಬುತ್ತೀರಾ? ಖಂಡಿತಾ ನಂಬಲೇಬೇಕು! ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
ಏನಿದು ಕೇಸ್?
ತೆಲುಗು ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ವಿಷ್ಣುಪ್ರಿಯಾ ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಎಕ್ಸ್‌ಕ್ಲೂಸಿವ್ ಕಂಟೆಂಟ್' ವೀಕ್ಷಿಸಲು 390 ರೂ. ಸಬ್‌ಸ್ಕ್ರಿಪ್ಷನ್ ಶುಲ್ಕವನ್ನು ನಿಗದಿಪಡಿಸಿದ್ದಾರೆ. ಆದರೆ ಇವರು 'ಎಕ್ಸ್‌ಕ್ಲೂಸಿವ್ ಕಂಟೆಂಟ್' ಹೆಸರಿನಲ್ಲಿ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಈ ಸಂಬಂಧ ವಿಜಯವಾಡದಲ್ಲಿ ಎಐಎಸ್ಎಫ್ (AISF) ಸಂಘಟನೆ ಪೊಲೀಸರಿಗೆ ದೂರು ನೀಡಿದರು. ಆವರೆಗೂ ವಿಷ್ಣುಪ್ರಿಯಾ ಇನ್‌ಸ್ಟಾಗ್ರಾಮ್ ಖಾತೆಯ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 1892 ಇತ್ತು. ಅಂದರೆ, ಇದರಿಂದ ಅವರಿಗೆ ತಿಂಗಳಿಗೆ ಸಿಗುತ್ತಿದ್ದ ಆದಾಯ 7,37,880 ರೂಪಾಯಿ ಆಗಿತ್ತು.
Actress Ramya: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ 48 ಕಿಡಿಗೇಡಿಗಳ ಐಪಿ ಅಡ್ರೆಸ್ ಪತ್ತೆ, ಮುಂದಿದೆ ಮಾರಿಹಬ್ಬ!
ಇದೀಗ ದೂರು ದಾಖಲಾಗುತ್ತಿದ್ದಂತೆಯೇ, ನೆಟ್ಟಿಗರಲ್ಲಿ ಕುತೂಹಲ ಹೆಚ್ಚಾಯಿತು. ಅದರ ಪರಿಣಾಮ ವಿಷ್ಣುಪ್ರಿಯಾ ಅವರ ಇನ್‌ಸ್ಟಾಗ್ರಾಮ್ ಖಾತೆಯ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ದಿಢೀರನೇ ಏರಿಕೆ ಕಂಡಿದೆ. ಹೌದು, ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಈಗ 5600 ದಾಟಿದೆ. ತಿಂಗಳಿಗೆ ಈಗ ವಿಷ್ಣುಪ್ರಿಯಾ ಅವರ ಆದಾಯ ಈಗ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಕೇವಲ ಒಂದು ವಿವಾದದಿಂದಾಗಿ ಅವರ ಮಾಸಿಕ ಆದಾಯದಲ್ಲಿ ಬರೋಬ್ಬರಿ 14 ಲಕ್ಷ ರೂಪಾಯಿಗೂ ಅಧಿಕ ಏರಿಕೆ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.
ವಿಷ್ಣುಪ್ರಿಯಾ ಮೇಲಿರುವ ಆರೋಪ ಏನು?
ದುಡ್ಡಿಗಾಗಿ ಯುವಜನತೆಯನ್ನು ಹಾದಿ ತಪ್ಪಿಸುವಂತಹ ಅರೆನಗ್ನ ವಿಡಿಯೋಗಳನ್ನು ವಿಷ್ಣುಪ್ರಿಯಾ ಪೋಸ್ಟ್ ಮಾಡುತ್ತಿದ್ದಾರೆ, ತಕ್ಷಣ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಬ್ಲಾಕ್ ಮಾಡಬೇಕು ಎಂದು ಒತ್ತಾಯಿಸಿ ಎಐಎಸ್ಎಫ್ ರಾಜ್ಯ ಉಪಾಧ್ಯಕ್ಷ ಎಂ. ಸಾಯಿ ಕುಮಾರ್ ವಿಜಯವಾಡದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. "ಸೆಲೆಬ್ರಿಟಿಗಳಾಗಿ ಸಮಾಜಕ್ಕೆ ಮಾದರಿ ಆಗಬೇಕಾದವರು. ಆದರೆ ಇಂತಹ ಅಶ್ಲೀಲ ಪ್ರಚಾರ ಮಾಡುವುದು ಸರಿಯಲ್ಲ" ಎಂದು ಅವರು ಟೀಕಿಸಿದ್ದರು.
ಆದರೆ, ನೈತಿಕ ಮೌಲ್ಯಗಳನ್ನು ಕಾಪಾಡುವ ಉದ್ದೇಶದಿಂದ ಈ ದೂರು ನೀಡಲಾಗಿದ್ದರೂ, ಇದು ಪರೋಕ್ಷವಾಗಿ ವಿಷ್ಣುಪ್ರಿಯಾಗೆ ಉಚಿತ ಪ್ರಚಾರ ನೀಡಿದಂತಾಗಿದೆ. ಆರ್ಥಿಕವಾಗಿ ವಿಷ್ಣುಪ್ರಿಯಾ ಲಾಭ ಗಳಿಸಿದ್ದರೂ, ಇಂತಹ ಬೆಳವಣಿಗೆಗಳು ಸಮಾಜದ ನೈತಿಕ ಮೌಲ್ಯಗಳ ಮೇಲೆ ಹೊಡೆತ ನೀಡುತ್ತಿವೆ ಎಂಬ ವಾದಗಳೂ ಕೇಳಿಬರುತ್ತಿವೆ. ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರುವ ವಿಷ್ಣುಪ್ರಿಯಾ ಈ ಟೀಕೆಗಳ ಬಗ್ಗೆ ಈವರೆಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ನಟಿ ವಿಷ್ಣುಪ್ರಿಯಾ ಇನ್‌ಸ್ಟಾಗ್ರಾಮ್ ಖಾತೆ
ವಿಷ್ಣುಪ್ರಿಯಾ ಭೀಮಿನೇನಿ ಹಿನ್ನೆಲೆ
36 ವರ್ಷದ ವಿಷ್ಣುಪ್ರಿಯಾ ಭೀಮಿನೇನಿ ಅವರು ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 'ವಾಂಟೆಡ್ ಪಾಂಡುಗಾಡ್', 'ಚೆಕ್ ಮೇಟ್' ಮತ್ತು 'ದಿ 100' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುಪ್ರಿಯಾ, 'ದಯಾ' ಎಂಬ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದ ಅವರು 98 ದಿನಗಳ ಕಾಲ ಮನೆಯೊಳಗೆ ಇದ್ದರು. ಬಿಗ್ ಬಾಸ್ ನಂತರ ವಿಷ್ಣುಪ್ರಿಯಾ ಅವರ ಜನಪ್ರಿಯತೆ ಜಾಸ್ತಿಯಾಯಿತು.